* ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ VSHORAD ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
* ಇತ್ತೀಚೆಗೆ ಒಡಿಶಾದಲ್ಲಿ ಅತಿ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ (VSHORADS) ಕ್ಷಿಪಣಿಯ ಎರಡು ಪರೀಕ್ಷೆಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯು ಯಶಸ್ವಿಯಾಗಿ ನಡೆಸಿತು.
* DRDO ಸಂಸ್ಥೆಯು ಭಾರತೀಯ ಉದ್ಯಮ ಪಾಲುದಾರರ ಸಹಯೋಗದೊಂದಿಗೆ VSHORADS ಒಂದು ಮ್ಯಾನ್ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ (MANPADS) ಅನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. * DRDO ನ ಹೈದರಾಬಾದ್ ಮೂಲದ ಸಂಶೋಧನಾ ಕೇಂದ್ರ ಇಮಾರತ್ (RCI) ಇತರ DRDO ಸೌಲಭ್ಯಗಳು ಮತ್ತು ಖಾಸಗಿ ಘಟಕಗಳೊಂದಿಗೆ ಅಭಿವೃದ್ಧಿಪಡಿಸಿದೆ.
* VSHORAD ಕ್ಷಿಪಣಿಯು ಕಡಿಮೆ ಎತ್ತರದ ವೈಮಾನಿಕ ಬೆದರಿಕೆಗಳನ್ನು ಕಡಿಮೆ ವ್ಯಾಪ್ತಿಯಲ್ಲಿ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಹಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
* ಈ ಕ್ಷಿಪಣಿಯು ಹಲವಾರು ಹೊಸ ತಂತ್ರಜ್ಞಾನಗಳನ್ನು ಸಂಯೋಜಿಸುತ್ತದೆ, ಇದರಲ್ಲಿ ಮಿನಿಯೇಚರೈಸ್ಡ್ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ಇಂಟಿಗ್ರೇಟೆಡ್ ಏವಿಯಾನಿಕ್ಸ್ ಸೇರಿವೆ, ಮತ್ತು ಇದು ಡ್ಯುಯಲ್ ಥ್ರಸ್ಟ್ ಘನ ಮೋಟರ್ನಿಂದ ಮುಂದೂಡಲ್ಪಡುತ್ತದೆ.
* ಈ ಕ್ಷಿಪಣಿಯ ಉಪಯೋಗವು ಅತ್ಯಂತ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿಗಳು ಪ್ರಮುಖ ನಗರಗಳು ಮತ್ತು ಆಯಕಟ್ಟಿನ ಪ್ರಮುಖ ಸ್ಥಳಗಳನ್ನು ರಕ್ಷಿಸಲು ನಿರ್ಣಾಯಕವಾಗಿವೆ.
* ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳಂತಹ ಕಡಿಮೆ-ಹಾರುವ ವೈಮಾನಿಕ ಆಸ್ತಿಗಳಿಂದ ಇದು ರಕ್ಷಣೆಯ ಕೊನೆಯ ಮಾರ್ಗವಾಗಿದೆ ಅದಕ್ಕಾಗಿಯೆ ಭಾರತೀಯ ಸೇನೆಯು ಪ್ರಸ್ತುತ ಏರ್ ಡಿಫೆನ್ಸ್ ಗನ್ L-70 ಮತ್ತು ZU-23 ಅನ್ನು ಹೊಂದಿದೆ.
* 1950 ರ ದಶಕದಲ್ಲಿ ಜೆಟ್ ವಿಮಾನಗಳ ದಾಳಿಯಿಂದ ಪಡೆಗಳನ್ನು ರಕ್ಷಿಸಲು (MANPADS) ಇವುಗಳನ್ನು ಅಭಿವೃದ್ಧಿಪಡಿಸಲಾಯಿತು.
Subscribe to Updates
Get the latest creative news from FooBar about art, design and business.
Previous Articleಕರ್ನಾಟಕ ಲೋಕಸೇವಾ ಆಯೋಗದಿಂದ ಕಾರ್ಮಿಕರ ಇಲಾಖೆ ಹುದ್ದೆಗಳ ನೇಮಕಾತಿ