* ಆಸ್ಟೇಲಿಯಾದ ವಿಕ್ಟೊರಿಯದಲ್ಲಿ ನಡೆಯಲಿರುವ 2026ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಶೂಟಿಂಗ್ ಅನ್ನು ಮರು ಸೇರ್ಪಡೆ ಮಾಡಲಾಗಿದೆ. ಕುಸ್ತಿ ಮತ್ತು ಅರ್ಚರಿಯನ್ನು ಕೈಬಿಡಲಾಗಿದೆ.
* ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ (ಸಿಜಿಎಫ್) ನಲ್ಲಿ 26 ವಿಭಾಗಗಳಲ್ಲಿ 20 ಕ್ರೀಡೆಗಳು ಇರಲಿದ್ದು, ಈ ಪೈಕಿ 9 ಪೂರ್ಣಪ್ರಮಾಣದ ಸಂಯೋಜಿತ ಪ್ಯಾರಾ ಕ್ರೀಡೆಗಳು ಇರಲಿದೆ.
* ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್ ನ್ನು ಕೈಬಿಡಲಾಗಿತ್ತು. ಈಗ ಮರುಸೇರ್ಪಡೆಗೊಳಿಸಿರುವುದು ಭಾರತದ ಮಟ್ಟಿಗೆ ಸ್ವಾಗತಾರ್ಹ ಸಂಗತಿಯಾಗಿದೆ.
* ಶೂಟಿಂಗ್ ಭಾರತದ ಪ್ರಬಲ ಕ್ರೀಡೆಯಾಗಿದ್ದು, ಈ ವರೆಗೂ ಭಾರತ 135 ಪದಕ 63 ಚಿನ್ನ, 44 ಬೆಳ್ಳಿ, 28 ಕಂಚು ಪದಕಗಳನ್ನು ಗೆದ್ದಿದೆ.
* ಭಾರತ ಕುಸ್ತಿಯಲ್ಲಿ ಈ ವರೆಗೂ 114 ಪದಕಗಳನ್ನು ಗೆದ್ದಿದೆ.
* ದೇಶ ವಿವಿಧ ವಿಭಾಗಗಳಲ್ಲಿ ಭಾರತ ಗೆದ್ದ ಪದಕಗಳ ಪೈಕಿ ಶೇ.25 ರಷ್ಟು ಪದಕಗಳು ಶೂಟಿಂಗ್ ವಿಭಾಗದ್ದಾಗಿತ್ತು
Subscribe to Updates
Get the latest creative news from FooBar about art, design and business.