* ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರವನ್ನು ನಿಯಂತ್ರಿಸಲು ಮತ್ತೆ ರೆಪೋ ದರವನ್ನು ಶೇಕಡಾ 0.50ರಷ್ಟು ಹೆಚ್ಚಿಸಿದೆ.
* ಹಣಕಾಸು ನೀತಿ ನಿರೂಪಣಾ ಸಮಿತಿಯ (Monetary Policy Committee – MPC) ಪರಾಮರ್ಶನಾ ಸಭೆಯ ನಂತರ, ತಜ್ಞರ ಶಿಫಾರಸಿನಂತೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರವರು ರೆಪೋ ದರ ಹೆಚ್ಚಿಸುವಂತೆ ನಿರ್ಣಯಿಸಿದ್ದಾರೆ.
* ಪ್ರಸ್ತುತ ರೆಪೋ ದರದ ಪ್ರಮಾಣವು ಶೇ 5.90 ಕ್ಕೆ ಮುಟ್ಟಿದ್ದು, ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ಬಗೆಯ ಸಾಲದ ಮೇಲಿನ ಬಡ್ಡಿ ದುಬಾರಿಯಾಗಲಿದೆ. ರೆಪೋ ದರ ಹೆಚ್ಚಳದಿಂದ ಬ್ಯಾಂಕ್ ನಲ್ಲಿನ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿ (FD) ಮೇಲೂ ಪರಿಣಾಮ ಬೀರುತ್ತದೆ.
* “ಉಕ್ರೇನ್- ರಷ್ಯಾ” ಸಂಘರ್ಷವು ಜಗತ್ತಿನ ಎಲ್ಲ ದೇಶಗಳಿಗೆ ಆರ್ಥಿಕವಾಗಿ ಸಾಕಷ್ಟು ಹೊಡೆತ ನೀಡಿದೆ. ಇದರಿಂದ ಹಣದುಬ್ಬರ ಹೆಚ್ಚಾಗಿದೆ, ಹಾಗಾಗಿ ಆರ್ಬಿಐ ರೆಪೋ ದರ ಹೆಚ್ಚಿಸಲು ಕಾರಣವಾಗಿದೆ.
* ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳ, ಮತ್ತು ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟ ಇವೆಲ್ಲವುಗಳು ಹಣದುಬ್ಬರಕ್ಕೆ ಕಾರಣವಾಗಿದೆ.
* ಭಾರತದ ರೂಪಾಯಿಯ ಮೌಲ್ಯವು ಡಾಲರ್ ಮುಂದೆ 10 ಪ್ರತಿಶತದಷ್ಟು ಕುಸಿದಿದೆ, ಪ್ರತಿ ಡಾಲರ್ಗೆ ರೂಪಾಯಿ ಮೌಲ್ಯವು 81.95 ರೂ ಆಗಿದೆ,ಶೇಕಡಾ 80 ಪ್ರತಿಷತಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುತಿತ್ತು,
Subscribe to Updates
Get the latest creative news from FooBar about art, design and business.
Previous Articleವಿಶ್ವದ ಪ್ರಥಮ ವಿದ್ಯುತ್ ವಿಮಾನ ಯಶಸ್ವಿ ಹಾರಾಟ