ಹೆಣ್ಣು ಮಕ್ಕಳಿಗೆ ನೀಡಬೇಕಾದ ಸಮಾನ ಅವಕಾಶದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
2024ರ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಘೋಷವಾಕ್ಯ ‘ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ’ ಎಂಬುವುದಾಗಿದೆ.
ಹೆಣ್ಣು ಮಕ್ಕಳ ಅಂತರರಾಷ್ಟ್ರೀಯ ದಿನವನ್ನು ಮೊಟ್ಟ ಮೊದಲು ಅಕ್ಟೋಬರ್ 11, 2012 ರಂದು ಆಚರಿಸಲಾಯಿತು, ಹೆಣ್ಣು ಮಕ್ಕಳ ದಿನಾಚರಣೆಯ ಕಲ್ಪನೆಯು ಎನ್‌ಜಿಒ ದ ‘ನಾನು ಹೆಣ್ಣು ಅಭಿಯಾನದ ಕಾರಣ’ ಎಂಬ ಅಭಿಯಾನದಿಂದ ಈ ದಿನಾಚರಣೆ ಹೊರಹೊಮ್ಮಿತು.
ವಿಶ್ವಸಂಸ್ಥೆಯ ಮುಂದೆ ಹೆಣ್ಣು ಮಗುವಿನ ಅಂತರಾಷ್ಟ್ರೀಯ ದಿನದಂದು ನಿರ್ಣಯವನ್ನು ಪ್ರಸ್ತಾಪಿಸಿದ ಮೊದಲ ದೇಶ ಕೆನಡಾ.
2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿ ತಲುಪುವ ಹಾದಿಯಲ್ಲಿಮಹಿಳೆಯರ ವಿಚಾರದಲ್ಲಿ ಜಗತ್ತು ವಿಫಲವಾಗಲಿದೆ.
ಪ್ರಸ್ತುತ ವಸ್ತುಸ್ಥಿತಿಯ ಪ್ರಕಾರ ಬಾಲ್ಯವಿವಾಹದಂಥ ಕೆಟ್ಟ ಪದ್ಧತಿಯಿಂದ ಮುಕ್ತವಾಗಲು ಇನ್ನು 300 ವರ್ಷಗಳು ಬೇಕಿದೆ. ಯಾವುದೇ ರೀತಿಯ ಬದಲಾವಣೆ ಅನುಷ್ಠಾನ ಜಾರಿಯಾಗದಿದ್ದರೆ 2030ರ ವೇಳೆಗೆ ತರಗತಿಯಲ್ಲಿರಬೇಕಾದ 110 ಮಿಲಿಯನ್ ಬಾಲಕಿಯರು, ಮಹಿಳೆಯರು ಹೊರಗುಳಿಯುತ್ತಾರೆ. 340 ಮಿಲಿಯನ್ ಮಹಿಳೆಯರು ಮತ್ತು ಬಾಲಕಿಯರು ಕಡುಬಡತನಕ್ಕೆ ಸಿಕ್ಕು ನಲುಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2023ರ ವಾರ್ಷಿಕ ಲಿಂಗಾನುಪಾತ ವರದಿ ಪ್ರಕಾರ, ವಿಶ್ವದ 146 ದೇಶಗಳ ಪಟ್ಟಿಯಲ್ಲಿ ಭಾರತ 127ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತ 135ನೇ ಸ್ಥಾನದಲ್ಲಿತ್ತು. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ 142, ಬಾಂಗ್ಲಾ 59, ಚೀನಾ 107, ನೇಪಾಳ 116, ಶ್ರೀಲಂಕಾ 115, ಭೂತಾನ್ 103ನೇ ಸ್ಥಾನದಲ್ಲಿವೆ. ಐಸ್‌ಲ್ಯಾಂಡ್ ಸತತ 14ನೇ ವರ್ಷವೂ ವಿಶ್ವದ ಅತ್ಯಂತ ಲಿಂಗ-ಸಮಾನತೆಯ ದೇಶವಾಗಿ ಹೊರಹೊಮ್ಮಿದ್ದು, ವರದಿಯ ಪ್ರಕಾರ ಶೇ. 90ಕ್ಕಿಂತ ಹೆಚ್ಚು ಸಮಾನತೆ ಇದೆ.