* ಮಂಕಿಪಾಕ್ಸ್ ವೈರಾಣು ಪ್ರಕರಣಗಳು ನಿಧಾನವಾಗಿ ಜಗತ್ತಿನಾದ್ಯಂತ ಏರಿಕೆ ಆಗುತ್ತಿದೆ ಹಾಗು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.
* ಅದಕ್ಕಾಗಿ ಕೇಂದ್ರ ಸರ್ಕಾರವು ಗುರುವಾರ ಎಲ್ಲ ರಾಜ್ಯಗಳಿಗೆ ಅಗತ್ಯ ಸಿದ್ಧತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆಯನ್ನು ಕೊಟ್ಟಿದ್ದಾರೆ.
* ಇದರ ನಂತರ ಬಹುಶಿಸ್ತೀಯ ಉನ್ನತಮಟ್ಟದ ತಂಡವನ್ನು ಗುರುವಾರ ಕೇಂದ್ರ ಸರ್ಕಾರ ಕೇರಳದಾದ್ಯಂತ ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕಳುಹಿಸಿದೆ.
* ರಾಷ್ಟ್ರೀಯ ವೈರಾಣು ಸಂಸ್ಥೆಯ (ಎನ್‌ಐವಿ) ಪ್ರಯೋಗಾಲಯದ ವರದಿಯು ಸಂಯುಕ್ತ ಅರಬ್ ಸಂಸ್ಥಾನದಿಂದ ಕೇರಳಕ್ಕೆ ಮರಳಿರುವ 35 ವರ್ಷದ ವ್ಯಕ್ತಿಯಲ್ಲಿ ವೈರಾಣು ಇರುವುದನ್ನು ದೃಢಪಡಿಸಿದೆ.
* ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ 2022 ರ ಜನವರಿಯಿಂದ ಜೂನ್ 22 ರವರೆಗೆ ಜಗತ್ತಿನ 50 ದೇಶಗಳಲ್ಲಿ ಒಟ್ಟು 3413 ಪ್ರಕರಣಗಳು ವರದಿಯಾಗಿದ್ದು ಒಬ್ಬರು ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ.
* ಯೂರೋಪ್ನಲ್ಲಿ (ಶೇ 86 )ಮತ್ತು ಅಮೇರಿಕಾದಲ್ಲಿ (ಶೇ 11 )ಹೆಚ್ಚು ಪ್ರಕರಣ ವರದಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
* ಸುಮಾರು 9,200 ಪ್ರಕರಣಗಳು ಪತ್ತೆಯಾಗಿದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ,ಈವರೆಗೆ 63 ದೇಶಗಳಲ್ಲಿ ವೈರಾಣು ಕಾಣಿಸಿದೆ.
* ಅವರು ಪತ್ರದಲ್ಲಿ ಜಾಗತಿಕ ಒಟ್ಟಾರೆ ಮಟ್ಟದಲ್ಲಿ ಪ್ರಕರಣಗಳ ಅಪಾಯವನ್ನೂ ಮೌಲ್ಯಮಾಪನ ಮಾಡಲಾಗಿದೆ ಎಂದು ಹೇಳಲಾಗಿದೆ.
* ರೋಗಿಯನ್ನು ಪ್ರತೇಕವಾಗಿರಿಸುವುದು (ಗಾಯ, ಹುಣ್ಣುಗಳು,ಗುಣವಾಗುವವರೆಗೆ), ಹುಣ್ಣುಗಳಿಗೆ ಪೂರಕ ಚಿಕಿತ್ಸೆ ನೀಡುವುದು ನಿರಂತರ ಮೇಲ್ವಿಚಾರಣೆ ಅವರು ಮತ್ತು ಸಮಯೋಚಿತ ಚಿಕಿತ್ಸೆ ನೀಡುವುದು ಪ್ರಮುಖವಾಗಿದೆ ಏಕೆಂದರೆ ಈ ವೈರಾಣುವಿನಿಂದ ಮರಣ ತಡೆಗಟ್ಟಲು ಈ ಚಿಕಿತ್ಸೆ ಮಾಡಬೇಕಾಗಿದೆ.
* ಈ ವೈರಾಣುವಿನ ಇನ್ ಕ್ಯುಬೇಷನ್ ಅವಧಿಯು 21 ದಿನಗಳಾಗಿವೆ ರೋಗಿಗೆ ಹತ್ತಿರವಿರುವವರಿಗೆ ಈ ವೈರಾಣು ಹರಡುವ ಸಾಧ್ಯತೆ ಇರುತ್ತದೆ.