ಸರ್ಕಾರ ಪ್ರಮಾಣೀಕರಿಸಿದ ಅತ್ಯಾಧುನಿಕ ಕಂಪ್ಯೂಟರ್ ಸಾಫ್ಟ್ವೇರ್ ಕೋರ್ಸ್ಗಳ ತರಬೇತಿಗಾಗಿ ರಾಷ್ಟ್ರೀಯ ಕೌಶಲ ಅಕಾಡೆಮಿಯಿಂದ ಅರ್ಜಿ ಆಹ್ವಾನಿಸಲಾಗಿದೆ. 12 ತರಗತಿ ಉತ್ತೀರ್ಣರಾದವರು, ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ, ಎಂಬಿಎ, ಪಾಲಿಟೆಕ್ನಿಕ್ ಡಿಪ್ಲೊಮಾ ಮಾಡಿರುವವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ತಂತ್ರಜ್ಞಾನದ ಕುರಿತಾದ ಕೌಶಲಗಳನ್ನು ವೃದ್ಧಿಸಿ ಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ. ತರಬೇತಿ ಮುಗಿದ ಬಳಿಕ ಪರೀಕ್ಷೆ ನಡೆಸಿ ಸರ್ಕಾರದಿಂದ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ಈ ಕೋರ್ಸ್ 2ರಿಂದ 6 ತಿಂಗಳದ್ದಾಗಿದೆ. ಸ್ವರ್ಣ ಭಾರತ್ ರಾಷ್ಟ್ರೀಯ ಅಭಿವೃದ್ಧಿ ಮಟ್ಟದ ಕೌಶಲ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಹಿಳೆಯರು, ಸೇನೆಯಿಂದ ನಿವೃತ್ತರಾದವರು ಮತ್ತು ಅವರ ಮಕ್ಕಳಿಗೆ ಶುಲ್ಕದಲ್ಲಿ ಶೇ80ರಷ್ಟು ಸಹಾಯಧನವೂ ಸಿಗಲಿದೆ. www.nationalskillacademy. in. ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸ ಬೇಕಾದ ದೂರವಾಣಿ 9505800050 ಮತ್ತು 9505800047
Subscribe to Updates
Get the latest creative news from FooBar about art, design and business.