Subscribe to Updates
Get the latest creative news from FooBar about art, design and business.
Author: Web Desk
* ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ(Bengaluru) ನಾಡಪ್ರಭು ಕೆಂಪೇಗೌಡರ (Statue of Kempegowda) 108 ಅಡಿಯ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ.* ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport) ಸಮೀಪ ಅನಾವರಣಗೊಂಡಿರುವ 108 ಅಡಿ ಎತ್ತರದ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದು ಇದಕ್ಕೆ ಪ್ರಗತಿಯ ಪ್ರತಿಮೆ(Statue of Prosperity) ಎಂದು ಕರ್ನಾಟಕ ಸರ್ಕಾರ ನಾಮಕರಣ ಮಾಡಿದೆ.* ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಗರ ನಿರ್ಮಾತೃ ಒಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಇದು ಎಂಬ ಹೆಗ್ಗಳಿಕೆಗೆ ಪಡೆದಿರುವುದು ವಿಶೇಷ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್(Ram V Sutar) ಕ್ರಿಯೇಷನ್ಸ್ ಅವರೇ ಈ ಕೆಂಪೇಗೌಡ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದ್ದಾರೆ.* ಈ ಪ್ರತಿಮೆ ನಿರ್ಮಾಣಕ್ಕೆ 84 ಕೋಟಿ ರೂ. ಖರ್ಚು ಮಾಡಲಾಗಿದ್ದು, ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಹೊಂದಿದೆ. 120 ಟನ್ ಉಕ್ಕನ್ನು ಪ್ರತಿಮೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. 98 ಟನ್ ಕಂಚನ್ನು ಬಳಕೆ…
* ರಫ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ವ್ಯಾಪಾರವನ್ನು ರೂಪಾಯಿ ಮೂಲಕ ನಡೆಸಲು ಕೇಂದ್ರ ಸರ್ಕಾರ ನವೆಂಬರ್ 9 ರಂದು ಅನುಮತಿ ನೀಡಿದೆ. * ವಿದೇಶಿ ವ್ಯಾಪಾರದ ನೀತಿ ಮತ್ತು ಪ್ರಕ್ರಿಯೆಗಳನ್ನು ಅಗತ್ಯ ತಿದ್ದುಪಡಿ ತಂದಿರುವ ಸರ್ಕಾರ, ಅಂತಾರಾಷ್ಟ್ರೀಯ ವ್ಯಾಪಾರದ ಪಾವತಿಯನ್ನು ರೂಪಾಯಿ ಮೂಲಕ ನಡೆಸಲು ಅನುವು ಮಾಡಿಕೊಟ್ಟಿದೆ. * ಭಾರತೀಯ ಕರೆನ್ಸಿಯನ್ನು ಜಾಗತೀಕರಣಗೊಳಿಸುವದು ಮತ್ತು ರೂಪಾಯಿ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುವದು ತಿದ್ದುಪಡಿಯ ಉದ್ದೇಶವಾಗಿದೆ.* ರೂಪಾಯಿ ಮೂಲಕ ನಡೆಸುವ ಆಮದು ರಫ್ತಿಗೆ, ರಾಫ್ತುದಾರನ ಮಾನ್ಯತೆ ಗುರುತಿಸಲು ರಾಫ್ಟಿನ ಕಾರ್ಯಕ್ಷಮತೆ, ರಫ್ತ್ತು ಪ್ರಕ್ರಿಯೆಯ ಮುಂಗಡ ದೃಢೀಕರಣ, ಕ್ಯಾಪಿಟಲ್ ಗೂಡ್ಸ್ ರಫ್ತಿಗೆ ಉತ್ತೇಜನ ನೀಡಲು ರಫ್ತ್ತು ಪ್ರಕ್ರಿಯೆಗಳ ಸರಳೀಕರಣ ಕುರಿತು ತಿದ್ದುಪಡಿ ತರಲಾಗಿದೆ. * ವಿದೇಶಿ ವಿನಿಮಯದಲ್ಲಿ ರೂ ಮೌಲ್ಯ 45 ಪೈಸೆ ಏರಿಕೆಯಾಗಿದೆ ಪ್ರತಿ ಡಾಲರ್ ಗೆ 81.47 ಆಗಿದೆ.
ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿನ ಖಾಲಿ ಇರುವ ಕಂಪ್ಯೂಟರ್ ಆಪರೇಟರ್, ಕಿರಿಯ ಸಹಾಯಕ, ಸ್ವಾಗತಕಾರರು ಮತ್ತು ದಲಾಯತ್ ಹುದ್ದೆಗಳ ಪರೀಕ್ಷೆಗಳು 2022 ನವೆಂಬರ್ 12 & 13 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಈಗ 2022 ಡಿಸೆಂಬರ್ 1,2 & 3ಕ್ಕೆ ಮುಂದೂಡಲಾಗಿದೆ. ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು 25-11-2022 ರಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ.
* ಪ್ರಸ್ತಾವಿತ ಸಾರ್ವಭೌಮ ಗ್ರೀನ್ ಬಾಂಡ್‌ನ ಚೌಕಟ್ಟನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದೆ. * * ಹಸಿರು ಬಾಂಡ್‌ಗಳು ಎಂಬುದು : – * ಹಸಿರು ಬಾಂಡ್‌ಗಳು ಪರಿಸರ-ಸೂಕ್ತ ಮತ್ತು ಹವಾಮಾನ ಸ್ನೇಹಿ ಯೋಜನೆಗಳಲ್ಲಿ ಹೂಡಿಕೆಗಾಗಿ ಆದಾಯವನ್ನು ಗಳಿಸುವ ಹಣಕಾಸು ಸಾಧನಗಳಾಗಿವೆ. * ಈ ಉಪಕರಣಗಳು ಸಾಮಾನ್ಯ ಬಾಂಡ್‌ಗಳಿಗಿಂತ ಕಡಿಮೆ ಬಂಡವಾಳ ವೆಚ್ಚವನ್ನು ಹೊಂದಿವೆ. * ಭಾರತ ಸರ್ಕಾರವು 2022-23ರ ಕೇಂದ್ರ ಬಜೆಟ್‌ನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಮೊದಲ ಸಾರ್ವಭೌಮ ಹಸಿರು ಬಾಂಡ್‌ಗಳನ್ನು ನೀಡುವುದಾಗಿ ಘೋಷಿಸಿತು. * FY2023 ರ ದ್ವಿತೀಯಾರ್ಧದಲ್ಲಿ ರೂ.16,000 ಮೌಲ್ಯದ ಹಸಿರು ಬಾಂಡ್‌ಗಳನ್ನು ಹರಾಜು ಮಾಡುವುದಾಗಿ ಸರ್ಕಾರ ಘೋಷಿಸಿತು. * ಇದು ಅಕ್ಟೋಬರ್-ಮಾರ್ಚ್‌ಗಾಗಿ ಕೇಂದ್ರ ಸರ್ಕಾರದ ಎರವಲು ಕಾರ್ಯಕ್ರಮದ ಒಂದು ಭಾಗವನ್ನು ಹೊಂದಿದೆ. * * ಗ್ರೀನ್ ಫೈನಾನ್ಸ್ ವರ್ಕಿಂಗ್ ಕಮಿಟಿ ಎಂದರೇನು ? * ಹಸಿರು ಬಾಂಡ್‌ಗಳ ಮೂಲಕ ಹಣಕಾಸು ಒದಗಿಸಲು ಅರ್ಹ ಯೋಜನೆಯನ್ನು ಆಯ್ಕೆ ಮಾಡಲು ಭಾರತ ಸರ್ಕಾರವು ಮುಖ್ಯ ಆರ್ಥಿಕ…
ಹಲವು ವರ್ಷಗಳಿಂದ ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದ, ರಾಜ್ಯದ ಅಭ್ಯರ್ಥಿಗಳಿಗೆ ಇದೀಗ ಸಿಹಿಸುದ್ದಿ ಬಂದಿದ್ದು, ಕರ್ನಾಟಕ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮತ್ತು PU ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಅನುಮತಿ ದೊರೆತಿದ್ದು, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಈ ಕೆಳಕಂಡ 2500 ವಿವಿಧ ವಿಷಯಗಳ ಶಿಕ್ಷಕರ ಮತ್ತು 778 PU ಕಾಲೇಜು ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿಯನ್ನು ನೀಡಿದೆ. ಹುದ್ದೆಗಳ ವಿವರ :- ಸಹ ಶಿಕ್ಷಕರು 2200 – ದೈಹಿಕ ಶಿಕ್ಷಕರು 200- ವಿಶೇಷ ಶಿಕ್ಷಕರು 100 – PU ಕಾಲೇಜು ಉಪನ್ಯಾಸಕರು : 778 * ಈ ಕುರಿತು ಮಾನ್ಯ ಶಿಕ್ಷಣ ಸಚಿವರು ಕೂಡ ಅಧಿಕೃತವಾಗಿ ತಿಳಿಸಿದ್ದು, ಇನ್ನೇನು ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.
ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಖಾಲಿ ಇರುವ 21 ಪ್ರಾಜೆಕ್ಟ್ ಡೈರೆಕ್ಟರ್, ಕೆ-ಜಿಐಎಸ್, ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್,ಬ್ಯುಸಿನೆಸ್ ಅನಾಲಿಸ್ಟ್ ಲೋಹಶಾಸ್ತ್ರ ಮತ್ತು ಡ್ರೋನ್ ಸರ್ವೇ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ08/12/2022 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : 21* ಪ್ರಾಜೆಕ್ಟ್ ಡೈರೆಕ್ಟರ್, ಕೆ-ಜಿಐಎಸ್ : 1* ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್ : 1* ಬ್ಯುಸಿನೆಸ್ ಅನಾಲಿಸ್ಟ್ : 2* ವೆಬ್ ಅಪ್ಲಿಕೇಶನ್ ಡೆವಲಪರ್ – ಸೀನಿಯರ್ ಅನಾಲಿಸ್ಟ್: 1* ವೆಬ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್ : 3* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಸೀನಿಯರ್ ಅನಾಲಿಸ್ಟ್ : 1* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್ : 3* ಡಾಟಾಬೇಸ್ ಡೆವಲಪರ್ – ಸೀನಿಯರ್ ಅನಾಲಿಸ್ಟ್ : 1*…
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ ತಾಂತ್ರಿಕ ಮುಖ್ಯಸ್ಥ, ಹಿರಿಯ ಪ್ರೋಗ್ರಾಮರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ತಿಗಳು 14/11/2022 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.ಹುದ್ದೆಗಳ ವಿವರ : 21ಟೆಕ್ನಿಕಲ್ ಹೆಡ್ – 1 ಹುದ್ದೆ ಸೀನಿಯರ್ ಪ್ರೋಗ್ರಾಮರ್ – 3 ಹುದ್ದೆಗಳು ಪ್ರೋಗ್ರಾಮರ್ – 8 ಹುದ್ದೆಗಳು ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ – 2 ಹುದ್ದೆಗಳು ಡಾಟಾ ಅನಾಲಿಸ್ಟ್ – 4 ಹುದ್ದೆಗಳು ಟ್ರೈನಿ/ಅಪ್ರೆಂಟಿಸ್ – 3 ಹುದ್ದೆಗಳು No. of posts: 21 Application Start Date: 5 ನವೆಂಬರ್ 2022 Application End Date: 14 ನವೆಂಬರ್ 2022 Work Location: ಕರ್ನಾಟಕ Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವದು. Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು BE/ B.Tech/ ME/ M.Tech/ M.Sc/ MCA ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.…
* ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2021 ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ಶುಶ್ರೂಷಾ ವೃತ್ತಿಪರರಿಗೆ ಇಂದು (ನವೆಂಬರ್ 7, 2022) ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.* ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು 1973 ರಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಾದಿಯರು ಮತ್ತು ಶುಶ್ರೂಷಾ ವೃತ್ತಿಪರರು ಸಮಾಜಕ್ಕೆ ಸಲ್ಲಿಸಿದ ಶ್ಲಾಘನೀಯ ಸೇವೆಗಳನ್ನು ಗುರುತಿಸಲು ಸ್ಥಾಪಿಸಲಾಯಿತು.
ಕಳೆದ ಎಂಟು ವರ್ಷಗಳು ದಾಖಲೆಯಲ್ಲಿ ಅತಿ ಹೆಚ್ಚು ತಾಪಮಾನವಾಗಿತ್ತು, ನಿರಂತರವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲದ ಸಾಂದ್ರತೆ ಮತ್ತು ಸಂಗ್ರಹವಾದ ಶಾಖದಿಂದಾಗಿ ಇದು ಸಂಭವಿಸಿದೆ.* 2022 ರಲ್ಲಿ ಜಾಗತಿಕ ಸರಾಸರಿ ತಾಪಮಾನವು 1850-1900 ಪೂರ್ವ ಕೈಗಾರಿಕಾ ಸರಾಸರಿಗಿಂತ 1.15 ° C ಗಿಂತ ಹೆಚ್ಚಿದ್ದು, 1.02 ° C ನಿಂದ 1.28 ° C ವರೆಗೆ ಇರುತ್ತದೆ.* 1.5 ° C ಗೆ ಹತ್ತಿರದಲ್ಲಿದೆ – 2015 ರ ಪ್ಯಾರಿಸ್ ಒಪ್ಪಂದದ ಆದೇಶದಿಂದ ಕಡಿಮೆ ಮಿತಿಯನ್ನು ಹೊಂದಿಸಲಾಗಿದೆ. ಮೇಲಿನ ಮಿತಿಯು 2 ° C ಆಗಿದೆ.* ಟ್ರಿಪಲ್-ಡಿಪ್ ಕೂಲಿಂಗ್ ಲಾ ನಿನಾ ಅಪರೂಪದ ವಿದ್ಯಮಾನದಿಂದಾಗಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ 2022 ಸ್ವಲ್ಪ ತಂಪಾಗಿದೆ, ಇದುವರೆಗೆ ದಾಖಲಾದ 6ನೇ ಅಥವಾ 7 ನೇ ಅತಿ ಉಷ್ಣತೆಯ ವರ್ಷವಾಗಿರಬಹುದು.* ಈ ತಾತ್ಕಾಲಿಕ ತಂಪಾಗಿಸುವಿಕೆಯು ವ್ಯತಿರಿಕ್ತವಾಗಿದೆ, ಇದು ಮತ್ತೊಂದು ಬೆಚ್ಚಗಿನ ವರ್ಷದ ಸಂಭವಕ್ಕೆ ಕಾರಣವಾಗುತ್ತದೆ, ಸಾಗರದ ಶಾಖ ಮತ್ತು ಸಮುದ್ರ ಮಟ್ಟ ಏರಿಕೆ* ಸಾಗರದ ಶಾಖವು…
* ಕೇಂದ್ರ ಸರ್ಕಾರದ ಯೋಜನೆಯಾದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಹತ್ತಾರು ಸೇವೆ ಒದಗಿಸಲಾಗುತ್ತದೆ. ಕೇವಲ 15 ರೂ.ಗೆ 5ಜಿ ಸೇವೆ ಲಭ್ಯವಾಗುತ್ತಿದ್ದು, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿದೆ. * “ಯಾವುದೇ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಅಳೆಯುವುದು ಈಗ ಸುಲಭ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು. * “ಜನಸಾಮಾನ್ಯರ ಕೈಯಲ್ಲೂ 5ಜಿ ತಂತ್ರಜ್ಞಾನ ಇರುವುದರಿಂದ ಮಾಧ್ಯಮಗಳ ವಿಶ್ವಾಸಾರ್ಹತೆಯು ಪ್ರಮುಖವಾಗುತ್ತದೆ. ಜನರು ಮಾಧ್ಯಮಗಳ ಕುರಿತು ತೀರ್ಪು ನೀಡುತ್ತಾರೆ. ಹಾಗಾಗಿ, ಮಾಧ್ಯಮಗಳ ಅಸ್ತಿತ್ವವು ಜನರ ವಿಶ್ವಾಸದ ಮೇಲೆ ನಿಂತಿದೆ.