* ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದ್ದು, ಕಳೆದ ವರ್ಷ ಶೇ 7.2 ಏರಿಕೆ ಕಂಡಿದೆ.
* 2021 ರಲ್ಲಿ ದೇಶದಾದ್ಯಂತ 1,64,033 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
* 2020 ರಲ್ಲಿ 1,53,052 ಪ್ರಕರಣಗಳು ದಾಖಲಾಗಿದ್ದವು. ಅತಿ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ( 22,207 ) ಮೊದಲ ಸ್ಥಾನದಲ್ಲಿದೆ. ನಂತರದ ನಾಲ್ಕು ಸ್ಥಾನಗಳಲ್ಲಿ ತಮಿಳುನಾಡು ( 18,925 ), ಮಧ್ಯಪ್ರದೇಶ ( 14,965 ), ಪಶ್ಚಿಮ ಬಂಗಾಳ ( 13,500 ) ಮತ್ತು ಕರ್ನಾಟಕ ( 13,056 ) ರಾಜ್ಯಗಳಿವೆ.
* ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ, ( ಶೇ . 3.6 ) ಕೊನೆ ಸ್ಥಾನದಲ್ಲಿದೆ.
* ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ( 2,840 ), ಪುದುಚೇರಿ ( 504 ) ಮೊದಲೆರಡು ಸ್ಥಾನಗಳಲ್ಲಿವೆ.
* ವೃತ್ತಿ ಸಂಬಂಧಿತ, ಪ್ರತ್ಯೇಕತೆ, ಕಿರುಕುಳ, ಹಿಂಸೆ, ಕೌಟುಂಬಿಕ ಸಮಸ್ಯೆ, ಮಾನಸಿಕ ಅಸ್ವಸ್ಥತೆ, ಮದ್ಯ ವ್ಯಸನ, ಆರ್ಥಿಕ ನಷ್ಟದಂತಹ ಸಮಸ್ಯೆಗಳು ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಹೇಳಿದೆ.
Subscribe to Updates
Get the latest creative news from FooBar about art, design and business.
ಆತ್ಮಹತ್ಯೆ ಪ್ರಕರಣಗಳು : ಮಹಾರಾಷ್ಟ್ರಕ್ಕೆ ಪ್ರಥಮ ಸ್ಥಾನ, ಕರ್ನಾಟಕಕ್ಕೆ 5 ನೇ ಸ್ಥಾನ
Previous Articleಗೌತಮ್ ಅದಾನಿ ವಿಶ್ವದ 3 ನೇ ಶ್ರೀಮಂತ ವ್ಯಕ್ತಿ
Next Article ಅರ್ಥ ಗಂಗಾ : ನದಿಗಳ ಸುಸ್ಥಿರ ಅಭಿವೃದ್ಧಿಗೆ ಹೊಸ ಮಾದರಿ