* ಟೆಕ್ಕ್ ಸಮ್ಮಿಟ್‌ನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು ಬೆಂಗಳೂರಿನಲ್ಲಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ನವೋದ್ಯಮ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ.
* ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಘೋಷಣೆ ಮಾಡಿದರು. ಜೊತೆಗೆ ರಾಜ್ಯಾದ್ಯಂತ ಆರು ಹೊಸ ನಗರಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಜ್ಞಾನ ನಗರ ನಿರ್ಮಿಸುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
* ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ನವೋದ್ಯಮ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
* ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಘೋಷಣೆ ಮಾಡಿದರು. ಜೊತೆಗೆ ರಾಜ್ಯಾದ್ಯಂತ ಆರು ಹೊಸ ನಗರಗಳನ್ನು ನಿರ್ಮಾಣ ಮಾಡಲಾಗುವುದು ಹಾಗೂ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಜ್ಞಾನ ನಗರ ನಿರ್ಮಿಸಲಾಗುತ್ತಿದೆ.
* ಪ್ರತಿಯೊಬ್ಬರೂ ಹೊಸದೊಂದು ಯೋಚನೆ, ಆವಿಷ್ಕಾರ ಹೊತ್ತು ಬಂದಿದ್ದಾರೆ. ಈ ವೇದಿಕೆ ಎಲ್ಲರಿಗೂ ಸೂಕ್ತವಾಗಿ ಲಭಿಸಿದೆ. ತಂತ್ರಜ್ಞಾನ ಕ್ಷೇತ್ರದ ವಿಶ್ವವಾಗಿ ಟೆಕ್ ಸಮ್ಮಿಟ್ ಒದಗಿ ಬಂದಿದೆ. ವಿಜ್ಞಾನದ ಎಲ್ಲಾ ಅವಕಾಶಗಳಿಗೆ ಇಲ್ಲಿ ವೇದಿಕೆ ಲಭಿಸಿದೆ ಎಂದು ಅಭಿಪ್ರಾಯಪಟ್ಟರು.
* 25 ವರ್ಷದಲ್ಲಿ ಇದು ಪ್ರಗತಿ ಹೊಂದುತ್ತಲೇ ಇದೆ. ಅತ್ಯುತ್ತಮ ಆವಿಷ್ಕಾರಿ ನಾಯಕ ಎಂದರೆ ಸೃಷ್ಟಿಕರ್ತ. ಈತ ಎಲ್ಲವನ್ನೂ ಸೃಷ್ಟಿಸಿದ್ದಾನೆ. ಮಾನವನನ್ನು ಸೃಷ್ಟಿಸುವ ಜತೆಗೆ ಈ ಪ್ರಪಂಚದಲ್ಲಿ ಇದಕ್ಕೆ ಪೂರಕವಾದ ಅಗತ್ಯಗಳನ್ನೂ ಸೃಷ್ಟಿಸಿದ್ದಾನೆ. ವರ್ಷದಿಂದ ವರ್ಷಕ್ಕೆ ಇದು ಅಭಿವೃದ್ಧಿ ಆಗುತ್ತಿದೆ.
* ಪರಿಸರ ನಾಶ ಜಗತ್ತಿನ ವಿನಾಶದ ಕರೆಗಂಟೆಯಾಗಿದೆ. ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ವಿನಾಶದತ್ತ ಸಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಏನನ್ನಾದರೂ ಬಿಟ್ಟು ಹೋಗಬೇಕು. ಇಂದಿನ ತಂತ್ರಜ್ಞಾನ ಬಳಕೆ, ಆವಿಷ್ಕಾರಗಳು ಭವಿಷ್ಯದ ವಿನಾಶವನ್ನು ತಡೆಯುವಂತದ್ದಾಗಬೇಕು.
* ಈ ಸಮ್ಮಿಟ್ ನಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನ ಅಭಿವೃದ್ಧಿ ಮಾಡುವುದಕ್ಕೆ ಒತ್ತುಕೊಡುವಂತೆ ಮನವಿ ಮಾಡುತ್ತಿದ್ದೇನೆ. ದೇಶ ಪ್ರಗತಿ ಹೊಂದಬೇಕು, ತಂತ್ರಜ್ಞಾನ ಕ್ರಾಂತಿ ಆಗಬೇಕು. ಆದರೆ ಇದು ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು.
* ಜೈವಿಕ ತಂತ್ರಜ್ಞಾನ ದಲ್ಲಿ ಹೊಸ ಆವಿಷ್ಕಾರಗಳು ಆಗುತ್ತಿವೆ. ಕೃತಕ ಬುದ್ದಿಮತ್ತೆ ಕ್ಷೇತ್ರ ಪ್ರಗತಿ ಹೊಂದುತ್ತಿದೆ. ನಮ್ಮ ಹಿಂದಿನ ತಲೆಮಾರಿನವರು ಅನುಸರಿಸಿದ ಮಾರ್ಗ ಹಾಗೂ ಸೃಷ್ಟಿಕರ್ತ ಬಯಸಿದ ಪ್ರಪಂಚ ಉಳಿಸಿಕೊಂಡು ಮುಂದಿನವರಿಗೆ ಬಿಟ್ಟು ಹೋಗಬೇಕಿದೆ.
* ತಂತ್ರಜ್ಞಾನದ ಕ್ರಾಂತಿ ರಾಜ್ಯ, ದೇಶದ ಪ್ರಗತಿಗೆ ಪೀರಕವಾಗಿರಲಿ. ಇಂತ ಕಾರ್ಯಕ್ರಮ ಗಳು ಇದಕ್ಕೆ ತಳಪಾಯಗಳಾಗಲಿ ಎಂದು ಹೇಳಿದರು.
* ಬೆಂಗಳೂರಿನ ವೈಶಿಷ್ಟ್ಯವೆಂದರೆ ಮನುಷ್ಯ ಯೋಚಿಸುವ ಪ್ರತಿ ಕಲ್ಪನೆಯನ್ನೂ ಕಣ್ಣೆದುರು ಸಾಕಾರಗೊಳಿಸಿಕೊಡುವ ಶಕ್ತಿ ಇದೆ. ಇಲ್ಲಿ ಎಲ್ಲವೂ, ಏನು ಬೇಕಾದರೂ ಸೃಷ್ಟಿಸುವ ಶಕ್ತಿ ಇದೆ.
Subscribe to Updates
Get the latest creative news from FooBar about art, design and business.
Previous Articleಆರು ಜನ ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ