* ಚಂಡೀಗಢದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಹೆಸರಿನಿಂದ ಮರುನಾಮಕಾರಣ ಮಾಡಲು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ನಿರ್ಧರಿಸಿದೆ.
* ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರು ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.
* ಈ ಹಿಂದೆ ಪಂಜಾಬ್ ವಿಧಾನಸಭೆಯು ವಿಮಾನ ನಿಲ್ದಾಣಕ್ಕೆ ‘ಶಹೀದ್-ಇ-ಅಜಮ್ ಸರ್ದಾರ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೊಹಾಲಿ’ ಎಂದು ಹೆಸರಿಸಲು ನಿರ್ಣಯವನ್ನು ಅಂಗೀಕರಿಸಿತ್ತು ಆದರೆ ಅದರ ಹೆಸರಿನಲ್ಲಿ ಮೊಹಾಲಿ ಇರುವುದರಿಂದ ಹರಿಯಾಣ ಅದನ್ನು ವಿರೋಧಿಸಿತು.
* ನಂತರ ಹರಿಯಾಣ ವಿಧಾನ ಸಭೆಯು ಟರ್ಮಿನಲ್ ಅನ್ನು ಮರುನಾಮಕರಣ ಮಾಡುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಿತು, ಆದರೆ ‘ಚಂಡೀಗಢ’ ಅನ್ನು ಬಳಸಿತು.