ಚಳಿಗಾಲದ ಸಂದರ್ಭದಲ್ಲಿ ನಿರಾಶ್ರಿತರಾದ ಹಿರಿಯ ಜೀವಿಗಳಿಗೆ ಹಾಗೂ ವಸತಿ ರಹಿತ ನಿರಾಶ್ರಿತರಿಗೆ ಹಾಸಿಗೆ ಹೊದಿಕೆ ನೀಡುವ ಮಾನವೀಯ ಕಳಕಳಿಯ ಮೆರೆದ ಪ್ರಸಂಗವೊಂದು ಐತಿಹಾಸಿಕ ನಗರದಲ್ಲಿ ನಡೆದಿದೆ.
ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಸ್ಥಳೀಯ ಕೇರಿಂಗ್ ಸೋಲ್ಸ್ ಇಂಡಿಯಾ ಸಂಸ್ಥೆಯ ಸದಸ್ಯರು ನಿರಾಶ್ರಿತರ ಅವಶ್ಯಕತೆಯ ಗುಣವಾಗಿ ಹವಾಮಾನದ ವೈಪರಿತ್ಯದಿಂದ ಚಳಿಗಾಳಿಗೆ ತತ್ತರಿಸುತ್ತಿರುವ ನಿರಾಶ್ರಿತ ಹಿರಿಯ ಜೀವಿಗಳಿಗೆ ಅನಾಥ ಮಕ್ಕಳಿಗೆ ಅಲೆಮಾರಿ ಜನಾಂಗದವರನ್ನು ಗುರುತಿಸಿ ಸ್ವಯಂ ಪ್ರೇರಣೆಯಿಂದ ಹಾಸಿಗೆ ಹೊದಿಕೆಯನ್ನು ಒದಗಿಸುವುದಲ್ಲಿ ನಿಜಕ್ಕೂ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ ಮುಂದಾಗಿರುವದು.
ಅಷ್ಟೇ ಅಲ್ಲ, ನಿರಾಶ್ರಿತರ ಅನಾಥರ ಆರೋಗ್ಯದ ಹಿತದೃಷ್ಟಿಯಿಂದ ಅವರ ಉಪಚಾರ ಹಾಗೂ ಆಹಾರದ ಪೊಟ್ಟಣ ವನ್ನು ಸಹ ವಿತರಿಸುವ ಮಗದೊಂದು ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಸಂಸ್ಥೆಯು ಯಾವದೇ ತರಹದ ಆಪೇಕ್ಷೆಗಳು ಇಲ್ಲದೆ ಕೇವಲ ಸಮಾಜ ಸೇವೆಯ ಸದುದ್ದೇಶದಿಂದ ನಿಸ್ವಾರ್ಥ ಭಾವ ದಿಂದ ಬಡಬಗ್ಗರಿಗಾಗಿ ಹಗಲು ರಾತ್ರಿ ಎನ್ನದೇ ನಗರದ ವಿವಿಧ ಸ್ಥಳಗಳು, ಮಂದಿರ, ದರ್ಗಾ, ಗುಡಿ, ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಪ್ರದೇಶಗಳಿಗೆ ತೆರಳಿ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರೆಸಿರುವರು.
ಇನ್ನೂ ಒಂದು ಮುಂದಕ್ಕೆ ಹೋಗಿ ವಿಶೇಷವಾಗಿ ದೈಹಿಕ ವಿಕಲ ಚೇತನರಿಗೂ ಹಾಗೂ ಕೊಳಚೆ ಪ್ರದೇಶದ ಮಕ್ಕಳನ್ನು ಸಹ ಗುರುತಿಸಿ, ಆವರಿಗೂ ಸಹಾಯ ಹಸ್ತ ಚಾಚುತ್ತಿರುವುದು ನೈಜ ಸಮಾಜ ಸೇವೆಯ ಮಾದರಿ ಎನ್ನಲಡ್ಡಿಯಿಲ್ಲ.
ಸಂಸ್ಥೆಯ ಈ ಕಾರ್ಯದಲ್ಲಿ ಕೈ ಜೋಡಿಸಿ ಕೆಲಸ ಮಾಡುವವರ ತಂಡದಲ್ಲಿ ಸುಫಿಯಾ ದೊಡಮನಿ, ಬಂದೇನವಾಜ ಲೋಣಿ, ವಿನಾಯಕ ಕುಂಟೆ, ಮುಬಷಿರ್ ಮುಭ್ರ ಶಫೀವುಲ್ಲಾ ಸಂಗಾಪುರ, ಮಹಮ್ಮದ್ ಆಜೀಮ್, ಸಚೀನ ಪಾಂಡೆ, ಸಾದಿಕ ಮುಜಾವರ, ಕುಶಲ ಕಬಾಡೆ, ಮೌಶೀನ್ ಮನಿಯಾರ, ಆಬ್ಬಾಸಲಿ ಬಾಗವಾನ, ಮಂಜುನಾಥ ಪಾಟೀಲ, ಶ್ರೀನಿವಾಸ ಸೇ ರಿರುವರು. ಈ ಸಾಮಾಜಿಕ ಕಳಕಳಿಯ ಕಾರ್ಯ ಎಸಗುತ್ತಿರುವ ಸಂಸ್ಥೆಯ ಅಧ್ಯಕ್ಷ ಪ್ರೊ, ದೊಡಮನಿ, ಇಲ್ಲಿಯ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆ ಸಿಕ್ಯಾಬ್ ಇಂಜನೀಯರಿಂಗ್ ದ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ನಿರ್ವಹಿಸುತ್ತಿರುವದು ಸಹ ಅಷ್ಟೆ ಆಭಿನಂದನೀಯವಾಗಿದೆ. ಸದುದ್ದೇಶದಿಂದ ಕೂಡಿರುವ ಸಂಸ್ಥೆಯ ಸೇವೆ ಮೆಚ್ಚಲೇ ಬೇಕಾಗಿದ್ದು ಅವರೊಂದಿಗೆ ಎಲ್ಲರೂ ಕೈ ಜೋಡಿಸಿದಲ್ಲಿ ಸಂಸ್ಥೆಯು ಕೂಡ ಇನ್ನಷ್ಟು ಹುರುಪಿನಿಂದ ಉತ್ತಮವಾಗಿ ಅಲ್ಲವೇ?
ನಿರಾಶ್ರಿತ ಹಿರಿಯ ಜೀವಿಗಳಿಗೆ ಬೆಚ್ಚನೆಯ ಹೊದಿಕೆ ವಿಜಯಪುರದ ಕೇರಿಂಗ್ ಸೋಲ್ಸ್ ಇಂಡಿಯಾ ಸಂಸ್ಥೆ ಶ್ಲಾಘನೀಯ ಕಾರ್ಯ
DONATE : Phone Pay /GPay: 8050633873