* ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದ ನಟ ರಮೇಶ್ ಅರವಿಂದ್ ರವರು ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ “ಕಾರಂತ ಹುಟ್ಟೂರು ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ.
* ಈ ಪ್ರಶಸ್ತಿಯನ್ನು ಸತತ 17 ವರ್ಷಗಳಿಂದ ಕೊಡಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಲಾಗುತ್ತದೆ.
* 2022 ರ ಈ ಪ್ರಶಸ್ತಿಗೆ ನಟ ನಿರ್ದೇಶಕ ನಿರ್ಮಾಪಕ ರಮೇಶ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಅವರು ತಿಳಿಸಿದ್ದಾರೆ.
* ಅಕ್ಟೋಬರ್ 10 ರಂದು ನಡೆಯುವ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನದ ಕಾರ್ಯಕ್ರಮದಲ್ಲಿ “ಕೋಟದ ಕಾರಂತ ಥೀಮ್ ಪಾರ್ಕ್” ನಲ್ಲಿ ಪ್ರಶಸ್ತಿಯನ್ನು ಕೊಡಲಾಗುತ್ತದೆ.