ವಿಜಯಪುರ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಿಂಗ್ ಸೋಲ್ಡ್ ಇಂಡಿಯಾ ಸಂಸ್ಥೆಯು ಪ್ರಥಮ ವಾರ್ಷಿಕೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿತು. ಈ ಸಂದಂರ್ಭದಲ್ಲಿ ಮುಖ್ಯ ಅತಿಥಿಯಾಗಿ ಎಮ್.ಎ ಶೇಖ್ (ಹಾಸ್ಟೆಲ್ ಸುಪಿರಿಟೆಡೆಂಟ್, ಬಿ.ಸಿ.ಎಮ್ ಇಲಾಖೆ, ಕರ್ನಾಟಕ ಸರ್ಕಾರ) ಹಾಗೂ ವಿಜಯಕುಮಾರ ಮುದ್ದೇಬಿಹಾಳ (ಹಾಸ್ಟೇಲ್ ಸುಪಿರಿಟೆಡೆಂಟ್, ಬಿ.ಸಿ.ಎಮ್ ಇಲಾಖೆ, ಕರ್ನಾಟಕ ಸರ್ಕಾರ) ಉಪಸ್ಥಿತರಿದ್ದರು.
ಈ ಸಂಧಂರ್ಭದಲ್ಲಿ ಮುಖ್ಯ ಅಥಿತಿಗಳಾದ ಎಮ್.ಎ ಶೇಖ್ ರವರು ಮಾನವಿಯತೆ ಬಗ್ಗೆ ಕಾಳಜಿವುಳ್ಳ ಕೇರಿಂಗ್ ಸೋಲ್ಸ್ ಸಂಸ್ಥೆಯ ಕಾರ್ಯಗಳನ್ನು ಹೊಗಳಿದರು. ಹಾಗೂ ಮಾನವಿಯ ಧರ್ಮದ ಮಹತ್ವವು ಈ ದಿನಗಳಲ್ಲಿ ಸಮಾಜಕ್ಕೆ ಅತ್ಯಂತ ಮಹತ್ವವಾದದ್ದು ಎಂದು ಹೇಳಿದರು. ಇದೇ ಸಂದಂರ್ಭದಲ್ಲಿ ಇನ್ನೊರ್ವ ಮುಖ್ಯ ಅತಿಥಿಯಾದ ವಿಜಯಕುಮಾರ ಮುದ್ದೇಬಿಹಾಳ ಅವರು ಕೇರಿಂಗ್ ಸೋಲ್ಡ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಧ್ಯಾರ್ಥಿ ಬಳಗಕ್ಕೆ ಶ್ಲಾಘಿಸಿದರು. ವಿಧ್ಯಾರ್ಥಿಗಳ ಮಾಡಿದ ಕಾರ್ಯ ಸಮಾಜಕ್ಕೆ ಅಮೂಲ್ಯವಾದದ್ದು. ಅವರ ಈ ಕಾರ್ಯದಿಂದ ಬಡ ಜೀವಿಗಳಿಗೆ ತುಂಬಾ ಸಹಾಯವಾಗಿದೆ ಎಂದು ನುಡಿದರು.
ಇದೇ ಸಂದಂರ್ಭದಲ್ಲಿ ಕೇರಿಂಗ್ ಸೋಲ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಎಮ್.ಎಮ್.ದೊಡ್ಡಮನಿ ಅವರು ಕಳೆದ 1 ವರ್ಷಗಳಲ್ಲಿ ನಡೆದ ಕಾರ್ಯದ ಬಗ್ಗೆ ವಿವರವಾಗಿ ನುಡಿದರು ಅದರಲ್ಲಿ ಮುಖ್ಯವಾದದ್ದು ಸಾಮಾಜಿಕ ಪ್ರದೇಶದಲ್ಲಿ ವಾಸವಾಗಿರುವ ಹಿರಿಯ ಜೀವಿಗಳಿಗೆ ವೈದ್ಯಕೀಯ ಸೌಲಭ್ಯ ಹಾಗೂ ವಿಕಲಚೇತನ ಹಾಗೂ ಕೊಳಚೆ ಪ್ರದೇಶದ ಮಕ್ಕಳಿಗೆ ಶಿಕ್ಷಣ ಹಿರಿಯ ಜೀವಿಗಳಿಗೆ ಚಳಿಗಾಲದಲ್ಲಿ ಹಾಸಿಗೆಯನ್ನು ವಿತರಣೆ ಹಾಗೂ ನಿರ್ಗತಿಕರಿಗೆ ಮಾಸಿಕ ಪೆನನ್ ಸೌಲಭ್ಯ ಮಾಡುವುದು,
ಕೋವಿಡ್-19 ಸಮಯದಲ್ಲಿ ಸುಮಾರು 300 ಬಡಕುಟುಂಬಗಳಿಗೆ ಆಹಾರ ಕಿಟ್ನ್ನು ವಿತರಿಸಲಾಯಿತು. ಹಾಗೆ ಹಲವು ಪ್ರಮುಖ ಹಬ್ಬಗಳಾದ ರಂಜಾನ್, ದೀಪಾವಳಿಗಳಲ್ಲಿ ಸುಮಾರು 500 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಡ ವಿಧ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಹಾಗೂ ಆರ್ಥಿಕ ನೆರವು ಹಿರಿಯ ಜೀವಿಗಳಿಗೆ ಒಲ್ಲೆಜ್ ಹೋಮ್ ಹಾಗೂ ವಿಧ್ಯಾರ್ಥಿಗಳಿಗೆ ಹಲವು ಸ್ವಯಂ ಪ್ರೇರಿತ ಹಾಗೂ ಉದ್ಯೋಗ ಕಲ್ಪಿಸುವ ಸರ್ಕಾರ ಮಾನ್ಯತೆ ಪಡೆದ ಉಚಿತ ಉದ್ಯೋಗ ಶಿಬಿರವನ್ನು ಹಮ್ಮಿಕೊಳ್ಳುವ ನಿರ್ಣಯ ಹೊಂದಿದ್ದಾರೆ.
ಕಾರ್ಯಕ್ರಮವನ್ನು ನಿಯಾಜ್ ಬಾಗವಾನ ಅವರು ನಿರೂಪಿಸಿದರು ಹಾಗೂ ಅತಿಥಿಗಳಿಗೆ ಬಂದೇನವಾಜ್ ಲೋಣಿ (ಟ್ರಸ್ಟಿ ಕೇರಿಂಗ್ ಸೋಲ್ಸ ಇಂಡಿಯಾ) ಹಾಗೂ ಅಸ್ಲಮ್ ಕರಜಗಿ (ಪ್ರೊಜೆಕ್ಟ್ ಅಂಡ್ ಇವೆಂಟ್ಸ್ ಹೇಡ್) ಸನ್ಮಾನಿಸಿದರು. ಈ ಸಮಯದಲ್ಲಿ ವಿನಾಯಕ ಕುಂಟೆ (ಟ್ರಸ್ಟಿ ಕೇರಿಂಗ್ ಸೋಲ್ಸ ಇಂಡಿಯಾ) ಹಾಗೂ ಸದಸ್ಯರಾದ ಅಬ್ದುಲ ರೆಹಮಾನ್ ಸಾರವಾಡ, ಉಮೇರ ಸೌದಾಗರ, ಅಹತೆಶ್ಯಾಮ, ಅಬ್ಬಾಸ ಬಾಗವಾನ, ಸಚೀನ ಪಾಂಡೆ, ಸಮೀರ ಸಿಪಾಯಿ, ಶೋಯೆಬ್ ಜತ್ತ, ಕುಶಲ ಕಬಾಡೆ, ಮೋಶಿನ ಮನಿಯಾರ, ಹಜರತ ಬಿಲಾಲ, ಶೋಯೆಬ್ ಚೌಧರಿ, ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಸಿಕ್ಯಾಬ್ ಇಂಜನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊಪೆಸರ್ ಆಶೀಫ್ ಇಕ್ವಾಲ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ನೆರವೆರಿತು.