Subscribe to Updates
Get the latest creative news from FooBar about art, design and business.
Author: Web Desk
* ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕರ್ಣಾಟಕಬ್ಯಾಂಕ್’ ಭೀಮ್-ಯುಪಿಐ’ ವಹಿವಾಟುಗಳಲ್ಲಿ ಶೇಕಡಾವಾರು ಗರಿಷ್ಠ ಗುರಿಯನ್ನು ಸಾಧಿಸಿದ್ದಕ್ಕಾಗಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡುವ ಅಡಿಯಲ್ಲಿ ‘ಪ್ರತಿಷ್ಟಾಪುರಸ್ಕಾರ’ ಗೌರವಕ್ಕೆ ಪಾತ್ರವಾಗಿದೆ.* ‘ಕೆಬಿಎಲ್ ವಿಕಾಸ್-2.0 ಪರಿವರ್ತನಾ ಪ್ರಕ್ರಿಯೆಯ ಭಾಗವಾದ ಅಡಿಯಲ್ಲಿ ಸಂಪೂರ್ಣ ಡಿಜಿಟಲ್ ವ್ಯವಹಾರ ವನ್ನು ಕೈಗೊಳ್ಳುವತ್ತ ಬ್ಯಾಂಕ್ ಮುನ್ನುಗ್ಗುತ್ತಿದೆ. ಕರ್ಣಾಟಕ ಬ್ಯಾಂಕ್ ತನ್ನ ಫಲಪ್ರದ ಅಸ್ತಿತ್ವದ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ದೊರೆತಿರುವ ಈ ಪ್ರಶಸ್ತಿಯು ಬ್ಯಾಂಕಿನ ಸಂಸ್ಥಾಪಕರಿಗೆ ಸಂದ ಗೌರವವಾಗಿದೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್, ಎಂದು ಹೇಳಿದರು.
* ಡಿವೈನ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಗೌರವಕ್ಕೆ ನಟ ರಿಷಬ್ ಶೆಟ್ಟಿ ಭಾಜರಾಗಿದ್ದಾರೆ. ಫೆ.20ರಂದು ಮುಂಬೈನ ತಾಜ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. * ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ಅವರ ಸಿನಿಜೀವನಕ್ಕೆ ದೊಡ್ಡ ಟರ್ನಿಂಗ್ ಪಾಯಿಂಟ್ ನೀಡಿತು. ಆ ಸಿನಿಮಾ ಬಳಿಕ ರಿಷಬ್ ಖ್ಯಾತಿ ಜಗದಗಲಕ್ಕೂ ಹರಡಿದೆ. * ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ. * ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಾಂಶುಪಾಲರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾಂಕ 28 ಫೆಬ್ರುವರಿ 2023 ಹಾಗೂ 04 ಮಾರ್ಚ್ 2023 (ಕಡ್ಡಾಯ ಕನ್ನಡ)ರಂದು ಪರೀಕ್ಷೆಯನ್ನು ನಡೆಸಲು ತಾತ್ಕಾಲಿಕವಾಗಿ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿತ್ತು, ಸದರಿ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅನೇಕ ಅಭ್ಯರ್ಥಿಗಳು ಪ್ರಸ್ತಾಪಿತ ದಿನಾಂಕದಂದು ಮ್ಯಾಕ್ ಮಾನ್ಯತೆ ಕಾರ್ಯಕ್ರಮ ಇರುವುದರಿಂದ ಪರೀಕ್ಷೆಯನ್ನು ಮುಂದೂಡುವಂತೆ ಕೋರಿರುತ್ತಾರೆ. ಕಾರಣ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಗಳನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಿದೆ.
* ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ ಸೈನಿಕ ಕಲ್ಯಾಣ & ಪುನರ್ವಸತಿ ಇಲಾಖೆ (DSWR)ಯಲ್ಲಿನದ್ವಿತೀಯ ದರ್ಜೆ ಸಹಾಯಕ(SDA) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 30/01/2023 ಮತ್ತು 01/02/2023 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು.* ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ (KSSCL)ದಲ್ಲಿನ ಸಹಾಯಕ ವ್ಯವಸ್ಥಾಪಕರು, ಕಿರಿಯ ಸಹಾಯಕರು ಮತ್ತು ಬೀಜ ಸಹಾಯಕರು ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 30/01/2023 ರಿಂದ 05/02/2023 ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು.ಈ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಇದೀಗ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ. ಸದರಿ ಕೀ ಉತ್ತರಗಳಲ್ಲಿ ಏನಾದರು ಆಕ್ಷೇಪಣೆಗಳಿದ್ದರೆ ದಿನಾಂಕ 14/02/2023 ರಿಂದ 22/02/2023 ವರೆಗೆ ಆಧಾರಸಹಿತ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.
* ಕೈವಲ್ಯ ತ್ರಿವಿಕ್ರಮ್ ಪರ್ ನಾಯಕ್, ಲಕ್ಷ್ಮಣ ಪ್ರಸಾದ್ ಆಚಾರ್ಯ, ಸಿ.ಪಿ. ರಾಧಾಕೃಷ್ಣ, ಗುಲಾಬ್ ಚಂದ್ ಕಟಾರಿಯಾ, ಶಿವಪ್ರತಾಪ್ ಶುಕ್ಲಾ, ಕನ್ನಡಿಗ ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಯಾದ ಎಸ್. ಅಬ್ದುಲ್ ನಜೀರ್ ಸಹಿತ ಆರು ಜನರನ್ನುರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. * ಆಂಧ್ರ ಪ್ರದೇಶಕ್ಕೆ ಸೈಯದ್ ಅಬ್ದುಲ್ ನಜೀರ್ ಅವರು ರಾಜ್ಯಪಾಲರಾಗಿ ನೇಮಕ ಗೊಂಡಿದ್ದಾರೆ. * ನಿವೃತ್ತ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ ನಾಯಕ್ ಅವರನ್ನು ಅರುಣಾಚಲಪ್ರದೇಶಕ್ಕೆ ನೇಮಕ ಮಾಡಲಾಗಿದೆ. * ಬಿಜೆಪಿ ಮುಖಂಡರಾದ ಲಕ್ಷ್ಮಣ ಪ್ರಸಾದ್ ಆಚಾರ್ಯ ಅವರು ಸಿಕ್ಕಿಂ ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಗೊಂಡಿದ್ದಾರೆ. * ಹಾಗೂ ಸಿ.ಪಿ. ರಾಧಾಕೃಷ್ಣ, ಶಿವಪ್ರತಾಪ್ ಶುಕ್ಲಾ ಮತ್ತು ಗುಲಾಬ್ ಚಂದ್ ಕಟಾರಿಯಾ ಅವರನ್ನು ಕ್ರಮವಾಗಿ ಜಾರ್ಖಂಡ್ ,ಹಿಮಾಚಲ ಪ್ರದೇಶ ,ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕಮಾಡಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಖಾಲಿ ಇರುವ ಒಟ್ಟು500 ಕ್ರೆಡಿಟ್ ಆಫೀಸರ್ ಇನ್ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ ಮತ್ತು ಐಟಿ ಆಫೀಸರ್ ಇನ್ ಸ್ಪೆಷಲಿಸ್ಟ್ ಸ್ಟ್ರೀಮ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯುಫೆಬ್ರುವರಿ 25 2023 ಕ್ಕೆ ಕೊನೆಗೊಳ್ಳುತ್ತದೆ. ಹುದ್ದೆಗಳ ವಿವರ : 500ಕ್ರೆಡಿಟ್ ಆಫೀಸರ್ ಇನ್ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ : 350 ಐಟಿ ಆಫೀಸರ್ ಇನ್ ಸ್ಪೆಷಲಿಸ್ಟ್ ಸ್ಟ್ರೀಮ್ : 150 No. of posts: 500 Application Start Date: 13 ಫೆಬ್ರುವರಿ 2023 Application End Date: 25 ಫೆಬ್ರುವರಿ 2023 Work Location: ಭಾರತದಾದ್ಯಂತ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. Fee:…
ಕರ್ನಾಟಕ ವಿಧಾನಸಭೆ ಸಚಿವಾಲಯ (KLA) ದಿಂದ ಕಂಪ್ಯೂಟರ್ ಆಪರೇಟರ್, ದಲಾಯತ್, ಕಿರಿಯ ಸಹಾಯಕರು, ಮತ್ತು ಸ್ವಾಗತಕಾರರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2022 ಡಿಸೆಂಬರ್ ನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಇಲಾಖೆಯು ಇದೀಗ ತನ್ನ ಜಾಲತಾಣದಲ್ಲಿ ತಾತ್ಕಾಲಿಕವಾಗಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಅಂಕಗಳ ಸಮೇತ ಪ್ರಕಟಿಸಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ
* ಭಾರತ-ASEAN ಡಿಜಿಟಲ್ ಮಂತ್ರಿಗಳ ಸಭೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆಯಿತು. ಇದು ವಾಸ್ತವಿಕವಾಗಿ ನಡೆಯಿತು. ಸಭೆಯ ವಿಷಯವು “ಸುಸ್ಥಿರ ಡಿಜಿಟಲ್ ಭವಿಷ್ಯದ ಕಡೆಗೆ ಸಿನರ್ಜಿ” ಆಗಿತ್ತು. * ಐಟಿ ಕ್ಷೇತ್ರದಲ್ಲಿ ಭಾರತ ಮತ್ತು ASEAN ನಡುವಿನ ಬಲವನ್ನು ಹೆಚ್ಚಿಸುವುದು ಸಭೆಯ ಮುಖ್ಯ ಉದ್ದೇಶವಾಗಿತ್ತು. ಇದನ್ನು ಸಾಧಿಸಲು, ಸಚಿವರು ಡಿಜಿಟಲ್ ವರ್ಕ್ ಪ್ಲಾನ್ ಅನ್ನು ಪ್ರಾರಂಭಿಸಿದರು.* ಯೋಜನೆಯ ಅಡಿಯಲ್ಲಿ, ದೇಶಗಳು ಉದಯೋನ್ಮುಖ ಸಂವಹನ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತವೆ. ಮುಖ್ಯವಾಗಿ ಅವರು ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆಯ ಮೇಲೆ ಕೇಂದ್ರೀಕರಿಸುತ್ತಾರೆ.* ಯೋಜನೆಯನ್ನು ರೂಪಿಸುವಲ್ಲಿ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ* ಈ ಕೆಲಸದ ಯೋಜನೆಯು ಈ ಕೆಳಗಿನವುಗಳನ್ನು ಒಳಗೊಂಡಿದೆ:- ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ಕ್ಷೇತ್ರಗಳಲ್ಲಿ ಅಪ್ಲಿಕೇಶನ್‌ಗಳನ್ನು ಹೆಚ್ಚಿಸಲು; ಇಲ್ಲಿ ದೇಶಗಳು ಮುಖ್ಯವಾಗಿ ಸ್ಮಾರ್ಟ್ ಸಿಟಿಗಳಲ್ಲಿ ಕೆಲಸ ಮಾಡುತ್ತವೆ.- ಮಾನದಂಡಗಳ ಮೇಲೆ ಕೇಂದ್ರೀಕರಿಸಲು ಮತ್ತು ಅವರು ಅಂತರರಾಷ್ಟ್ರೀಯ ಮಟ್ಟಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು- ಭದ್ರತಾ ರಕ್ಷಣೆ- ಡಿಜಿಟಲ್ ಆರೋಗ್ಯ- 5G…
* ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಮೊದಲ ಪಂದ್ಯದಲ್ಲಿ ಭಾರತ ತಂಡವು ಯಶಸ್ವಿಯಾಗಿದೆ. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಶತಕಗಳಿಸಿದ ಭಾರತ ತಂಡದ ಮೊದಲ ನಾಯಕ ರೋಹಿತ್ ಶರ್ಮಾ. * ಮೂರು ಮಾದರಿಗಳಲ್ಲಿಯೂ ಶತಕಗಳಿಸಿದ ವಿಶ್ವದ ನಾಲ್ಕನೇ ನಾಯಕ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ತಿಲಕರತ್ನ ದಿಲ್ತಾನ್, ದಕ್ಷಿಣ ಆಫ್ರಿಕಾದ ಫಫ್‌ಡುಪ್ಲೆಸಿ ಮತ್ತು ಪಾಕಿಸ್ತಾನ ಬಾಬರ್ ಆಜಂ ನಂತರ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು.
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಭಾರತಾದ್ಯಂತ41 ಹುದ್ದೆಗಳ ನೇಮಕಾತಿಯಾಗಿದೆ. ಜೂನಿಯರ್ ಅಸೋಸಿಯೇಟ್, ಸಹಾಯಕ ವ್ಯವಸ್ಥಾಪಕ ಮತ್ತು ಮುಖ್ಯ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 28/02/2023 ರೊಳಗಾಗಿ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿ ಹುದ್ದೆಗಳು ಖಾಲಿ ಇವೆ.ಇ-ಮೇಲ್ :careersippbonline.in ಹುದ್ದೆಗಳ ವಿವರ : Junior Associate (IT) 15Assistant Manager (IT) 10 Manager (IT) 9Senior Manager (IT) 5Chief Manager (IT) 2 No. of posts: 41 Application Start Date: 11 ಫೆಬ್ರುವರಿ 2023 Application End Date: 28 ಫೆಬ್ರುವರಿ 2023 Work Location: ಭಾರತದಾದ್ಯಂತ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಯಿಸಿರುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ನಂತರ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳುDegree ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿ…