ಕೇಂದ್ರ ಲೋಕಸೇವಾ ಆಯೋಗದಿಂದ ಖಾಲಿ ಇರುವ ನಿರ್ದೇಶಕ, ಸಹಾಯಕ ನಿರ್ದೇಶಕ ಮತ್ತು ಉಪ ನಿರ್ದೇಶಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 01/09/2022 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ :
* ಸಹಾಯಕ ನಿರ್ದೇಶಕ – 02
* ಉಪ ನಿರ್ದೇಶಕ – 04
* ವೈಜ್ಞಾನಿಕ ಅಧಿಕಾರಿ – 01
* ಫೋಟೋಗ್ರಾಫಿಕ್ ಅಧಿಕಾರಿ – 01
* ಹಿರಿಯ ಫೋಟೋಗ್ರಾಫಿಕ್ ಅಧಿಕಾರಿ – 01
* ಕಿರಿಯ ವೈಜ್ಞಾನಿಕ ಅಧಿಕಾರಿ (ಭೌತಶಾಸ್ತ್ರ) – 01
* ಜೂನಿಯರ್ ಸೈಂಟಿಫಿಕ್ ಆಫೀಸರ್ (ನ್ಯೂಟ್ರಾನ್) – 01
* ಭಾರತೀಯ ಮಾಹಿತಿ ಸೇವೆಯ ಹಿರಿಯ ಶ್ರೇಣಿ – 22
* ಪ್ರಿನ್ಸಿಪಾಲ್ – 01
* ನಿರ್ದೇಶಕ – 01
* ಕಾರ್ಯನಿರ್ವಾಹಕ ಇಂಜಿನಿಯರ್/ಸರ್ವೇಯರ್ ಆಫ್ ವರ್ಕ್ಸ್ (ಸಿವಿಲ್) – 02
No. of posts: 37
Application Start Date: 15 ಆಗಸ್ಟ್ 2022
Application End Date: 1 ಸೆಪ್ಟೆಂಬರ್ 2022
Work Location: ಭಾರತದಾಧ್ಯಂತ
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೊಮಾ, 12 ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
* ವೃತ್ತಿಯಲ್ಲಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
Fee:
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ರೂ 25/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
* SC/ ST/ ಅಂಗವಿಕಲ/ ಮಹಿಳಾ ಅಭ್ಯರ್ಥಿ ಗಳಿಗೆ ಅರ್ಜಿ ಶುಲ್ಕ ದಿಂದ ವಿನಾಯಿತಿ ನೀಡಲಾಗಿದೆ.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಗರಿಷ್ಠ 30 ರಿಂದ 55 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 7 ನೇ ವೇತನ ಶ್ರೇಣಿ ಅನ್ವಯ 7 , 8 , 10 , 11 , 12 ನೇ ಹಂತದ ವೇತನ ನಿಗದಿಪಡಿಸಲಾಗಿದೆ.