* ಸ್ವಿಡನ್ ನ ವಿಜ್ಞಾನಿ ಸ್ವಾಂಟಿ ಪಾಬೊ ಅವರು ಶರೀರವಿಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ 2022ರ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
* ಪಾಬೊ ಅವರು ಮಾನವ ವಿಕಸನದ ಕುರಿತು ನಡೆಸಿರುವ ಸಂಶೋಧನೆಯು ಮನುಷ್ಯನ ದೇಹದೊಳಗಿನ ಪ್ರತಿಕಾಯ ವ್ಯವಸ್ಥೆಯ ಕುರಿತು ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ತಿಳಿಸಿದೆ .
* ನಿಯಾಂಡರ್ತಲಸ್ ಗಳಿಂದ ಹೋಮೋ ಸೇಪಿಯನ್ಸ್ ಗಳಿಗೆ ವಂಶವಾಹಿಗಳ ಹರಿವು ಸಂಬಂಧವಿದೆಯೆಂಬುದನ್ನು ಪಾಬೊ ಅವರು ಮತ್ತು ಅವರ ತಂಡ ಪತ್ತೆಹಚ್ಚಿದೆ.