* ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರು ಒದಗಿಸಲು ಕೇಂದ್ರ ಸರಕಾರ ಅಮೃತ್ 2.0 ಯೋಜನೆಯನ್ನು ಆರಂಭಿಸಿತು.
* ಕೇಂದ್ರ ಸರಕಾರ ಅಮೃತ್ 2.0 ಯೋಜನೆಯ ಅಡಿ ರಾಜ್ಯಕ್ಕೆ 9,230/- ಕೋಟಿ ಹಣವನ್ನು ನಿಗದಿಪಡಿಸಿದೆ. ಆದರೆ ರಾಜಸರಕಾರದ ಅಂದಾಜಿನ ಪ್ರಕಾರ 16,900/- ಕೋಟಿ ವೆಚ್ಚ ಇದೆ.
* ಅಮೃತ್ 2.0 ಯೋಜನೆಯನ್ನು ರಾಜ್ಯದಲ್ಲಿ ಮೇ 7 ರಂದು ಆರಂಭಿಸಬೇಕಿತ್ತು ಅದ ಕೇಂದ್ರ ಸರಕಾರ ನಿಗದಿಪಡಿಸಿದ ಹಣಕ್ಕಿಂತ ಶೇ 83 ಕೋಟಿ ಹೆಚ್ಚು ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ.
* ನೀರು ಪೂರೈಕೆ ಯೋಜನೆ, ಜಲ ಮೂಲ ಪುನರುಜ್ಜೀವನ, ಹಸಿರು ಪ್ರದೇಶ ಮತ್ತು ಉದ್ಯಾನಗಳ ಕಾಮಗಾರಿಗಾಗಿ ರಾಜ್ಯ ಸರಕಾರ ಶೇ 83 ರಷ್ಟು ವೆಚ್ಚದ ಪಟ್ಟಿಯನ್ನು ತಯಾರಿಸಿದೆ.
* ಅಮೃತ್ 2.0 ಯೋಜನೆಯನ್ನು ಪೌರಾಡಳಿತ ನಿರ್ದೇಶನಾಲಯ ನಿರ್ವಹಣೆ ಮಾಡಬೇಕಿದೆ.
* 2021 ಅಕ್ಟೊಬರ್ 2 ರಂದು ಈ ಯೋಜನೆಯನ್ನು ಪ್ರಕಟಿಸಿದ್ದರು.
* ಅಮೃತ್ 2.0 ವೃತ್ತಾಕಾರದ ಆರ್ಥಿಕ ತತ್ವಗಳನ್ನು ಅನುಸರಿಸುತ್ತದೆ ಮತ್ತು ಕಂಪನಿಯ ಪ್ರಕಾರ ಮೇಲ್ಮೈ ಮತ್ತು ಅಂತರ್ಜಲ ಕಾಯಗಳ ಸಂರಕ್ಷಣೆ ಮತ್ತು ನವೀಕರಣವನ್ನು ಉತ್ತೇಜಿಸುತ್ತದೆ.