ಪ್ರಧಾನಿ ನರೇಂದ್ರ ಮೋದಿ ಅವರ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ನೂರನೇ ಸಂಚಿಕೆ ಏಪ್ರಿಲ್ 30 ರಂದು ಪೂರ್ಣಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ 100 ರೂಪಾಯಿ ವಿಶೇಷ ಹೊಸ ನಾಣ್ಯ ಬಿಡುಗಡೆ ಮಾಡಲಾಗುವುದು.
44 ಮಿಲಿ ಮೀಟರ್ ಸುತ್ತಳತೆಯ ವಿಶೇಷ ಕಾಯಿನ್ ಅನ್ನು ಬೆಳ್ಳಿ, ತಾಮ್ರ, ನಿಕ್ಕಲ್, ಸತುವಿನಿಂದ ಮಾಡಲಾಗಿದೆ. ಒಂದು ಬದಿ ಮೈಕ್ರೋಫೋನ್ ಚಿತ್ರ ಇದ್ದು, 35 ಗ್ರಾಂ ತೂಕ ಹೊಂದಿದೆ.
ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ತಂಭ ಮತ್ತು ಕೆಳಗೆ ಸತ್ಯಮೇವ ಜಯತೆ ಎನ್ನುವ ವಾಕ್ಯ ಇರುತ್ತದೆ. ನಾಣ್ಯದ ಒಂದು ಬದಿಯಲ್ಲಿ 100 ಮುಖಬೆಲೆಯ ಗುರುತು ಹಾಕಲಾಗುವುದು. ಮತ್ತೊಂದು ಬದಿಯಲ್ಲಿ ‘ಮನ್ ಕಿ ಬಾತ್’ 100ನೇ ಸಂಚಿಕೆಯ ಸಂಕೇತವಿರುತ್ತದೆ. ಇದರಲ್ಲಿ ಧ್ವನಿ ತರಂಗಗಳಿರುವ ಮೈಕ್ರೋಫೋನ್ ಚಿತ್ರ ಮುದ್ರಿಸಲಾಗುವುದು.
ಏಪ್ರಿಲ್ 30 ರಂದು ಪ್ರಧಾನಿಯವರ ‘ಮನ್ ಕಿ ಬಾತ್’ ನೂರನೇ ಆವೃತ್ತಿ ಭಾಷಣ ಪ್ರಸಾರವಾಗಲಿದ್ದು, ಆಯ್ದ ಒಂದು ಲಕ್ಷ ಸ್ಥಳಗಳಲ್ಲಿ ಪ್ರಸಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಹಿಂದೆ 2010, 2011, 2012, 2014 ಮತ್ತು 2015 ರಲ್ಲಿ ಕೇಂದ್ರ ಸರ್ಕಾರ 100 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದೆ