Subscribe to Updates
Get the latest creative news from FooBar about art, design and business.
Author: Web Desk
ಕೇಂದ್ರ ಸಚಿವ ಸಂಪುಟವು ಇನ್ನೂ ಐದು ಭಾಷೆಗಳನ್ನು “ಶಾಸ್ತ್ರೀಯ” ಎಂದು ಗುರುತಿಸಲು ಅನುಮೋದನೆ ನೀಡಿದೆ. ಐದು ಭಾರತೀಯ ಭಾಷೆಗಳಾದ ಮರಾಠಿ , ಪಾಲಿ , ಪ್ರಾಕೃತ , ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಅಕ್ಟೋಬರ್ 03 ರಂದು (ಗುರುವಾರ) ಘೋಷಿಸಿದ್ದಾರೆ. ಈಗಾಗಲೇ ಶಾಸ್ತ್ರೀಯವೆಂದು ಗುರುತಿಸಲ್ಪಟ್ಟಿರುವ ಇತರ ಆರು ಭಾಷೆಗಳಾದ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾದ ಪಟ್ಟಿಗೆ ಸೇರುತ್ತವೆ. ಅಂದ್ಹಾಗೆ, ಕನ್ನಡ, ತಮಿಳು, ಸಂಸ್ಕೃತ, ತೆಲುಗು, ಮಲಯಾಳಂ ಮತ್ತು ಒರಿಯಾ ಭಾಷೆಗಳಿಗೆ ಈಗಾಗಲೇ ಶಾಸ್ತ್ರೀಯ ಸ್ಥಾನ ದೊರೆತಿರುವುದರಿಂದ ಶಾಸ್ತ್ರೀಯ ಭಾರತೀಯ ಭಾಷೆಗಳ ಸಂಖ್ಯೆ ಈಗ 6 ರಿಂದ 11 ಕ್ಕೆ ತಲುಪಿದೆ. ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬೆಂಗಾಲಿ ಭಾಷೆಗಳನ್ನು ಪ್ರತಿಷ್ಠಿತ ವಿಭಾಗದಲ್ಲಿ ಸೇರಿಸಲಾಗಿದೆ. 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಮೊದಲ ಭಾಷೆ ತಮಿಳು, ನಂತರ 2005ರಲ್ಲಿ…
ಕರ್ನಾಟಕ ಲೋಕಸೇವಾ ಆಯೋಗದಿಂದಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ42 (ಹೈದ್ರಾಬಾದ್-ಕರ್ನಾಟಕ ವೃಂದ 12 ಮತ್ತು ಉಳಿಕೆ ಮೂಲ ವೃಂದ) ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ (ಗ್ರೇಡ್-1) ಹುದ್ದೆಗಳ ನೇಮಕಾತಿ No. of posts: 42 Application Start Date: 3 ಅಕ್ಟೋಬರ್ 2024 Application End Date: 4 ನವೆಂಬರ್ 2024 Work Location: ಕರ್ನಾಟಕ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. Qualification: ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. Fee: * ಸಾಮಾನ್ಯ ಅಭ್ಯರ್ಥಿಗಳಿಗೆ ರೂ 600/- * ಹಿಂದುಳಿದ ವರ್ಗದ (2A/2B/3A/3B) ಅಭ್ಯರ್ಥಿಗಳಿಗೆ ರೂ 300/- * ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 50/- * SC/ST/CAT-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. Age Limit: ಕನಿಷ್ಠ 21 ವರ್ಷಗಳನ್ನು ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷ ವಯೋಮಿತಿಗಳನ್ನು ಮೀರಿರಬಾರದು.ವಯೋಮಿತಿ ಸಡಿಲಿಕೆ:SC/ST/Cat-1 ಅಭ್ಯರ್ಥಿಗಳಿಗೆ: 05 ವರ್ಷಗಳು2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: 03…
ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ 1497 ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ & ಡೆಲಿವರಿ, ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – IT ಆರ್ಕಿಟೆಕ್ಟ್, ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫಾರ್ಮಶನ್ ಸೆಕ್ಯೂರಿಟಿ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. No. of posts: 1497 Application Start Date: 14 ಸೆಪ್ಟೆಂಬರ್ 2024 Application End Date: 14 ಅಕ್ಟೋಬರ್ 2024 Work Location: ಭಾರತದಾದ್ಯಂತ Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. Qualification: ಹುದ್ದೆಗಳಿಗೆ ಅನುಗುಣವಾಗುವಂತೆ BE. /B. Tech / MCA/ M. Tech/ M.Sc/ MBA ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. Fee: ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ EWS/ OBC ಅಭ್ಯರ್ಥಿಗಳು 750/- ರೂ ಅರ್ಜಿ…
ಸಿನಿಮಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದ, ಡಿಸ್ಕೋ ಡ್ಯಾನ್ಸರ್ ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದ ಬೆಂಗಾಲಿ ಲೆಜೆಂಡರಿ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಅಕ್ಟೋಬರ್ 8ರಂದು ನಡೆಯುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 2022 ರ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಶಸ್ತಿಯನ್ನು ಮಿಥುನ್ ಚಕ್ರವರ್ತಿ ಅವರಿಗೆ ನೀಡಲಾಗುತ್ತದೆ. 74 ವರ್ಷದ ಚಕ್ರವರ್ತಿ ಅವರು ಅವರ 1976ರ ಚಲನಚಿತ್ರ ‘ಮೃಗಯಾ’ ಸಿನಿಮಾದ ಮೂಲಕ ನಟನೆ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಈ ಸಿನಿಮಾಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿದೆ. ಅವರು ‘ಕಸಂ ಪೈದಾ ಕರ್ನೆ ವಾಲೆ ಕಿ’ ಮತ್ತು ‘ಕಮಾಂಡೋ’ ಸಿನಿಮಾದಲ್ಲಿಯೂ ತಮ್ಮ ನಟನೆಯ ಮೂಲಕ ಹೆಸರು ಪಡೆದಿದ್ದಾರೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಸಿನಿಮಾ ಕ್ಷೇತ್ರದಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. 1969 ರಲ್ಲಿ ದೇವಿಕಾ ರಾಣಿ ರೋರಿಚ್ ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಸ್ವೀಕರಿಸಿದರು.ಪ್ರಶಸ್ತಿ ಸ್ವೀಕರಿಸುವವರನ್ನು…
ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. * 2024 ಸೆಪ್ಟೆಂಬರ್ 27 ವಿಶ್ವ ಪ್ರವಾಸೋದ್ಯಮ ದಿನದ ಥೀಮ್ ‘ಟೂರಿಸಂ ಅಂಡ್ ಪೀಸ್’ (ಪ್ರವಾಸೋದ್ಯಮದ ಮತ್ತು ಶಾಂತಿ)ಎಂಬುವುದಾಗಿದೆ. 1979 ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ವರ್ಡ್ ಟೂರಿಸಂ ಆರ್ಗನೈಜೇಷನ್ (UNWTO) ಶಾಸನಗಳನ್ನು ಅಂಗೀಕರಿಸಿತ್ತು. 1980 ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿಗಳನ್ನು ಅಂಗೀಕರಿಸಿತು ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ ಏಕೆಂದರೆ ಈ (ಸೆಪ್ಟೆಂಬರ್ 27) ದಿನಾಂಕವು UNWTO ನ ಶಾಸನಗಳನ್ನು ಅಳವಡಿಸಿಕೊಂಡ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರತಿ ವರ್ಷ ನಡೆಯುವ ಅತ್ಯುತ್ತಮ ಪ್ರವಾಸಿ ಹಳ್ಳಿಗಳು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರವಾಸೋದ್ಯಮ ಭಾರತದಲ್ಲಿ…
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಸ್ಟ್ 27 ರಂದು ನಡೆದ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರಿ (KPSC KAS) ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿ ವಿಚಾರದ ಕುರಿತು ಗಮನ ಹರಿಸಿ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳೊಳಗಾಗಿ ಈ ಮರುಪರೀಕ್ಷೆ ಮಾಡುವಂತೆ ಕೆಪಿಎಸ್ಸಿಗೆ ಸೂಚನೆ ನೀಡಿದರು. ಅದರಂತೆ ಇದೀಗ ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೆಷನರಿ (KAS) 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು2024 ಡಿ.29 ರಂದು ನಡೆಸಲು ಮುಂದಾಗಿದೆ. ಅಭ್ಯರ್ಥಿಗಳು ದೃತಿಗೆಡದೆ ತಮ್ಮ ತಯಾರಿಯನ್ನು ಮತ್ತಷ್ಟು ಚುರುಕು ಗೊಳಿಸಿ ಉತ್ತಮ ತಯಾರಿ ಮಾಡಿಕೊಳ್ಳಿ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 402 Civil ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) ಹುದ್ದೆಗಳ ನೇಮಕಾತಿಗಾಗಿ 2021 ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು, ಹಾಗೂ ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಇಲಾಖೆಯು ಈ ಹುದ್ದೆಗಳಿಗೆ ದೈಹಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ನೇಮಕಾತಿಯ ಮುಂದಿನ ಹಂತವಾದ ಲಿಖಿತ ಪರೀಕ್ಷೆಯನ್ನು ದಿನಾಂಕ ಅಕ್ಟೋಬರ್ 03 ರಂದು ನಡೆಸಲು ನಿರ್ಧರಿಸಲಾಗಿದೆ. ಒಟ್ಟು 402 ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು 66,990 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ
ಪ್ರತಿ ವರ್ಷ ಸೆಪ್ಟೆಂಬರ್ 26 ರಂದು ಪರಿಸರದ ಸ್ಥಿತಿಯ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಅದು ಹದಗೆಡದಂತೆ ತಡೆಯಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸಲು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಿಂದ ಉಂಟಾಗುವ ಬೆದರಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು. ನಾಟಕ ಮತ್ತು ಆರೋಗ್ಯ ಶಿಬಿರಗಳಂತಹ ಕಾರ್ಯಗಳಲ್ಲಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಮಾನವನ ಆರೋಗ್ಯಕ್ಕೆ ಪರಿಸರ ಕಾಳಜಿಯ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಲು ಈ ದಿನದ ಉದ್ದೇಶವಾಗಿದೆ. ಸಾರ್ವಜನಿಕ ಆರೋಗ್ಯಕ್ಕೆ ನೀರು ಮತ್ತು ವಾಯು ಮಾಲಿನ್ಯ, ಆಹಾರ ಸುರಕ್ಷತೆ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬುದನ್ನು ಈ ದಿನವು ಎತ್ತಿ ತೋರಿಸುತ್ತದೆ. ನಮ್ಮ ಪರಿಸರದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸಲು 2011 ರಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ (IFEH) ವಿಶ್ವ ಪರಿಸರ ಆರೋಗ್ಯ ದಿನವನ್ನು ಸ್ಥಾಪಿಸಲಾಯಿತ್ತು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ನಿರ್ವಾಹಕರು (Conductor) ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಸಂಬಂಧಿಸಿದಂತೆ KEA ಯು ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿ ಪರೀಕ್ಷೆಯನ್ನು ದಿನಾಂಕ 2024 ಸೆಪ್ಟೆಂಬರ್- 01 ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತು. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು ದಿನಾಂಕ 11.09.2024 ರಂದು ಪ್ರಕಟಿಸಲಾಗಿರುತ್ತದೆ. ಅದರಂತೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ತಾತ್ಕಾಲಿಕ ಅಂಕಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್ ಮೂಲಕ ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 18.09.2024 ಸಂಜೆ 5.30 ರೊಳಗೆ ನಿಗದಿತ ಲಿಂಕ್ ಮೂಲಕ ಪೂರಕ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಸಲಾಗಿತ್ತು. ತಾತ್ಕಾಲಿಕ ಅಂಕ ಪಟ್ಟಿಗೆ ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಭ್ಯರ್ಥಿಯು ಪರೀಕ್ಷೆಯಲ್ಲಿ ಗಳಿಸಿದ ಅಂತಿಮ ಅಂಕಗಳನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಅಂತಿಮ…
KPSC ವು ಅಧಿಸೂಚನೆ ದಿನಾಂಕ: 28-08-2023 ರ ಅಧಿಸೂಚನೆಯಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕ (CTI) ಪರೀಕ್ಷೆ 2024 ಕಳೆದ ಜನವರಿ 20 ಮತ್ತು 21, 2024 ರಂದು ಯಶಸ್ವಿಯಾಗಿ ನಡೆಸಿತ್ತು, ಈ ನೇಮಕಾತಿಯು ಕಲ್ಯಾಣ ಕರ್ನಾಟಕ 15 ಹುದ್ದೆಗಳಿಗೂ ಹಾಗೂ ಉಳಿದ ಮೂಲ ವೃಂದದ 230 ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯನ್ನು ನಡೆಸಿತ್ತು. KPSC ವು ಅಧಿಸೂಚಿಸಲಾದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ದಿನಾಂಕ:04-10-2024 ರಿಂದ 09-10-2024ರ ವರೆಗೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 15 ಹುದ್ದೆಗಳಿಗೆ ದಿನಾಂಕ:04-10-2024ರಂದು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಹಾಗೂ ಇ-ಮೇಲ್ ರವಾನಿಸಲಾಗಿದೆ. ಅಲ್ಲದೇ ಮೂಲ ದಾಖಲೆ ಪರಿಶೀಲನೆಗೆ ನಿಗದಿಪಡಿಸಲಾದ ದಿನಾಂಕ/ಸಮಯವಾರು ಅಭ್ಯರ್ಥಿಗಳ ವೇಳಾ ಪಟ್ಟಿಯನ್ನು ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅದರಂತೆ ಅಭ್ಯರ್ಥಿಗಳು ಹಾಜರಾಗಲು ಈ ಆಯೋಗವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಭ್ಯರ್ಥಿಗಳು ಕೂಡಲೇ ತಮ್ಮ email ಗಳನ್ನೂ ಪರಿಶೀಲಿಸಿಕೊಂಡು ತಮಗೆ…