ಭಾರತೀಯ ಬಾಲಿವುಡ್‌ನ ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ 2023ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (Dadasaheb Phalke Award) ನೀಡಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಘೋಷಿಸಿದ್ದಾರೆ.
ಸಿನಿಮಾರಂಗದಲ್ಲಿನ ಅದ್ವಿತೀಯ ಸಾಧನೆಗಾಗಿ ಕೇಂದ್ರ ಸರ್ಕಾರ ಕೊಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಈ ಬಾರಿ ವಹೀದಾ ರೆಹಮಾನ್ ಅವರಿಗೆ ಸಂದಿದೆ.
ವಹೀದಾ ರೆಹಮಾನ್ ಅವರು ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬಿವಿ ಔರ್ ಗುಲಾಮ್, ಗೈಡ್, ಖಾಮೋಶಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿನ ಅವರ ನಟನೆಗೆ ಮೆಚ್ಚುಗೆ ಸಿಕ್ಕಿದ್ದು, ಹಾಗೂ ವಹೀದಾ ರೆಹಮಾನ್ ಅವರು ಪದ್ಮಭೂಷಣ ಮತ್ತು ಪದ್ಮಶ್ರೀ ಪುರಸ್ಕಾರಗಳನ್ನೂ ಪಡೆದಿದ್ದಾರೆ.
2020ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಆಶಾ ಪರೇಖ್ ಹಾಗೂ ಅದರ ಹಿಂದಿನ ವರ್ಷದ (2019) ಪ್ರಶಸ್ತಿಯನ್ನು ರಜನಿಕಾಂತ್ ಪಡೆದಿದ್ದರು.
ವಹೀದಾ ರೆಹಮಾನ್ ಅವರಿಗೆ ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ವಹೀದಾಗೆ ಸಿಕ್ಕಿದೆ. ಎನ್‌ಟಿಆರ್ ನ್ಯಾಷನಲ್ ಅವಾರ್ಡ್‌ಗೂ ಅವರು ಪಾತ್ರರಾಗಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಸೆಪ್ಟೆಂಬರ್ 27 : ವಿಶ್ವ ಪ್ರವಾಸೋಧ್ಯಮ ದಿನ