ವಿಜಯಪುರ : 74ನೇ ಗಣರಾಜ್ಯೋತ್ಸವದ ಅಂಗವಾಗಿ ಕೇರಿಂಗ್ ಸೋಲ್ಸ್ ಚಾರಿಟೇಬಲ್ ಟ್ರಸ್ಟ್ ವಿಜಯಪುರ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ 600 ಬಡರೋಗಿಗಳಿಗೆ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗರ್ಭೀಣಿ ಸ್ತ್ರೀಯರಿಗೆ ಹಣ್ಣು ಹಂಪಲು ವಿತರಿಸಿ ಅತ್ಯಂತ ಸರಳ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಸಿಕ್ಯಾಬ್ ಇನ್ಸ್ ಟ್ಯೂಟ್ ಇಂಜೀನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಎಸ್.ಎ.ಖಾದ್ರಿಯವರು ನೇರವೇರಿಸಿಕೊಟ್ಟ ನೇ 74 ಗಣರಾಜ್ಯೋತ್ಸವದ ಕುರಿತು ಮಾತನಾಡಿದರು.
ಮನುಷ್ಯನು ಯಾವುದೇ ಜಾತಿ, ಧರ್ಮಗಳಿಗೆ ಅಂಟಿಕೊಳ್ಳದೇ ಮಾನವೀಯತೆಯಿಂದ ನಡೆದುಕೊಂಡು ಜೀವನ ಸಾಗಿಸಿಕೊಳ್ಳಬೇಕು.
ಪ್ರತಿಯೊಬ್ಬ ಮನುಷ್ಯ ತನ್ನ ಜೀವನ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆನ್ನುವ ಹಂಬಲದಿಂದ ಮಾದರಿಯಾಗಬೇಕು. ನಾವು ಸದಾ ಸಮಾಜಕ್ಕೆ ಒಳಿತನ್ನು ಬಯಸಬೇಕು ಅಂದಾಗ ನಮ್ಮ ಸಂಸಾರ ಚೆನ್ನಾಗಿ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇರಿಂಗ್ ಸೋಲ್ಸ್ ಅಧ್ಯಕ್ಷರಾದ ಆಸೀಪ್ ಇಕ್ಬಾಲ್ ದೊಡಮನಿ, ಉಪಾಧ್ಯಕ್ಷರಾದ ಎಮ್.ಎಮ್. ದೊಡಮನಿ, ಕಾರ್ಯದರ್ಶಿ ಸುಫಿಯಾ ದೊಡಮನಿ, ಸಂಸ್ಥೆಯ ಆಡಳಿತ ವರ್ಗದವರಾದ ಬಂದೇನವಾಜ ಲೋಣಿ, ವಿನಾಯಕ ಕುಂಟೆ, ಅಸ್ಲಂ ಕರ್ಜಗಿ, (ಪ್ರೊಜೆಕ್ಟ್ ಹೆಡ್) ಸದಸ್ಯರಾದ ಮೌಸೀನ ಮನಿಯಾರ, ಅಹತೆ ಶಾಮ್, ನಿಯಾಜ್ ಬಾಗವಾನ, ಹಜರತ್ ಬಿಲಾಲ, ಉಮೇರ ಸೌದಾಗರ, ಸಮೀರ ಸಿಪಾಯಿ, ಶೋಯೆಬ್ ಚೌಧರಿ, ಮೋಯಿನ್ ಚೌಧರಿ, ಮಹಿಳಾ ಸದಸ್ಯರಾದ ಸೋನು ಗಾಯಕವಾಡ, ಸಾಧಿಯಾ, ಆಯಿಷಾ ಖಾನ, ಸಾನಿಯಾ ಸಮೀನ, ಸದಪ್ ಜಮೀಲ, ಸುಹಾನಾ, ಜುಬಿಯಾ ಬಾಗಾಯತ, ಅರ್ಫಾ ತಕದೀಸ್, ಮುಲ್ಲಾ, ಸಾರಿಯಾ, ನೂರೇನ ಜಾಗೀರದಾರ ಹಾಗೂ ಜಿಲ್ಲಾಸ್ಪತ್ರೆಯ ಡಾಕ್ಟರ್‌ಗಳು ಹಾಗೂ ಸಿಬ್ಬಂಧಿಗಳು ವರ್ಗದವರು ಇದ್ದರು.