* ಪ್ರಸ್ತುತ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಇತ್ತೀಚಿಗೆ ‘3’ ಲಕ್ಷ ಕೋಟಿ ರೂ.ಗೆ ಸಾಮಾಜಿಕ ಜಾಲತಾಣ ‘ಟ್ವೀಟರ್’ ಕಂಪನಿಯನ್ನು ಖರೀದಿಯನ್ನು ಮಾಡಿದ್ದಾರೆ, ಹಾಗೆಯೇ ‘ಟ್ವೀಟರ್’ ಕಂಪನಿಯ ಖರೀದಿಯ ಒಪ್ಪಂದ ಅಂತಿಮವಾಗಿದೆ ಎಂದು ಟ್ವೀಟರ್ ಘೋಷಿಸಿದೆ.
* ಎಲಾನ್ ಮಸ್ಕ್ ಅವರು 9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿದೊಡ್ಡ ಷೇರುದಾರರಾಗಿದ್ದರು ಮತ್ತು ಟ್ವೀಟರ್ ಖರೀದಿಗೆ ಇದೇ. ಏಪ್ರಿಲ್.14 ರಂದು 3 ಲಕ್ಷ ಕೋಟಿ ರೂ. ಹಣವನ್ನು ನೀಡುವದಾಗಿ ಹೇಳಿದ್ದರು, ಹಾಗೆಯೇ ಇವರ ಶೇ. 9 ಪಾಲನ್ನು ಬಿಟ್ಟು ಉಳಿದ 91 ರಷ್ಟು ಪ್ರತಿ ಷೇರಿಗೆ 4,150 ರೂ. ಹಣವನ್ನು ನೀಡುತ್ತೇನೆ ಎಂದಿದ್ದರು. ಆದರೆ ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಮಸ್ಕ್ ಹಾಗೂ ಟ್ವೀಟರ್ ನಡುವೆ ಒಪ್ಪಂದವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
* Twitter ಒಂದು ಅಮೇರಿಕನ್ ಮೈಕ್ರೋಬ್ಲಾಗಿಂಗ್ ಹಾಗೂ ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯಾಗಿದೆ, ಈ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ ಹಾಗೂ ಸಂವಹನ ಮಾಡುತ್ತಾರೆ. ಬಳಕೆದಾರರು ಟ್ವಿಟರ್‌ನೊಂದಿಗೆ ಬ್ರೌಸರ್ ಅಥವಾ ಮೊಬೈಲ್ ಫ್ರಂಟ್‌ಎಂಡ್ ಸಾಫ್ಟ್‌ವೇರ್ ಮೂಲಕ ಅಥವಾ ಅದರ API ಗಳ ಮೂಲಕ ಪ್ರೋಗ್ರಾಮಿಕ್ ಆಗಿ ಸಂವಹನ ನಡೆಸುತ್ತಾರೆ. ಪ್ರಸ್ತುತ 2020 ರ ಏಪ್ರಿಲ್ ಕ್ಕಿಂತ ಮೊದಲು ಸೇವೆಗಳನ್ನು SMS ಮೂಲಕ ಪಡೆಯಬಹುದಾಗಿತ್ತು. Twitter ಪ್ರಪಂಚದಾದ್ಯಂತ 25 ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದೆ.
* ಟ್ವಿಟರ್ ನ್ನು ಈ ಹಿಂದೆ 2006 ರ ಮಾರ್ಚ್ ನಲ್ಲಿ ಜಾಕ್ ಡಾರ್ಸೆ, ನೋಹ್ ಗ್ಲಾಸ್, ಬಿಜ್ ಸ್ಟೋನ್ ಹಾಗೂ ಇವಾನ್ ವಿಲಿಯಮ್ಸ್ ರಚಿಸಿದ್ದಾರೆ.
Subscribe to Updates
Get the latest creative news from FooBar about art, design and business.