* ಭಾರತದ ರಾಜಧಾನಿ ದೆಹಲಿಯಲ್ಲಿ ಗುರುವಾರ ಜನೆವರಿ 26 ರಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಾರೀಶಕ್ತಿ ಥೀಮ್ ನ ಅಡಿ ಕರ್ತವ್ಯಪಥದಲ್ಲಿ ನಡೆದ ಕಾರ್ಯಕ್ರಮವು ಹಲವಾರು ಪ್ರಥಮಗಳಿಗೆ ಮತ್ತು ಹೊಸತುಗಳಿಗೆ ಸಾಕ್ಷಿಯಾಯಿತು.
* ಪಥಸಂಚಲನದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ಸ್ವದೇಶಿಯಾಗಿ ನಿರ್ಮಿಸಿದ ಶಸ್ತ್ರಾಸ್ತ್ರಗಳು, ರಾಜ್ಯದ ನಾರೀಶಕ್ತಿ ಸೇರಿದಂತೆ ವಿವಿಧ ರಾಜ್ಯಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ದಚಿತ್ರಗಳು, ದೇಶದ ಮಿಲಿಟರಿ ಶಕ್ತಿ ಅನಾವರಣಗೊಂಡಿತು.
* ದೇಶದ ಸಂಸ್ಕೃತಿ ಮತ್ತು ಪರಂಪರೆ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಬಿಂಬಿಸುವ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿವಿಧ ಸಚಿವಾಲಯದ 6 ಸ್ತಬ್ದಚಿತ್ರಗಳು ಪ್ರದರ್ಶನಗೊಂಡವು. ಕರ್ನಾಟಕ ಸರ್ಕಾರ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿಗೌಡ ಮತ್ತು ಸಾಲುಮರದ ತಿಮ್ಮಕ್ಕ ಇವರುಗಳ ಸಾಧನೆಯನ್ನು ‘ನಾರೀಶಕ್ತಿ’ ಥೀಮ್ ಸ್ತಬ್ದಚಿತ್ರ ಎಲ್ಲರ ಗಮನ ಸೆಳೆಯುವಂತೆ ಮಾಡಿತು.
* ವಿಂಟೇಜ್ ಏರ್ ಕ್ರಾಫ್ಟ್ ಸೇರಿದಂತೆ 50 ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೂರೂ ಮಿಗ್ – 29, ಎರಡು ಅಪಾಚೆ ಹೆಲಿಕ್ಯಾಪ್ಟರ್, ಐದು ಸಾರಂಗ ವಿಮಾನಗಳು ಆಕಾಶದಲ್ಲಿ ತ್ರಿವರ್ಣ ಧ್ವಜ ರಚಿಸಿದವು.
* ನೌಕಾಪಡೆಯ 114 ಯುವ ನಾವಿಕರನ್ನು ಒಳಗೊಂಡ ತಂಡವನ್ನು ಕನ್ನಡತಿ ಲೆಫ್ಟಿನೆಂಟ್ ಸಿಡಿಆರ್. ದಿಶಾ ಅಮೃತ್ ಮುನ್ನೆಡಿಸಿದರು. ಈ ತಂಡವು ಇದೆ ಮೊದಲ ಬಾರಿಗೆ 3 ಮಹಿಳಾ ಮತ್ತು 6 ಪುರುಷ ಅಗ್ನಿವೀರರನ್ನು ಒಳಗೊಂಡಿದೆ. ಚೇತನ್ ಶರ್ಮ ಅವರು ಆಕಾಶ್ ಕ್ಷಿಪಣಿ ವ್ಯವಸ್ಥೆಯ ಪ್ರದರ್ಶನದ ವೇಳೆಯ ಟ್ಯಾಂಕ್ ಒಂದರ ಮುಂದಾಳತ್ವ ವಹಿಸಿದ್ದರು.
* ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸೈನಿಕರು ಶಿಸ್ತಿನ ಪಥಸಂಚಲನ ನಡೆಸಿ, ಸೇನಾಶಕ್ತಿಯನ್ನು ಪ್ರದರ್ಶಿಸಿದರು. ಎನ್ ಸಿಸಿ ಯಾ ಪುರುಷ ಮತ್ತು ಮಹಿಳಾ ಪಡೆಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು,
* ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶಿಷ್ಟ ಉಡುಗೆ ಕಪ್ಪು ಕೋಟ್, ಬಿಳಿ ಪ್ಯಾಂಟ್, ರಾಜಸ್ಥಾನಿ ಪೇಟ ಧರಿಸಿ ಈ ಬಾರಿಯ ಗಣರಾಜ್ಯೋತ್ಸವ ಆಚರಿಸಿದರು. ನರೇಂದ್ರ ಮೋದಿ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಜನತೆಗೆ ಶುಭ ಹಾರೈಸಿದರು. ನಾವೆಲ್ಲರೂ ಮುನ್ನಡೆಯಬೇಕೆಂದು ಸ್ವಾತಂತ್ರ್ಯದ ಹೋರಾಟಗಾರರ ಕನಸು ನನಸು ಮಾಡೋಣ ಎಂದು ಹೇಳಿದರು.
* ಈ ಬಾರಿಯ ಸೆಂಟ್ರಲ್ ವಿಸ್ಟಾ, ಕರ್ತವ್ಯ ಪಥದ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರು, ಹಾಲು – ತರಕಾರಿ ಮಾರಾಟಗಾರರು, ಬೀದಿ ಬದಿಯ ವ್ಯಾಪಾರಿಗಳು ಎಲ್ಲರೂ ಗ್ಯಾಲರಿಯ ಪ್ರಮುಖ ಜಾಗದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.
* ಈ ಬಾರಿಯ ರಾಜ್ಯೋತ್ಸವದಲ್ಲಿ ಇಸ್ರೇಲ್ ವಿದೇಶಾಂಗ ಸಚಿವ ಡಿಜಟಲ್ ಡಿಪ್ಲೊಮಸಿ ಬ್ಯುರೋ ಡಾ ಮುಖ್ಯಸ್ಥ ಡೇವಿಡ್ ಸರಂಗಾ ರವರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
74 ನೇ ಗಣರಾಜ್ಯೋತ್ಸವ : ಕರ್ತವ್ಯ ಪಥದಲ್ಲಿ ನಾರಿಶಕ್ತಿ ಸ್ವದೇಶೀ ಭಕ್ತಿ
Previous Articleಎಸ್.ಎಂ.ಕೃಷ್ಣ, ಸೇರಿದಂತೆ ಆರು ಜನರಿಗೆ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ
Next Article ವೀರ ಗಾಥಾ 2.0 ಸ್ಪರ್ಧೆ