* ಆರ್ ಬಿಐ ಬಿಡುಗಡೆ ಮಾಡಿರುವ ಡಿಜಿಟಲ್ ರೂಪಾಯಿ ಬಳಸಿ ಮೊದಲ ದಿನವಾದ ಮಂಗಳವಾರ ವಿವಿಧ ಬ್ಯಾಂಕ್‌ಗಳು ಒಟ್ಟಾರೆ 275 ಕೋಟಿ ರೂ ಮೊತ್ತದ ವ್ಯವಹಾರಗಳನ್ನು ನಡೆಸಿವೆ. ಈ ಮೂಲಕ ದೇಶದಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಆರಂಭಗೊಂಡಿದೆ.
* ಆರ್‌ಬಿಐ, ಡಿಜಿಟಲ್ ರುಪಿಯನ್ನು ಪ್ರಾಯೋಗಿಕ ವಾಗಿ ಮೊದಲ ಹಂತದಲ್ಲಿ 8 ದೊಡ್ಡ ಹಣಕಾಸು ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ,ಅದರನ್ವಯ ಮೊದಲ ದಿನವಾದ ಮಂಗಳವಾರ ಎಸ್ ಬಿಐ, ಐಸಿಐಸಿಐ, ಎಚ್ ಡಿಎಫ್‌ಸಿ ಸೇರಿದಂತೆ ಹಲವು ಬ್ಯಾಂಕ್‌ಗಳು 48 ಸೆಕ್ಯುರಿಟಿ ಜಲ್ ಗಳ ಮೂಲಕ 175 ಕೋಟಿ ರೂ. ವಹಿವಾಟು ನಡೆದಿದೆ.
* ಡಿಜಿಟಲ್ ರುಪಿ ಎನ್ನುವುದು, ರುಪಾಯಿ ಮತ್ತು ನಾಣ್ಯಗಳ ಹಾಗೆ ಆರ್ ಬಿಐನ ಭದ್ರತಾ ಖಾತರಿ ಇರುವ ಹಣ, ಆದರೆ ಇದು ಅಟಲ್ ಸ್ವರೂಪದಲ್ಲಿ ಇರುತ್ತದೆ.
* ಮೊದಲ ಹಂತದಲ್ಲಿ ದೊಡ್ಡ ಹಣಕಾಸು ಸಂಸ್ಥೆಗಳಿಗೆ ಮಾತ್ರ ಇದರ ಬಳಕೆಗೆ ಅವಕಾಶ ನೀಡಲಾಗಿದ್ದು, ಇದರ ಸಾಧಕ ಬಾಧಕ ಆಧರಿಸಿ ಇನ್ನೊಂದು ತಿಂಗಳಗೊಳಗೆ ಇದನ್ನು ಚಿಲ್ಲರೆ ಬಳಕೆದಾರರಿಗೂ ಬಿಡುಗಡೆ ಮಾಡಲು ಆರ್‌ಬಿಐ ನಿರ್ಧರಿಸಿದೆ.
Subscribe to Updates
Get the latest creative news from FooBar about art, design and business.