Author: Web Desk

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಭರ್ತಿಯಾಗದೆ ಖಾಲಿ ಇರುವ ಸುಮಾರು 600 ಕ್ಕೂ ಅಧಿಕ ಹುದ್ದೆಗಳನ್ನು ಹಂತ ಹಂತವಾಗಿ ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ರಾಜ್ಯ ಕೃಷಿ ಇಲಾಖೆಯು ಈಗಾಗಲೇ ಅನುಮತಿ ನೀಡಿದ್ದು, ಈ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಮಾನ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರು ಮಾಹಿತಿ ನೀಡಿರುತ್ತಾರೆ.

Read More

2017-18 ನೇ ಸಾಲಿನ 106 KAS ಹುದ್ದೆಗಳ ನೇಮಕಾತಿಗೆ (Prelims) ಗೆ ಅರ್ಜಿ ಸಲ್ಲಿಸಿದ್ದ 1,65,250 ಅಭ್ಯರ್ಥಿಗಳಿಗೆ ಮಾತ್ರ (ಈಗ ಅವರ ವಯಸ್ಸು ಮೀರಿದ್ದರೂ ಕೂಡಾ) ವಯಸ್ಸಿನ ನಿರ್ಬಂಧವಿಲ್ಲದೆ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲಿಯೇ KPSC ಯು ಈ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಕನಿಷ್ಠ 15 ದಿನವಾದರೂ ಹೆಚ್ಚುವರಿ ಕಾಲಾವಕಾಶ ನೀಡಲಿದೆ. ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ Documents ತಯಾರಿ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ 384 KAS ಗೆ 1,95,000 ದಷ್ಟು ಅರ್ಜಿ ಸಲ್ಲಿಕೆಯಾಗಿವೆ, ಈಗ ಇನ್ನಷ್ಟು ಹೆಚ್ಚು’ವರಿ’ ಅರ್ಜಿಗಳು ಸಲ್ಲಿಕೆಯಾಗಲಿವೆ.

Read More

2024ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ದಿನಾಂಕ30 ಜೂನ್ 2024ರ ಭಾನುವಾರದಂದು ಎರಡು ಅಧಿವೇಶನಗಳಲ್ಲಿ (ಪತ್ರಿಕೆ 1 ಮತ್ತು ಪತ್ರಿಕೆ 2) ನಡೆಯಲಿದ್ದು, ಸದರಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಪರೀಕ್ಷಾ ಸ್ಥಳಗಳಲ್ಲಿ ಹಾಜರಿರಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.- ಆಯಾ ಜಿಲ್ಲೆಯ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ ಹಾಗೂ ಪರೀಕ್ಷಾನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಅವರನ್ನು ಸಂಪರ್ಕಿಸಬಹುದು ಎಂದು ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪ್ರತಿ ವರ್ಷ ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತದೆ. ಈ ವಿಶ್ವ ನಿರಾಶ್ರಿತರ ದಿನವು ವಿಶ್ವಾದ್ಯಂತ ನಿರಾಶ್ರಿತರಿಗೆ ಗೌರವ ಸಲ್ಲಿಸಲು ವಿಶ್ವಸಂಸ್ಥೆಯಿಂದ ಸ್ಥಾಪಿಸಲ್ಪಟ್ಟ ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವಾಗಿದೆ.  ವಿಶ್ವ ನಿರಾಶ್ರಿತರ ದಿನದ 2024ರ ಥೀಮ್ “ಮನೆಯಿಂದ ದೂರವಿರುವ ಭರವಸೆ ನೀಡುವುದು ; ನಿರಾಶ್ರಿತರನ್ನು ಒಳಗೊಂಡತ್ತೆ ಜಗತ್ತು” ಎಂದು ಥೀಮ್ ಆಗಿದೆ. ವಿಶ್ವ ನಿರಾಶ್ರಿತರ ದಿನವು ಅವರ ರಾಷ್ಟ್ರೀಯತೆ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳ ಘನತೆ ಮತ್ತು ಯೋಗಕ್ಷೇಮವನ್ನು ಎತ್ತಿಹಿಡಿಯುವ ಹೆಚ್ಚು ಅಂತರ್ಗತ ಮತ್ತು ಸಹಾನುಭೂತಿಯ ಜಗತ್ತನ್ನು ಬೆಳೆಸುವ ಗುರಿಯನ್ನು ಹೊಂದಿದೆ. ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 36.4 ಮಿಲಿಯನ್ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಯುಎನ್ಎಚ್ ಸಿಆರ್ ವರದಿಯು ತಿಳಿಸಿದೆ. ರ ಸಿರಿಯಾ ಸಂಘರ್ಷದ ಎರಡು ದಶಕಕ್ಕೂ ಮುನ್ನ ವಿಶ್ವದಾದ್ಯಂತ ಒಟ್ಟು ನಿರಾಶ್ರಿತರ ಸಂಖ್ಯೆ 4 ಕೋಟಿ ಇತ್ತು. ಬಳಿಕ ಈ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ.   ರಷ್ಯಾ ಯುದ್ಧ ಧೋರಣೆಯಿಂದ ಉಕ್ರೇನ್ನಿಂದ ಇತರ ದೇಶಗಳಿಗೆ ಈವರೆಗೆ 60…

Read More

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 14 ಮೇ 2020 ರಂದು ಅಧಿಸೂಚಿಸಿದ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಹೈದ್ರಾಬಾದ್ ಕರ್ನಾಟಕ ವೃಂದದ-201 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 09-01-2023ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು, ಹಾಗೂ ದಿನಾಂಕ:05-05-2023ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.

Read More

ಕರ್ನಾಟಕ ಲೋಕಸೇವಾ ಆಯೋಗ(KPSC)ದ ವಿವಿಧ ಇಲಾಖೆಗಳ ವಿವಿಧ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ. ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರು ಉಳಿಕೆ ಮೂಲವೃಂದದ 1122 ಕಿರಿಯ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕಳೆದ ವರ್ಷದ ಜನವರಿಯಲ್ಲಿ ಅಂತಿಮ ಆಯ್ಕೆಪಟ್ಟಿಯನ್ನು ಹೊರಡಿಸಿತ್ತು. 16 ಇಲಾಖೆಗಳಿಂದ ಪ್ರಸ್ತಾವನೆ ಸ್ವೀಕೃತವಾದ ಕಾರಣ ಮತ್ತೆ 79 ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಿದೆ. – ಉಳಿಕೆ ಮೂಲ ವೃಂದದ 59 ಅಬಕಾರಿ ಉಪ ನಿರೀಕ್ಷಕರ ಹುದ್ದೆಗಳಿಗೆ ಅಂತಿಮ ಪಟ್ಟಿ ನೀಡಲಾಗಿತ್ತು. ಬಳಿಕ 2023ರ ಮಾರ್ಚ್‌ನಲ್ಲಿ ಹೆಚ್ಚುವರಿ ಪಟ್ಟಿಯನ್ನು ನೀಡಲಾಗಿತ್ತು.   ಒಟ್ಟು 34 ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಮರುಪ್ರಕಟಿಸಲಾಗಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ. – ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ವಿವಿಧ ಶಾಲೆಗಳಿಗಾಗಿ 239 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಸ್ವಇಚ್ಛಾ ಹೇಳಿಕೆಯನ್ನು ಆಧರಿಸಿ 106 ಅಭ್ಯರ್ಥಿಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿದೆ. – ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿನ ವಸತಿ ಶಾಲೆಗಳಿಗೆ ಸಾಮಾನ್ಯ…

Read More

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಹಾಗೂ ವಿಶೇಷ ಮೀಸಲು ಪೊಲೀಸ್‌ ಪಡೆಯಲ್ಲಿ (ಸ್ಪೆಷಲ್ ಆರ್‌ಪಿಸಿ) 1500 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಅನುಮತಿ ನೀಡಿ ಆದೇಶ ಹೊರಡಿಸಿದೆ. 1500 ಹುದ್ದೆಗಳಲ್ಲಿ 886 ಹುದ್ದೆಗಳು ಕಲ್ಯಾಣ- ಕರ್ನಾಟಕೇತರ ಹುದ್ದೆಗಳಾಗಿದ್ದು, ಕಲ್ಯಾಣ ಕರ್ನಾಟಕ ವೃಂದಕ್ಕೆ 614 ಹುದ್ದೆಗಳನ್ನು ಮೀಸಲಿಡಲಾಗಿದೆ.  ಒಟ್ಟು 1,500 ಹುದ್ದೆಗಳಲ್ಲಿ 30 ಹುದ್ದೆಗಳನ್ನು ಪ್ರತಿಭಾವಂತ ಕ್ರೀಡಾ ಪಟುಗಳಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ 12 ಸ್ಥಾನ ಕಲ್ಯಾಣ- ಕರ್ನಾಟಕದ ಅಭ್ಯರ್ಥಿಗಳಿಗಾಗಿ ನಿಗದಿ ಮಾಡಲಾಗಿದೆ. – ಮಂಗಳೂರು, ಶಿವಮೊಗ್ಗ, ಶಿಗ್ಗಾವಿ, ಹಾಸನ, ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ, ತುಮಕೂರು, ಮುನಿರಾಬಾದ್ ಮೊದಲಾದ ಕಡೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಯಲಿದೆ. 

Read More

ಜಗತ್ ಪ್ರಸಿದ್ಧ ಸರೋದ್ ವಾದಕ ಪದ್ಮಶ್ರೀ ಪುರಸ್ಕೃತ 91 ವರ್ಷ ವಯಸ್ಸಿನ ಪಂಡಿತ್ ರಾಜೀವ್ ತಾರಾನಾಥ್ ಅವರು ಜೂನ್ 11 ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.  ಬೆಂಗಳೂರಿನಲ್ಲಿ 1932 ರ ಅಕ್ಟೋಬರ್ 17 ರಂದು ಜನಿಸಿದ ರಾಜೀವ್ ತಾರಾನಾಥ್ ಅವರು ತಂದೆ ಪಂಡಿತ್ ತಾರಾನಾಥ್ ಅವರಿಂದ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು. ರಾಜೀವ್ ತಾರಾನಾಥ್ ಅವರ ಸರೋದ್ನ ಪಾಂಡಿತ್ಯವನ್ನು ಗುರುತಿಸಿ 2019 ರಲ್ಲಿ ಪದ್ಮಶ್ರೀ ಮತ್ತು 2000 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ರಾಜೀವ ತಾರನಾಥ ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ(1998), ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996), ಕೆಂಪೇಗೌಡ ಪ್ರಶಸ್ತಿ (2006), ಗಾಯನ ಸಮಾಜದಿಂದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿ, ವಿ. ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ, ಹಂಪಿ ಕನ್ನಡ…

Read More

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ’ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯು ₹ 25 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ. ನಾಡಿನ ಸಂಸ್ಕೃತಿ, ಸಾಹಿತ್ಯ, ಕಲೆ, ಪರಂಪರೆಯ ಪೋಷಕರು ಅಥವಾ ಈ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳು ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡುವುದು ಈ ದತ್ತಿ ಪ್ರಶಸ್ತಿಯ ಆಶಯವಾಗಿದೆ. ಯಡಿಯೂರಪ್ಪ ಅವರಿಗಿರುವ ಕನ್ನಡದ ಬಗೆಗಿನ ಕಾಳಜಿ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ .

Read More

ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ದತಿಯ ದುಷ್ಟಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಲು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. 2024 ರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಥೀಮ್“ನಮ್ಮ ಬದ್ಧತೆಗಳ ಮೇಲೆ ಕಾರ್ಯನಿರ್ವಹಿಸೋಣ: ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಿ” ಈ ವರ್ಷದ ಥೀಮ್ ಆಗಿದೆ. ಪ್ರಪಂಚದಾದ್ಯಂತ ಬಾಲ ಕಾರ್ಮಿಕರ ವಿರುದ್ಧ ಹೋರಾಡಲು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) 2002 ರಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಪ್ರಾರಂಭಿಸಿತು.

Read More