* ಪುರುಷರ ಹಾಕಿ ವಿಶ್ವಕಪ್ ಹೊಸ ವರ್ಷ 13 ಜನವರಿ 2023 ರಲ್ಲಿ ತನ್ನ 15ನೇ ಆವೃತ್ತಿಗೆ ಪ್ರವೇಶಿಸಲಿದೆ. ಭಾರತವು ಈ ಪ್ರತಿಷ್ಠಿತ ಟೂರ್ನಮೆಂಟ್‌ಗೆ ನಾಲ್ಕನೇ ಬಾರಿ ಆತಿಥ್ಯವಹಿಸಲಿದೆ. ಒಡಿಶಾದ ಅವಳಿ ನಗರಗಳ ಜಂಟಿ ಆತಿಥ್ಯದಲ್ಲಿ ಹಾಕಿ ವಿಶ್ವಕಪ್ ಟೂರ್ನಮೆಂಟ್ ಜನವರಿ 13ರಿಂದ 29ರ ತನಕ ನಡೆಯಲಿದೆ.
* ಈ ಬಾರಿ ಪಂದ್ಯಗಳು ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ಬಿರ್ಸ ಮುಂಡಾ ಇಂಟರ್ ನ್ಯಾಶನಲ್ ಹಾಕಿ ಸ್ಟೇಡಿಯಮ್ ನಲ್ಲಿ ನಡೆಯಲಿದೆ.
** ಒಟ್ಟು ಪಂದ್ಯಗಳು ಹಾಗೂ ತಂಡಗಳು :
* ಟೂರ್ನಮೆಂಟ್‌ನಲ್ಲಿ ವಿಶ್ವದ ಅಗ್ರ 16 ತಂಡಗಳು ಎರಡು ತಾಣಗಳಲ್ಲಿ ಒಟ್ಟು 44 ಪಂದ್ಯಗಳನ್ನು ಆಡಲಿವೆ. ಟೋಕಿಯೊ ಒಲಿಂಪಿಕ್ ನಲ್ಲಿ ಕಂಚಿನ ಪದಕ ವಿಜೇತ ಭಾರತದೊಂದಿಗೆ ಹಾಲಿ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಂ ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯ, ನೆದರ್‌ಲ್ಯಾಂಡ್ಸ್, ಜರ್ಮನಿ, ನ್ಯೂಝಿಲ್ಯಾಂಡ್, ಅರ್ಜೆಂಟೀನ, ಇಂಗ್ಲೆಂಡ್, ಸ್ಪೇನ್, ದಕ್ಷಿಣ ಕೊರಿಯಾ, ಮಲೇಶ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಜಪಾನ್, ಚಿಲಿ ಹಾಗೂ ವೇಲ್ಸ್ ತಂಡಗಳು ಸ್ಪರ್ದಿಸಲಿವೆ.
Subscribe to Updates
Get the latest creative news from FooBar about art, design and business.
2023 ರಲ್ಲಿ ಏರ್ಪಡಿಸಲಾದ ಪುರುಷರ ಹಾಕಿ ವಿಶ್ವಕಪ್ ನಲ್ಲಿ ಭಾರತ ಆತಿಥ್ಯ ವಹಿಸಲಿದೆ
Next Article ಡಿಸೇಂಬರ್ 29 ವಿಶ್ವ ಮಾನವ ದಿನ