* ಪ್ರಧಾನ ಮಂತ್ರಿಗಳ ಕೇರ್ಸ್ ಫಂಡ್ ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ, ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಸೇರಿದಂತೆ ಮೂರು ಮಂದಿ ಟ್ರಸ್ಟಿ ಮತ್ತು ಮೂರು ಮಂದಿ ಸಲಹೆಗಾರರನ್ನು ನೇಮಕ ಮಾಡಿಕೊಂಡಿರುವ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
* ಪಿ ಎಂ ಕೇರ್ಸ್ ಗೆ ಟ್ರಸ್ಟಿಗಳಾಗಿ ಟಾಟಾ ಅಧ್ಯಕ್ಷ ರತನ್ ಟಾಟಾ, ಲೋಕಸಭೆಯ ಮಾಜಿ ಉಪಾಧ್ಯಕ್ಷ ಕರಿಯಾ ಮುಂಡಾ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಟಿ ಥಾಮಸ್ ಅವರನ್ನು ಟ್ರಸ್ಟಿಯಾಗಿ ನಾಮ ನಿರ್ದೇಶನ ಮಾಡಲಾಗಿದೆ.
* ಇನ್ಪೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ , ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಮಾಜಿ ರಾಜೀವ್ ಮೆಹ್ರಿಷಿ, ಮತ್ತು ಟೀಚ್ ಫಾರ್ ಇಂಡಿಯಾ ಸಹ-ಸಂಸ್ಥಾಪಕ ಆನಂದ್ ಶಾ ಅವರನ್ನು ಸಲಹಾ ಮಂಡಳಿಗೆ ನಾಮ ನಿರ್ದೇಶನ ಮಾಡಲಾಗಿದೆ.
* ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ ಎಂದು ಕರೆಯಲಾಗುವ ಪಿಎಂ ಕೇರ್ಸ್ ನಿಧಿ ಅನ್ನು 2020 ರ ಮಾರ್ಚ್ 28 ರಂದು ಕೇಂದ್ರ ಸರ್ಕಾರ ಸ್ಥಾಪನೆ ಮಾಡಿದೆ.