Subscribe to Updates
Get the latest creative news from FooBar about art, design and business.
Author: Web Desk
* ಫೆಬ್ರವರಿ 1, 2023ರ ಕೇಂದ್ರ ಬಜೆಟ್ ಮಂಡನೆಗೆ ತೆರೆ ಮರೆಯ ತಯಾರಿ ನಡೆಯುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆಗೆ ಸಿದ್ಧಗೊಳ್ಳುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಹಲವು ಜನರ ನಿರೀಕ್ಷೆಗಳನ್ನು ಪೂರೈಸುವ ಜವಾಬ್ದಾರಿ ಜೊತೆಗೆ ಹಣದುಬ್ಬರ ನಿಯಂತ್ರಣಕ್ಕೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ವಿತ್ತ ಸಚಿವೆಗೆ ಪ್ರಮುಖ ಸವಾಲಾಗಿದೆ. * ಕೇಂದ್ರ ಬಜೆಟ್‌ನಲ್ಲಿ ಅವರು ಮಂಡಿಸಲಿರುವ ಹಣಕಾಸಿನ ನೀತಿಗಳು ಮತ್ತು ತೆರಿಗೆ ನಿರ್ಬಂಧಗಳಂತಹ ನಿರ್ಧಾರಗಳನ್ನ ಘೋಷಿಸಬಹುದು. ಈ ಕ್ರಮಗಳು ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಬಹುದು. ಗಗನಕ್ಕೇರುತ್ತಿರುವ ಬೆಲೆಗಳನ್ನ ತಗ್ಗಿಸುವುದರ ಸವಾಲಿನ ಜೊತೆಗೆ ಹಣದುಬ್ಬರ ನಿಯಂತ್ರಿಸುವ ಗುರಿ
* ಸಶಸ್ತ್ರ ಪಡೆಗಳಲ್ಲಿನ ಸೇನಾ ಸಿಬ್ಬಂದಿಯ ಕೆಚ್ಚೆದೆಯ ಕಾರ್ಯಗಳನ್ನು ಗೌರವಿಸಲು ಭಾರತ ಸರ್ಕಾರವು ಶೌರ್ಯ ಪ್ರಶಸ್ತಿಗಳನ್ನು ನೀಡುತ್ತದೆ. ಪ್ರಶಸ್ತಿಗಳನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಲಾಗುತ್ತದೆ. * ಪರಮವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಮಹಾವೀರ ಚಕ್ರ, ಮತ್ತು ಶೌರ್ಯ ಚಕ್ರ ಇವು ಕೆಲವು ಶೌರ್ಯ ಪ್ರಶಸ್ತಿಗಳು. ಭಾರತದ ರಾಷ್ಟ್ರಪತಿಗಳು ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ವೀರಗಾಥಾ ಯೋಜನೆಯಡಿ, ಶೌರ್ಯ ಪ್ರಶಸ್ತಿ ವಿಜೇತರ ಕುರಿತು ಪ್ರಾಜೆಕ್ಟ್‌ಗಳನ್ನು ಮಾಡಲು ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಅವರಲ್ಲಿ ದೇಶಭಕ್ತಿಯನ್ನು ಬೆಳೆಸಲು ಇದನ್ನು ಮಾಡಲಾಗುತ್ತದೆ.
* ಭಾರತದ ರಾಜಧಾನಿ ದೆಹಲಿಯಲ್ಲಿ ಗುರುವಾರ ಜನೆವರಿ 26 ರಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಾರೀಶಕ್ತಿ ಥೀಮ್ ನ ಅಡಿ ಕರ್ತವ್ಯಪಥದಲ್ಲಿ ನಡೆದ ಕಾರ್ಯಕ್ರಮವು ಹಲವಾರು ಪ್ರಥಮಗಳಿಗೆ ಮತ್ತು ಹೊಸತುಗಳಿಗೆ ಸಾಕ್ಷಿಯಾಯಿತು. * ಪಥಸಂಚಲನದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ಸ್ವದೇಶಿಯಾಗಿ ನಿರ್ಮಿಸಿದ ಶಸ್ತ್ರಾಸ್ತ್ರಗಳು, ರಾಜ್ಯದ ನಾರೀಶಕ್ತಿ ಸೇರಿದಂತೆ ವಿವಿಧ ರಾಜ್ಯಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ದಚಿತ್ರಗಳು, ದೇಶದ ಮಿಲಿಟರಿ ಶಕ್ತಿ ಅನಾವರಣಗೊಂಡಿತು. * ದೇಶದ ಸಂಸ್ಕೃತಿ ಮತ್ತು ಪರಂಪರೆ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಬಿಂಬಿಸುವ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿವಿಧ ಸಚಿವಾಲಯದ 6 ಸ್ತಬ್ದಚಿತ್ರಗಳು ಪ್ರದರ್ಶನಗೊಂಡವು. ಕರ್ನಾಟಕ ಸರ್ಕಾರ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿಗೌಡ ಮತ್ತು ಸಾಲುಮರದ ತಿಮ್ಮಕ್ಕ ಇವರುಗಳ ಸಾಧನೆಯನ್ನು ‘ನಾರೀಶಕ್ತಿ’ ಥೀಮ್ ಸ್ತಬ್ದಚಿತ್ರ ಎಲ್ಲರ ಗಮನ ಸೆಳೆಯುವಂತೆ ಮಾಡಿತು. * ವಿಂಟೇಜ್ ಏರ್ ಕ್ರಾಫ್ಟ್ ಸೇರಿದಂತೆ 50 ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೂರೂ ಮಿಗ್ – 29,…
* ಕೇಂದ್ರ ಸರ್ಕಾರವು ಇತ್ತೀಚಿಗೆ ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾದವರ ಹೆಸರನ್ನು ಪ್ರಕಟಿಸಿದ್ದು, ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಸೇರಿ ಒಟ್ಟು ಆರು ಜನರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. * ಕನ್ನಡದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ರವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಐದು ಜನರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.* ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಡಾ.ಖದರ್ ವಲ್ಲಿ ದುಡಿಕುಲ್ಲಾ, ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಲು ಶ್ರಮಿಸಿದ ಕರ್ನಾಟಕ ಕೊಡುವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ, ಬೀದರ್ ನ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಇವರುಗಳು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದವರಾಗಿದ್ದರೆ.
* 2022 ರ ‘ವಿಶ್ವ ಜನಸಂಖ್ಯಾ ಪರಾಮರ್ಶೆ ವರದಿ’ಯನ್ನು ಅಮೇರಿಕ ಜನಗಣತಿ ಬ್ಯುರೋ ವಿಶ್ವ ಜನಸಂಖ್ಯಾ ಗಡಿಯಾರ (ವರ್ಲ್ಡ್ ಪಾಪ್ಯುಲೇಷನ್ ಕ್ಲಾಕ್) ಇತ್ತೀಚಿಗೆ ಬಿಡುಗಡೆ ಮಾಡಿದೆ. * 2022 ನವೆಂಬರ್ ವರೆಗೆ ಜನಸಂಖ್ಯೆಯು 800 ಕೋಟಿ ತಲುಪಬೇಕಿತ್ತು, ವರದಿಯ ಪ್ರಕಾರ 2022 ಸೆಪ್ಟೆಂಬರ್ ವರೆಗೆ ವಿಶ್ವ ಜನಸಂಖ್ಯೆಯು 790 ಕೋಟಿಯಾಗಿದೆ. 2015 ರಲ್ಲಿ ವಿಶ್ವ ಜನಸಂಖ್ಯೆಯು 720 ಕೋಟಿಯಾಗಿತ್ತು. * ವಿಶ್ವದಲ್ಲಿಯೇ 100 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಭಾರತ ಮತ್ತು ಚೀನಾ ಆಗಿವೆ. ವ್ಯಾಟಿಕನ್ ನಗರವು ಜಗತ್ತಿನ ಅತ್ಯಂತ ಕಡಿಮೆ ಜನಸಂಖ್ಯೆಯ ದೇಶವಾಗಿದೆ. ಅಲ್ಲಿ ಕೇವಲ 500 ಜನರು ನೆಲೆಸಿರುತ್ತಾರೆ.* ವಿಶ್ವ ಜನಸಂಖ್ಯೆಯ ಬೆಳವಣಿಗೆಯ ದರ : ಪ್ರತಿ ನಿಮಿಷ ಹುಟ್ಟುವ ಮಕ್ಕಳ ಸಂಖ್ಯೆ 140
* ದೇಶದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು 2008 ರಲ್ಲಿ ಭಾರತ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಾರಂಭಿಸಿತು. ಇದನ್ನು ಪ್ರತಿವರ್ಷ ಜನವರಿ 24 ರಂದು ಆಚರಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಕಳೆದ ವರ್ಷ “ಬೇಟಿ ಬಚಾವೋ, ಬೇಟಿ ಪಢಾವೋ” (ಬಿಬಿಬಿಪಿ) ಯೋಜನೆಯ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ.* ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮುಖ್ಯ ಮಹತ್ವವೆಂದರೆ ಭಾರತದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ, ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದಾಗಿದೆ.
* ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ಕ್ರಿಕೆಟ್ ರ್ಯಾಂಕ್ ನಲ್ಲಿ ಭಾರತ ತಂಡವು ಅಗ್ರಸ್ಥಾನಕ್ಕೇರಿದೆ. ಹೋಳ್ಕರ್ ಮೈದಾನದಲ್ಲಿ ಜನೆವರಿ 24 ರಂದು ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 90 ರನ್ ಗಳಿಂದ ಜಯಗಳಿಸಿತು.* ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಭಾರತ ತಂಡ ಜಯಗಳಿಸಿದೆ. 3 ದಶಕಗಳ ನಂತರ ರೋಹಿತ್ ಶರ್ಮಾರವರು 85 ಎಸೆತಗಳಲ್ಲಿ 100 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಶುಭಮನ್ ಗಿಲ್ ರವರು ಕೂಡ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಎರಡನೇ ಬಾರಿ 78 ಎಸೆತಗಳಲ್ಲಿ 100 ಹೆಚ್ಚು ರನ್ ಗಳಿಸಿದ್ದಾರೆ.
ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ) Group-C ಹುದ್ದೆಗಳ ನೇಮಕಾತಿ ಹಾಗೂ ನಗರ & ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ 22-01-2023ರಂದು ನಡೆದ ಲಿಖಿತ ಪರೀಕ್ಷೆಯ ಪತ್ರಿಕೆ-2ರ (GK) ಅಧಿಕೃತ & ತಾತ್ಕಾಲಿಕ ಸರಿ ಉತ್ತರ (Official Key Answers) ಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 31/8/2021ರಲ್ಲಿ ಅಧಿಸೂಚಿಸಲಾದ ಬೆಂಗಳೂರು ನಗರ ಘಟಕದಲ್ಲಿನ ಪೊಲೀಸ್ ಕಾನ್ಸ್ಟೆಬಲ್ 80 ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ 20 ಒಟ್ಟುಸೇರಿ 100 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಇಲಾಖೆಯು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ ಲೋಡ್ ಮಾಡಿಕೊಂಡು ನೋಡಬಹುದು.
ಕರ್ನಾಟಕ ಲೋಕಸೇವಾ ಆಯೋಗದಿಂದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ(SDA) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿತ್ತು, SDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲಾತಿ ಪರಿಶೀಲನೆ (Document Verification) ಗೆ ಆಯ್ಕೆಯಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯು ಇದೀಗ ಪ್ರಕಟಗೊಂಡಿದೆ. ಮೂಲ ದಾಖಲಾತಿ ಪರಿಶೀಲನೆಯನ್ನು ದಿನಾಂಕ 30 ಜನವರಿ 2023 ರಂದು ನಡೆಯಲಿದೆ. ದಾಖಲಾತಿ ಪರಿಶೀಲನೆ ನಡೆಯುವ ಸ್ಥಳ : ಕಾಲೇಜು ಶಿಕ್ಷಣ ಆಯುಕ್ತರ ಕಛೇರಿ, ಉನ್ನತ ಶಿಕ್ಷಣ ಸೌಧ, ಶೇಷಾದ್ರಿ ರಸ್ತೆ, ಬೆಂಗಳೂರು-560 001