* ನವೆಂಬರ್ 1 ರಿಂದ ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಆರಂಭವಾಗಲಿದೆ, ಆರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್, ಬಾಂಡ್ ವಹಿವಾಟುಗಳಲ್ಲಿ ಈ ವರ್ಚುವಲ್ ಕರೆನ್ಸಿ ಬಳಕೆ ಮಾಡಲು ಅವಕಾಶ ಇದೆ.
* ಭಾರತದ ಹಲವಾರು ಬ್ಯಾಂಕ್ ಗಳು ಡಿಜಿಟಲ್ ರೂಪಾಯಿ ನೀಡಲಿವೆ. ಎಸ್‌ಬಿಐ, ಬರೋಡ, ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತು ಎಚ್‌ಎಸ್‌ಬಿಸಿ.
* ಪ್ರಾಯೋಗಿಕ ರಿಟೇಲ್ ವಹಿವಾಟು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ, ಕೆಲವು ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಒಂದು ತಿಂಗಳಲ್ಲಿ ಆರಂಭವಾಗಲಿದೆ.
* ಪ್ರಾಯೋಗಿಕ ಬಳಕೆಯಲ್ಲಿ ಸಿಗುವ ಅನುಭವ ಆಧರಿಸಿ ಇತರ ಸಗಟು ವಹಿವಾಟುಗಳಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಇರುವವರ ನಡುವಿನ ಪಾವತಿಗಳಲ್ಲಿ ಇದನ್ನು ಬಳಸಲು ಆದ್ಯತೆ ನೀಡಲಾಗುತ್ತದೆ.
* ಸಿಬಿಡಿಟಿ ಎಂಬುದು ಕೇಂದ್ರೀಯ ಬ್ಯಾಂಕ್ ಹೊರಡಿಸುವ ಡಿಜಿಟಲ್ ಕರೆನ್ಸಿ, 2022 ಫೆಬ್ರುವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಿಬಿಡಿಸಿ ಚಲಾವಣೆಗೆ ತರುವ ಘೋಷಣೆ ಮಾಡಿತ್ತು.
* ಜಾಗತಿಕವಾಗಿ 60 ಕ್ಕೂ ಕೇಂದ್ರೀಯ ಬ್ಯಾಂಕ್‌ಗಳು ಸಿಬಿಡಿಸಿ ಬಗ್ಗೆ ಆಸಕ್ತಿ ತೋರಿವೆ, ಕೆಲವು ದೇಶಗಳಲ್ಲಿ ಈ ಕರೆನ್ಸಿಯನ್ನು ಚಲಾವಣೆಗೆ ತರುವ ಪ್ರಾಯೋಗಿಕ ಕಾರ್ಯ ನಡೆದಿದೆ.
Subscribe to Updates
Get the latest creative news from FooBar about art, design and business.
Previous Articleಬ್ಯಾಂಕಿಂಗ್ ಕ್ಷೇತ್ರ (IBPS)ದಲ್ಲಿ ಖಾಲಿ ಇರುವ 710 ಭರ್ಜರಿ ಹುದ್ದೆಗಳಿಗೆ ಪದವಿ ಪಾಸಾದವರಿಂದ ಅರ್ಜಿ ಆಹ್ವಾನ
Next Article ಇಂಧನ ಬೆಲೆಗಳ ಕುರಿತು ಅಧ್ಯಯನ ನಡೆಸಿದ ವಿಶ್ವ ಬ್ಯಾಂಕ್