Author: Web Desk

ಕೇಂದ್ರ ಶಿಕ್ಷಣ ಮಂಡಳಿಯ ಯಾವುದೇ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಲು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ (CTET)ಅರ್ಜಿ ಆಹ್ವಾನಿಸಲಾಗಿದೆ. * ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ 2023 ಕ್ಕೆ ನಿಗದಿಪಡಿಸಿದ ಪರೀಕ್ಷಾ ಶುಲ್ಕದ ವಿವರ ಈ ಕೆಳಗಿನಂತಿದೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – ಪತ್ರಿಕೆ-1 ಅಥವಾ ಪತ್ರಿಕೆ-2 ಕ್ಕೆ ಮಾತ್ರ  1000/– ಪತ್ರಿಕೆ-1 ಮತ್ತು ಪತ್ರಿಕೆ-2 ಕ್ಕೆ ರೂ 1200/-  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ – ಪತ್ರಿಕೆ-1 ಅಥವಾ ಪತ್ರಿಕೆ-2 ಕ್ಕೆ ಮಾತ್ರ 500/– ಪತ್ರಿಕೆ-1 ಮತ್ತು ಪತ್ರಿಕೆ-2 ಕ್ಕೆ ರೂ 600/- ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಬರೆಯಲು ನಿಗದಿಪಡಿಸಿದ ಅರ್ಹತೆಯ ಕುರಿತ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸತಕ್ಕದ್ದು. ಪರೀಕ್ಷಯು ಜುಲೈ/ ಅಗಸ್ಟ್ ನಲ್ಲಿ ನಡೆಯಲಿದೆ. Application Start Date: 27 ಎಪ್ರಿಲ್ 2023 Application End Date: 26 ಮೇ 2023 Last Date for Payment:  26 ಮೇ 2023 Apply…

Read More
Job

ಅರ್ಜಿಯನ್ನು ಸಲ್ಲಿಸುವ ವಿಳಾಸ:Principal , Sainik School Bijapur – 586108 ಹುದ್ದೆಗಳ ವಿವರ : 08* LDC – 01* Music Teacher – 01* PEM/PTI – CUM Matron – 01* Counselor – 01* Ward Boys – 04 – ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಆರಂಭದ ದಿನದಿಂದ 21 ದಿನಗಳೊಳಗಾಗಿ ಅಂಚೆಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. No. of posts: 8 Application Start Date: 29 ಎಪ್ರಿಲ್ 2023 Application End Date: 19 ಮೇ 2023 Work Location: ಬಿಜಾಪುರ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಲಾಗುವುದು ತದನಂತರ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC/ PUC/ Diploma/ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.-…

Read More

ಪ್ರಧಾನಿ ನರೇಂದ್ರ ಮೋದಿ ಅವರ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ನೂರನೇ ಸಂಚಿಕೆ ಏಪ್ರಿಲ್ 30 ರಂದು ಪೂರ್ಣಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ 100 ರೂಪಾಯಿ ವಿಶೇಷ ಹೊಸ ನಾಣ್ಯ ಬಿಡುಗಡೆ ಮಾಡಲಾಗುವುದು. 44 ಮಿಲಿ ಮೀಟರ್ ಸುತ್ತಳತೆಯ ವಿಶೇಷ ಕಾಯಿನ್ ಅನ್ನು ಬೆಳ್ಳಿ, ತಾಮ್ರ, ನಿಕ್ಕಲ್, ಸತುವಿನಿಂದ ಮಾಡಲಾಗಿದೆ. ಒಂದು ಬದಿ ಮೈಕ್ರೋಫೋನ್ ಚಿತ್ರ ಇದ್ದು, 35 ಗ್ರಾಂ ತೂಕ ಹೊಂದಿದೆ. ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ತಂಭ ಮತ್ತು ಕೆಳಗೆ ಸತ್ಯಮೇವ ಜಯತೆ ಎನ್ನುವ ವಾಕ್ಯ ಇರುತ್ತದೆ. ನಾಣ್ಯದ ಒಂದು ಬದಿಯಲ್ಲಿ 100 ಮುಖಬೆಲೆಯ ಗುರುತು ಹಾಕಲಾಗುವುದು. ಮತ್ತೊಂದು ಬದಿಯಲ್ಲಿ ‘ಮನ್ ಕಿ ಬಾತ್’ 100ನೇ ಸಂಚಿಕೆಯ ಸಂಕೇತವಿರುತ್ತದೆ. ಇದರಲ್ಲಿ ಧ್ವನಿ ತರಂಗಗಳಿರುವ ಮೈಕ್ರೋಫೋನ್ ಚಿತ್ರ ಮುದ್ರಿಸಲಾಗುವುದು. ಏಪ್ರಿಲ್ 30 ರಂದು ಪ್ರಧಾನಿಯವರ ‘ಮನ್ ಕಿ ಬಾತ್’ ನೂರನೇ ಆವೃತ್ತಿ ಭಾಷಣ ಪ್ರಸಾರವಾಗಲಿದ್ದು, ಆಯ್ದ ಒಂದು ಲಕ್ಷ ಸ್ಥಳಗಳಲ್ಲಿ ಪ್ರಸಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ 2010, 2011, 2012,…

Read More

ಟಿಬೆಟಿಯನ್ ಧರ್ಮಗುರು 87 ವರ್ಷದ ದಲೈಲಾಮಾ ಅವರಿಗೆ ಪ್ರತಿಷ್ಠಿತ ‘ರೇಮನ್ ಮ್ಯಾಗ್ಸೆಸ್ಸೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. “ಇದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ದೊರಕಿದ ಮೊದಲ ಅಂತಾ ರಾಷ್ಟ್ರೀಯ ಪ್ರಶಸ್ತಿ ಎಂದು ಹೇಳಲಾಗಿದೆ. 1957ರಲ್ಲಿ ನಿಧನರಾದ ಫಿಲಿಫೈನ್ಸ್ ಮಾಜಿ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆ ಅವರ ಹೆಸರಿನಲ್ಲಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗು ತ್ತದೆ. 2019ರಲ್ಲಿ ಪತ್ರಕರ್ತ ರವೀಶ್ ಕುಮಾರ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿತ್ತು. ನಾಯಕತ್ವ, ಶಾಂತಿ ಸ್ಥಾಪನೆ, ಸಾಹಿತ್ಯ, ಪತ್ರಿಕೋದ್ಯಮ, ಸಾಮಾಜಿಕ ನಾಯಕತ್ವ, ಸಾರ್ವಜನಿಕ ಸೇವೆ, ಸರ್ಕಾರಿ ಸೇವೆ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ವಿನೋಬಾ ಭಾವೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಮದರ್ ತೆರೇಸಾ, ಜಯಪ್ರಕಾಶ್ ನಾರಾಯಣ್, ಸತ್ಯಜಿತ್ ರೇ, ಎಂಎಸ್ ಸುಬ್ಬುಲಕ್ಷ್ಮಿ, ಕೆ.ವಿ. ಸುಬ್ಬಣ್ಣ, ರವಿಶಂಕರ್, ಕಿರಣ್ ಬೇಡಿ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದ ಪ್ರಮುಖರಾಗಿದ್ದಾರೆ.

Read More

ಜಿಂಬಾಬ್ವೆ ಕರೆನ್ಸಿಯ ಕುಸಿತದ ಮೌಲ್ಯವನ್ನು ಎದುರಿಸಲು, ರಿಸರ್ವ್ ಬ್ಯಾಂಕ್ ಆಫ್ ಜಿಂಬಾಬ್ವೆ (RBZ) ಚಿನ್ನದ ಬೆಂಬಲಿತ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುವ ಯೋಜನೆಗಳನ್ನು ಪ್ರಕಟಿಸಿದೆ.  ಡಿಜಿಟಲ್ ಚಿನ್ನದ ಟೋಕನ್‌ಗಳು ಎಲೆಕ್ಟ್ರಾನಿಕ್ ಹಣದ ಒಂದು ರೂಪವಾಗಿರುತ್ತದೆ, RBZ ನಲ್ಲಿ ಚಿನ್ನದ ಬೆಂಬಲವನ್ನು ಹೊಂದಿರುತ್ತದೆ. ಇದು ಸಣ್ಣ ಪ್ರಮಾಣದ ಜಿಂಬಾಬ್ವೆ ಡಾಲರ್‌ಗಳನ್ನು ಹೊಂದಿರುವವರು ತಮ್ಮ ಹಣವನ್ನು ಟೋಕನ್‌ಗಳಿಗೆ ವಿನಿಮಯ ಮಾಡಿಕೊಳ್ಳಲು ಮತ್ತು ವಿನಿಮಯ ದರದ ಏರಿಳಿತಗಳ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜಿಂಬಾಬ್ವೆ ಆರ್ಥಿಕತೆಯು ಡ್ಯುಯಲ್ ಕರೆನ್ಸಿ ರಚನೆಯ ಮೇಲೆ ಕಾರ್ಯನಿರ್ವಹಿಸುತ್ತದೆ, ಜಿಂಬಾಬ್ವೆ ಡಾಲರ್ ಮತ್ತು ಯುಎಸ್ ಡಾಲರ್ ಬಳಕೆಯಲ್ಲಿದೆ. RBZ ಪ್ರಕಾರ, US ಡಾಲರ್ ಪ್ರಸ್ತುತ ಪ್ರಾಬಲ್ಯ ಹೊಂದಿದೆ ಮತ್ತು ಸುಮಾರು 70% ದೇಶೀಯ ವಹಿವಾಟುಗಳನ್ನು ಹೊಂದಿದೆ.  ಜಿಂಬಾಬ್ವೆ ಡಾಲರ್‌ನ ಕುಸಿತವನ್ನು ತಡೆಯಲು ಮತ್ತು ಯುಎಸ್ ಡಾಲರ್‌ಗೆ ಬೇಡಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, RBZ ಜುಲೈ 2022 ರಲ್ಲಿ ಚಿನ್ನದ ನಾಣ್ಯಗಳನ್ನು ಪರಿಚಯಿಸಿತು.

Read More

ಪಂಚಾಯತ್ ರಾಜ್ ಸಚಿವಾಲಯವು ನವದೆಹಲಿಯಲ್ಲಿ ಏಪ್ರಿಲ್ 17 ರಿಂದ ಏಪ್ರಿಲ್‌ 21ರ ವರೆಗೆ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳ ಸಪ್ತಾಹವನ್ನು ಆಯೋಜಿಸಿದ್ದು, ಕಾರ್ಯಕ್ರಮವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ ಮತ್ತು ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಏಪ್ರಿಲ್ 24ರಂದು ನಿಗದಿಪಡಿಸಲಾದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಪೂರ್ವಭಾವಿಯಾಗಿ ಆಜಾದಿ ಕಾ ಅಮೃತ್ ಮಹೋತ್ಸವ 2.0 ರ ಭಾಗವಾಗಿ ಪಂಚಾಯತ್ ರಾಜ್ ಸಚಿವಾಲಯವು ಇಂದಿನಿಂದ 21ರ ವರೆಗೆ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳ ವಾರವನ್ನು ಆಚರಿಸಲಿದೆ.

Read More

ಭಾರತದಲ್ಲೇ ಅತಿ ಎತ್ತರವಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆಲಂಗಾಣದ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿದ್ದು, ಉದ್ಘಾಟನೆ ಏಪ್ರಿಲ್ 14 ಅಂಬೇಡ್ಕರ್ ಜಯಂತಿ ದಿನದಂದು ಮಾಡಲಾಗಿದೆ. ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅಂಬೇಡ್ಕರ್‌ರವರ 132ನೇ ಜನ್ಮ ದಿನದಂದು ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ. 125 ಅಡಿ ಎತ್ತರವಿರುವ ಈ ಪ್ರತಿಮೆಯನ್ನು ಸುಮಾರು 11 ಎಕರೆ ಜಾಗದಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿಮೆ ನಿಂತಿರುವ ವೇದಿಕೆಯು 26,258 ಚದುರ ಅಡಿ ವಿಸ್ತೀರ್ಣ ಹೊಂದಿದ್ದು, ಮೂರು ಅಂತಸ್ತಿನ ಕಟ್ಟಡವಿದೆ. ಅದರಲ್ಲಿ ಅಂಬೇಡ್ಕರ್ ಅವ್ರ ಜೀವನ ಚರಿತ್ರೆಯನ್ನ ಬಿಂಬಿಸುವ ಕಲಾಕೃತಿಗಳು, ಪುಸ್ತಕ ಭಂಡಾರವಿದ್ದು, 100 ಸೀಟುಗಳ ಆಡಿಟೋರಿಯಂ ಕೂಡ ಇದೆ. ಅಂದ್ಹಾಗೆ ಪದ್ಮಭೂಷಣ ಪುರಸ್ಕೃತ ಶಿಲ್ಪಿ ರಾಮ್‌ ವಾಂಜಿ ಸುತಾರ್‌ ಅವ್ರು ಪ್ರತಿಮೆಯನ್ನ ನಿರ್ಮಿಸಿದ್ದಾರೆ.

Read More

ಬಾಲಿವುಡ್‌ ಬಾದ್‌ ಷಾ ಶಾರುಖ್ ಖಾನ್ ಅವರು ಟೈಮ್ ಮ್ಯಾಗಝಿನ್‌ನ 2023ರ  TIME100 ಓದುಗರ ಸಮೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟ ಇರಾನ್ ನ ಮಹ್ಸಾ ಅಮಿನಿ ಇದ್ದಾರೆ. ಆರೋಗ್ಯ ಕಾರ್ಯಕರ್ತರು ಶೇ.2ರಷ್ಟು ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಮಾರ್ಕೆಲ್ ಅವರು ಸಮೀಕ್ಷೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಲಿಯೊನೆಲ್ ಮೆಸ್ಸಿ ಐದನೇ ಸ್ಥಾನದಲ್ಲಿದ್ದಾರೆ. ಜಗತ್ತಿನ 100 ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ ಮೊದಲ ಸ್ಥಾನ ಪಡೆದಿರುವುದು ಅವರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಟೈಮ್ಸ್‌ನ ವರದಿಯ ಪ್ರಕಾರ, ಈ ಸಮೀಕ್ಷೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಮತ ಚಲಾಯಿಸಿದ್ದು, ಶಾರುಖ್ ಖಾನ್ ಒಟ್ಟು ಮತಗಳಲ್ಲಿ ಶೇಕಡಾ 4 ರಷ್ಟು ಪಡೆದಿದ್ದಾರೆ.  

Read More
Job

ಭಾರತೀಯ ಅಂಚೆ ಇಲಾಖೆಯಲ್ಲಿ ಸಿಬ್ಬಂದಿ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. No. of posts: 4 Application Start Date: 8 ಎಪ್ರಿಲ್ 2023 Application End Date: 14 ಮೇ 2023 Work Location: ಭಾರತದಾದ್ಯಂತ Selection Procedure: ಡ್ರೈವಿಂಗ್ ಟೆಸ್ಟ್ ಮತ್ತು ಸಂದರ್ಶನ ನಡೆಸುವ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. Age Limit: ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಠ 56 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ. Pay Scale: ಮಾಸಿಕ 19,900/- ರಿಂದ 63,200/- ವೇತನವನ್ನು ನಿಗದಿ ಪಡಿಸಲಾಗಿದೆ.  ಜೊತೆಗೆ ಇತರ ಭತ್ಯೆಗಳು ದೊರೆಯಲಿವೆ.

Read More

ಪ್ರತಿ ವರ್ಷ ಏಪ್ರಿಲ್ 07ರಂದು ವಿಶ್ವ ಆರೋಗ್ಯ ದಿನ (World Health Day 2023)ವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿಶೇಷ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತದೆ.  ಈ ವರ್ಷದ ಥೀಮ್  “Health For All ” ( ಎಲ್ಲರಿಗೂ ಆರೋಗ್ಯ ). ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ಸಹಾಯ ಮಾಡಲು ಈ ದಿನ ಹಲವು ಸಲಹೆಗಳನ್ನು ನೀಡಲಾಗುತ್ತದೆ.

Read More