Subscribe to Updates
Get the latest creative news from FooBar about art, design and business.
Author: Web Desk
* ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ – ಮಟ್ಟದ ಸಮೀಕ್ಷೆಯ (2020-21) ವರದಿ ಪ್ರಕಟವಾಗಿದೆ. ವರದಿಯ ಪ್ರಕಾರ ಉತ್ತರ ಪ್ರದೇಶವು ದೇಶದಲ್ಲಿಯೇ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದ್ದು ಒಟ್ಟು 8,114 ಕಾಲೇಜುಗಳಿವೆ ಹಾಗೂ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (4,532), ಮೂರನೇ ಸ್ಥಾನದಲ್ಲಿ ಕರ್ನಾಟಕ (4,233) ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ತಮಿಳುನಾಡು, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್, ತೆಲಂಗಾಣ ಇದ್ದು, 10ನೇ ಸ್ಥಾನದಲ್ಲಿ ಕೇರಳ ಇದೆ ಎಂದು ವರದಿ ಹೇಳಿದೆ. * ಮೊದಲ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಲಕ್ಷ ಜನಸಂಖ್ಯೆಗೆ 32 ಕಾಲೇಜುಗಳಿದ್ದರೆ, ಮಹಾರಾಷ್ಟ್ರ ದಲ್ಲಿ 34 ಹಾಗೂ ಕರ್ನಾಟಕದಲ್ಲಿ 62 ಕಾಲೇಜುಗಳಿವೆ. ಶಿಕ್ಷಣ ಸಚಿವಾಲಯ ಈ ವರದಿಯನ್ನು ಬಿಡುಗಡೆ ತಿಳಿಸಿದೆ.
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಫಿಟ್ಟರ್ ಆರ್ಮಮೆಂಟ್, ಫಿಟ್ಟರ್ ಜನರಲ್ ಮೆಕ್ಯಾನಿಕ್, ಪೇಂಟರ್, ಚಾಲಕ ಕ್ರೇನ್ ಮೊಬೈಲ್ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 248 ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 27-ಫೆಬ್ರವರಿ-2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. * ಹುದ್ದೆಗಳ ಸವಿವರಣೆಗಾಗಿ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ. No. of posts: 248 Application Start Date: 31 ಜನವರಿ 2023 Application End Date: 27 ಫೆಬ್ರುವರಿ 2023 Work Location: ಕರ್ನಾಟಕ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್, ಶಾರ್ಟ್ ಲಿಸ್ಟ್ ಮಾಡಿ ನಂತರ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 205/- ರೂ ಅರ್ಜಿ ಶುಲ್ಕವನ್ನು ಆನ್‌ಲೈನ್…
* ಸಾಹಸಸಿಂಹ, ಅಭಿನಯ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ಕನ್ನಡಿಗರ ಅಚ್ಚುಮೆಚ್ಚಿನ ಚಲನಚಿತ್ರ ನಟ ದಿವಂಗತ ಡಾ.ವಿಷ್ಣುವರ್ಧನ್ ರವರ ಸ್ಮಾರಕವನ್ನು ಮೈಸೂರಿನ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಉದ್ಬೂರು ಬಳಿಯ ಹಾಳಾಲು ಗ್ರಾಮದಲ್ಲಿ ನಿರ್ಮಿಸಲಾಗಿದೆ.* ವಿಷ್ಣುವರ್ಧನ್ ರವರ ಸ್ಮಾರಕವನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಿದರು. ಸ್ಮಾರಕ ಲೋಕಾರ್ಪಣೆಯಲ್ಲಿ ವಿಷ್ಣುವರ್ಧನ್ ರವರ ಕುಟುಂಬ ಹಾಗೂ ಅವರ ಜೊತೆ ಚಲನಚಿತ್ರದಲ್ಲಿ ನಟಿಸಿರುವ ಸಹಕಲಾವಿದರು ಉಪಸ್ಥಿತರಿದ್ದರು.* ಡಾ.ವಿಷ್ಣುವರ್ಧನ್ ರವರ ಸ್ಮಾರಕ 6.5 ಅಡಿ ಎತ್ತರವಾಗಿದ್ದು, ಸ್ಮಾರಕ ಕಟ್ಟಡದ ವಿಸ್ತೀರ್ಣ : 27 ಸಾವಿರ ಚದರ ಅಡಿ, 5 ಎಕರೆಯ ವಿಶಾಲವಾದ ಜಾಗ, 700 ಫೋಟೋಗಳ ಗ್ಯಾಲರಿ, ನೀರಿನ ಕಾರಂಜಿ, 240 ಆಸನಗಳ ಸುಸಜ್ಜಿತ ಸಂಭಾಂಗಣ, ವಿಶಾಲವಾದ ಉದ್ಯಾನ, ಭೂದೃಶ್ಯ, ಕಲಿಕಾ ಕೇಂದ್ರ, ತರಬೇತಿ ಕೊಠಡಿ ಹಾಗೂ ಒಟ್ಟು ಒಳಮಹಡಿ, ನೆಲಮಹಡಿ ಎಂಬ ಎರಡು ಬಗೆಯ ಮಹಡಿಗಳು ಇವೆಲ್ಲವೂ ಇವೆ.
* ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇಡೀ ತಂಡಕ್ಕೆ 5 ಕೋಟಿ ರೂ ಬಹುಮಾನ ಘೋಷಣೆ ಮಾಡಿದೆ.* ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶೆಫಾಲಿ ವರ್ಮಾ ನೇತೃತ್ವದ ಟಿ20 ತಂಡ 7 ವಿಕೆಟ್ ಅಂತರದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಮೊದಲ ಮಹಿಳೆಯರ ಅಂಡರ್-19 ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.
* ಭಾರತವು ಕುಷ್ಠರೋಗವನ್ನು ತೊಡೆದುಹಾಕಲು ತೀವ್ರವಾಗಿ ಹೋರಾಡುತ್ತಿದೆ. ದೇಶವು 2027 ರ ವೇಳೆಗೆ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕುವ ಗುರಿಯನ್ನು ಹೊಂದಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗಿಂತ ಮೂರು ವರ್ಷಗಳ ಗುರಿಯನ್ನು ನಿಗದಿಪಡಿಸಲಾಗಿದೆ. * ದೇಶದಲ್ಲಿ ಕುಷ್ಠರೋಗದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಮತ್ತು ರೋಗದ ಬಗ್ಗೆ ಜಾಗೃತಿ ಮೂಡಿಸಲು ಭಾರತವು ಜನವರಿ 30 ರಂದು ರಾಷ್ಟ್ರೀಯ ಕುಷ್ಠರೋಗ ವಿರೋಧಿ ದಿನವನ್ನು ಆಚರಿಸುತ್ತಿದೆ.* ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಮೂಲಕ 2030 ರ ವೇಳೆಗೆ ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಈ ಕೆಳಗಿನ ಗುರಿಗಳನ್ನು ಅನುಸರಿಸುವ ಮೂಲಕ ರೋಗವನ್ನು ನಿರ್ಮೂಲನೆ ಮಾಡಬಹುದು ಎಂದು ಅಂತರರಾಷ್ಟ್ರೀಯ ಸಂಸ್ಥೆ ನಂಬುತ್ತದೆ: – ಬಡತನವನ್ನು ಕೊನೆಗೊಳಿಸಿ – ಎಲ್ಲರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆ – ಎಲ್ಲರಿಗೂ ಶುದ್ಧ ನೀರು – ಅಸಮಾನತೆಯನ್ನು ಕಡಿಮೆ ಮಾಡುವದು
* ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಆಕರ್ಷಕ ಉದ್ಯಾನವನವನ್ನು ಇಲ್ಲಿಯವರೆಗೂ ಮೊಘಲ್ ಗಾರ್ಡನ್ಸ್ ಎನ್ನುವ ಹೆಸರನಿಂದ ಕರೆಯಲಾಗುತ್ತಿತ್ತು. ಈ ಉದ್ಯಾನವನವನ್ನು ಈಗ “ಅಮೃತ್ ಉದ್ಯಾನ” ಎಂದು ಕರೆಯಲಾಗುತ್ತದೆ. * ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿರುವ ಅಂಗವಾಗಿ “ಆಜಾದಿ ಕಾ ಅಮೃತ್ ಮಹೋತ್ಸವ” ಅಭಿಯಾನದ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಹೆಸರನ್ನು ನೀಡಿದ್ದಾರೆ ಎನ್ನಲಾಗಿದೆ.* ಜನವರಿ 31 ರಿಂದ ಮಾರ್ಚ್ 26 ರವರೆಗೆ ಈ ಉದ್ಯಾನವನ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇದರ ಹೊರತಾಗಿ, ಕೆಲವು ದಿನಗಳನ್ನು ವಿಶೇಷವಾಗಿ ವಿಕಲಚೇತನರಿಗೆ, ರೈತರು ಮತ್ತು ಮಹಿಳೆಯರುಗೆ ಮೀಸಲಿಡಲಾಗಿದೆ ಎಂದಿದ್ದಾರೆ.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಬೆಂಗಳೂರು ಇಲ್ಲಿ ಖಾಲಿ ಇರುವ 96 ಆಶೀಘ್ರಲಿಪಿಗಾರರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ ಮತ್ತು ನಾಲ್ಕನೇ ದರ್ಜೆ ನೌಕರರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ28/02/2023 ರೊಳಗೆ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.. ಹುದ್ದೆಗಳ ವಿವರ : 96ಶಾಖಾ ವ್ಯವಸ್ಥಾಪಕರು :04 ಹಿರಿಯ ಸಹಾಯಕರು : 19ಶೀಘ್ರಲಿಪಿಗಾರರು : 1ಕಿರಿಯ ಸಹಾಯಕರು : 43ಕಂಪ್ಯೂಟರ್ ಆಪರೇಟರ್ : 2ವಾಹನ ಚಾಲಕ : 4ನಾಲ್ಕನೇ ದರ್ಜೆ ನೌಕರರು : 23 No. of posts: 96 Application Start Date: 30 ಜನವರಿ 2023 Application End Date: 28 ಫೆಬ್ರುವರಿ 2023 Work Location: ಬೆಂಗಳೂರು ಜಿಲ್ಲಾ Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಅಂಗೀಕೃತ…
ಕರ್ನಾಟಕ ಲೋಕಸೇವಾ ಆಯೋಗದಲ್ಲಿ 07/03/2022 ರಂದು ಪೊಲೀಸ್ ಇಲಾಖೆಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ Group A ವೃಂದದ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 27/01/2023 ರಂದು Group A ವೃಂದದ ಸಹಾಯಕ ನಿರ್ದೇಶಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ (Exam Time Table) ಯನ್ನು KPSC ಇದೀಗ ಪ್ರಕಟಿಸಿದೆ. * ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಕೆಳಗೆ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.
ಧಾರವಾಡದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳನ್ನು ಒಳಗೊಂಡಂತೆ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 17/02/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ : 10 ಜೂನಿಯರ್ ರಿಸರ್ಚ್ ಫೆಲೋ – 05 ಸೀನಿಯರ್ ರಿಸರ್ಚ್ ಫೆಲೋ – 02 ಪ್ರಾಜೆಕ್ಟ್ ಅಸಿಸ್ಟಂಟ್ – 03 No. of posts: 10 Application Start Date: 24 ಜನವರಿ 2023 Application End Date: 17 ಫೆಬ್ರುವರಿ 2023 Work Location: ಧಾರವಾಡ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ B.Tech/ M.Tech/ BSc/ MSc/ BE/ ಡಿಪ್ಲೊಮಾ ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಕನಿಷ್ಠ 60 ಪ್ರತಿಶತದೊಂದಿಗೆ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಹೊಂದಿರಬೇಕು. Age Limit:…
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಭಾರತಾದ್ಯಂತ 40,000 ಕ್ಕೂ ಅಧಿಕ ಹುದ್ದೆಗಳ ಭರ್ಜರಿ ನೇಮಕಾತಿಯಾಗಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು16/02/2023 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿ 3036 ಹುದ್ದೆಗಳು ಖಾಲಿ ಇವೆ. No. of posts: 40889 Application Start Date: 27 ಜನವರಿ 2023 Application End Date: 16 ಫೆಬ್ರುವರಿ 2023 Work Location: ಭಾರತದಾದ್ಯಂತ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಯಿಸಿರುವ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ನಂತರ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು SSLC ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ವಯಸ್ಸು ಹಾಗೂ ಗರಿಷ್ಟ…