ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತ ‘ವಾಜಪೇಯಿ: ದಿ ಆ್ಯಕ್ಸೆಂಟ್ ಆಫ್ ದಿ ಹಿಂದೂ ರೈಟ್’ ಕೃತಿಯ ಮೊದಲನೇ ಆವೃತ್ತಿಯು ಮೇ 10ರಂದು ಬಿಡುಗಡೆಯಾಗಲಿದೆ.
ಅಭಿಷೇಕ್ ಚೌಧರಿ ಎಂಬ ಲೇಖಕರು ಈ ಪುಸ್ತಕವನ್ನು ರಚಿಸಿದ್ದಾರೆ.
ಇದನ್ನು ನ್ಯೂ ಇಂಡಿಯಾ ಫೌಂಡೇಷನ್ ಸಹಕಾರದೊಂದಿಗೆ ಪಿಕಾಡೋರ್ ಇಂಡಿಯಾ ಸಂಸ್ಥೆಯು ಪ್ರಕಟಿಸಿದೆ.
ಈ ಪುಸ್ತಕವು ವಾಜಪೇಯಿ ಕುರಿತ ಜನಪ್ರಿಯ ಮಿಥ್ಯೆಗಳು ಮತ್ತು ಅವರ ಕುರಿತು ಯಾರಿಗೂ ತಿಳಿಯದ ಸಂಗತಿಗಳನ್ನು ಹೊಂದಿದೆ ಎನ್ನಲಾಗಿದೆ.
‘ಸಂಘ ಪರಿವಾರದ ಜೊತೆ ವಾಜಪೇಯಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ಹೊಂದಿದ್ದ ಒಡನಾಟದ ಕುರಿತು ಅರ್ಥ ಮಾಡಿಕೊಳ್ಳುವುದು ಭಾರತದ ಬಲಪಂಥದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಕಠಿಣ. 8 ವರ್ಷಗಳು ಗಂಭೀರವಾದ ಅಧ್ಯಯನ ನಡೆಸಲಾಗಿದೆ.
ಭಾರತ, ಅಮೆರಿಕ, ಬ್ರಿಟನ್‌ನಲ್ಲಿ ದೊರಕಿದ ಮತ್ತು ಈವರೆಗೂ ಬಹಿರಂಗವಾಗದ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಕಲೆಹಾಕಲಾಗಿದೆ ಮತ್ತು ನೂರಾರು ಜನರ ಸಂದರ್ಶನ ಮಾಡಲಾಗಿದೆ’ ಎಂದು ಪ್ರಕಾಶಕರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.