ವಿಜಯಪುರ: ಎಲ್ಲ ದಾನಗಳಲ್ಲಿ ಅತ್ಯಂತ ಪವಿತ್ರವಾಗಿರುವ ರಕ್ತದಾನ ಪ್ರತಿಯೊಬ್ಬ ಶಕ್ತರು ಮಾಡಬೇಕು. ಇದರಿಂದ ಜೀವ ಉಳಿಸುವುದರ ಜೊತೆ ಆರೋಗ್ಯವಂತರಾಗಿರಲು ಸಹಾಯಕವಾಗುತ್ತದೆ ಎಂದು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಎಸ್.ಎ.ಖಾದ್ರಿ ಮಾತನಾಡಿದರು.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಕೇರಿಂಗ್ ಸೋಲ್ಸ್ ಇಂಡಿಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಯಿತು.
ಈ ಶಿಬಿರದಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಸಹಾಯದಿಂದ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಸ್.ಎ.ಖಾದ್ರಿ ಹಾಗೂ ಡಾ. ಅರವಿಂದ ಐರಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನ ಜೀವದಾನ ಮಾಡಿದ ಹಾಗೆ ಆಗುತ್ತದೆ. ರಕ್ತದಾನ ಮಾಡುವುದರಿಂದ ಮತ್ತಮ ಉತ್ತಮ ಆರೋಗವನು ಳೆಸಿಕೊಳಬಹುದು. ಆರೋಗ್ಯವಂತ ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ರಕ್ತದಾನದಿಂದ ನಮ ದೇಹಕ್ಕೂ ಸಾಕಷ್ಟು ಲಾಭಗಳಿದ್ದು ಬಡ ಜೀವಿಗಳಿಗೂ ಅನುಕೂಲವಾಗುತ್ತದೆ.
ಈ ಸಂದರ್ಭದಲ್ಲಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಅಬ್ಬಾಸ ಅಲಿ, ಪ್ರೊ. ಸಚೀನ ಪಾಂಡೆ, ಪ್ರೊ, ಅಲ್ತಾಫ್ ಬಾಗವಾನ, ಪ್ರೊ. ಅಬ್ಬಾಸ ಬಾಗವಾನ, ಪ್ರೊ ಸುನೀಲ ಥಾಣೆದ, ಪ್ರೊ. ದಿಲೀಪ ಸುಡ್ತಾವೆ, ಪ್ರೊ. ಅಬ್ಬಾಸ ಬಾಗವಾನ, ಪ್ರೊ.ಸಮೀರ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಂಡಿಯನ್ ರೆಡಕ್ರಾಸ್ ವತಿಯಿಂದ ಡಾ. ಎನ್.ಬಿ.ದೇಸಾಯಿ,ಡಾ. ಸುನೀಲ, ಡಾ. ಅರವಿಂದ ಏರಿ, ಅಯ್ಯಪ್ಪ ಕೋಳಿ, ಕುಶಾಲ ಭಂಡಾರಿ, ಕೇರಿಂಗ್ ಸೋಲ್ಸ್ ವತಿಯಿಂದ ಎಂ.ಎಂ.ದೊಡ್ಡಮನಿ ಹಾಗೂ ಪದಾಧಿಕಾರಿಗಳು, ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಆಸೀಫ್ ದೊಡ್ಡಮನಿಯವರು ಈ ಕಾರ್ಯಕ್ರಮವನ್ನು ನೆರವೇರಿಸಿದರು.