* ಐಐಟಿ ಮತ್ತು ಇನ್ನು ಬೇರೆ ಬೇರೆ ಶಿಕ್ಷಣ ಸಂಸ್ಥೆಯಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿಯು ಶಿಫಾರಸ್ಸು ಮಾಡಿದೆ.
* ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿಯನ್ನೂ, ಇತರ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನೂ ಬಳಸಬೇಕು ಹಾಗೂ ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಬೇಕು ಎಂದು ವರದಿಯಲ್ಲಿ ಸೇರಿಸಲಾಗಿದೆ.
* ಸಂಸದೀಯ ಸಮಿತಿಯ 11ನೇ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾಗಿದ್ದು, ಎಲ್ಲ ರಾಜ್ಯಗಳಲ್ಲಿಯೂ ಇಂಗ್ಲಿಷ್ ಗಿಂತ ಸ್ಥಳೀಯ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಐಚ್ಛಿಕಗೊಳಿಸಬೇಕು ಎಂದು ವರದಿ ಸಲಹೆ ನೀಡಿದೆ.
* ಸಮಿತಿಯ ಉಪ ಮುಖ್ಯಸ್ಥ ಭರ್ತೃಹರಿ ಮಹತಾಬ್ ರವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಮಿತಿಯು ಶಿಫಾರಸುಗಳನ್ನು ಮಾಡಿದೆ. ಅದರ ಅನ್ವಯವೇ ಅಧಿಕೃತ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳು ಬೋಧನಾ ಮಾಧ್ಯಮವಾಗಬೇಕು ಎಂದು ಸಲಹೆ ಕೊಟ್ಟಿದೆ ಎಂದು ಹೇಳಿದ್ದಾರೆ.
* ‘ಎ’ ವರ್ಗದ ರಾಜ್ಯಗಳಲ್ಲಿ (ಹಿಂದಿ ಭಾಷಿಕ ರಾಜ್ಯಗಳು) ಹಿಂದಿಗೆ ಗೌರವಾರ್ಹ ಸ್ಥಾನ ಕೊಡಬೇಕು, ಈ ರಾಜ್ಯಗಳಲ್ಲಿ ಹಿಂದಿ ಬಳಕೆ ಶೇಕಡ ನೂರರಷ್ಟು ಇರಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
* ಎ ವರ್ಗದ ರಾಜ್ಯಗಳು – ಉತ್ತರ ಪ್ರದೇಶ, ಬಿಹಾರ್, ಮಧ್ಯಪ್ರದೇಶ, ಛತ್ತೀಸಘಡ್, ಉತ್ತರಾಖಂಡ್, ಜಾರ್ಖಂಡ್, ಹರಿಯಾಣ, ಹಿಮಾಚಲ್ ಪ್ರದೇಶ, ರಾಜಸ್ಥಾನ, ದೆಹಲಿ, ಅಂಡಮಾನ್ ನಿಕೋಬಾರ್ ದ್ವೀಪಗಳು
– ಬಿ ವರ್ಗದ ರಾಜ್ಯಗಳು – ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಚಂಡೀಗಡ್, ಡಾಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ
-ಸಿ ವರ್ಗದ ರಾಜ್ಯಗಳು – ಇನ್ನುಳಿದ ಭಾರತದ ಎಲ್ಲ ರಾಜ್ಯಗಳು ಸಿ ವರ್ಗಕ್ಕೆ ಸೇರಿವೆ.
* ಹಿಂದಿ ಭಾಷಿಕ ರಾಜ್ಯಗಳಲ್ಲಿರುವ ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿಯು ಬೋಧನಾ ಮಾಧ್ಯಮವಾಗಬೇಕು ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯು ಬೋಧನಾ ಮಾಧ್ಯಮವಾಗಬೇಕು ಮತ್ತು ಕೆಲವೊಂದು ಸಂಸ್ಥೆಗಳಲ್ಲಿ ಈಗ ಶೇ 20ರಿಂದ ಶೇ 30ರಷ್ಟು ಮಾತ್ರ ಹಿಂದೆ ಬಳಕೆ ಆಗುತ್ತಿದೆ. ಇನ್ನು ಮುಂದೆ ಅದು 100 % ರಷ್ಟಾಗಬೇಕೆಂದು ಎಂದು ಮಹತಾಬ್ ಹೇಳಿದ್ದಾರೆ.
* ಇನ್ನು ಇತರೆ ಶಿಫಾರಸ್ಸನ್ನು ಮಾಡಲಾಗಿದೆ
– ನೇಮಕಾತಿ ಪರೀಕ್ಷೆಗಳಲ್ಲಿರುವ ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಮಾಡಿದ್ದನ್ನು ಕೊನೆಗೊಳಿಸಬೇಕು.
– ಹಿಂದಿ ಭಾಷಿಕ ರಾಜ್ಯಗಳ ಹೈಕೋರ್ಟ್ ಆದೇಶವನ್ನು ಹಿಂದಿ ಭಾಷೆಗೆ ಅನುವಾದಿಸುವಂತೆ ಮಾಡಬೇಕು.
– ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳು ಮತ್ತು ಸಂಸ್ಥೆಗಳು, ಫ್ಯಾಕ್ಸ್ ಗಳು, ಈ ಮೇಲ್ ಗಳು ಇವೆಲ್ಲವೂ ಹಿಂದಿಭಾಷೆಯಲ್ಲಿ ಮುಂದುವರೆಯಬೇಕು.
– ಅಧಿಕೃತ ಪತ್ರಗಳು, ಆಹ್ವಾನ ಪತ್ರಿಕೆಗಳು, ಹಿಂದಿ ಭಾಷೆಯಲ್ಲಿರಬೇಕು.
– ಕೇಂದ್ರ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಹಿಂದಿ ಭಾಷೆಯಲ್ಲಿ ನಡೆಯಬೇಕು.
Subscribe to Updates
Get the latest creative news from FooBar about art, design and business.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವಾಗಿ ಹಿಂದಿ ಬಳಸಬೇಕೆಂದು ಸಂಸದೀಯ ಸಮಿತಿಗೆ ಶಿಫಾರಸ್ಸು
Previous Articleಪರಿಶಿಷ್ಟ ಜಾತಿ / ಪಂಗಡದವರಿಗೆ ಕರ್ನಾಟಕ ಸರ್ಕಾರದಿಂದ ಮೀಸಲು ಏರಿಕೆ