ಕೇಂದ್ರ ಸಚಿವ ಸಂಪುಟವು ಇನ್ನೂ ಐದು ಭಾಷೆಗಳನ್ನು “ಶಾಸ್ತ್ರೀಯ” ಎಂದು ಗುರುತಿಸಲು ಅನುಮೋದನೆ ನೀಡಿದೆ. ಐದು ಭಾರತೀಯ ಭಾಷೆಗಳಾದ ಮರಾಠಿ , ಪಾಲಿ , ಪ್ರಾಕೃತ , ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಅಕ್ಟೋಬರ್ 03 ರಂದು (ಗುರುವಾರ) ಘೋಷಿಸಿದ್ದಾರೆ.
ಈಗಾಗಲೇ ಶಾಸ್ತ್ರೀಯವೆಂದು ಗುರುತಿಸಲ್ಪಟ್ಟಿರುವ ಇತರ ಆರು ಭಾಷೆಗಳಾದ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾದ ಪಟ್ಟಿಗೆ ಸೇರುತ್ತವೆ. ಅಂದ್ಹಾಗೆ, ಕನ್ನಡ, ತಮಿಳು, ಸಂಸ್ಕೃತ, ತೆಲುಗು, ಮಲಯಾಳಂ ಮತ್ತು ಒರಿಯಾ ಭಾಷೆಗಳಿಗೆ ಈಗಾಗಲೇ ಶಾಸ್ತ್ರೀಯ ಸ್ಥಾನ ದೊರೆತಿರುವುದರಿಂದ ಶಾಸ್ತ್ರೀಯ ಭಾರತೀಯ ಭಾಷೆಗಳ ಸಂಖ್ಯೆ ಈಗ 6 ರಿಂದ 11 ಕ್ಕೆ ತಲುಪಿದೆ.
ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬೆಂಗಾಲಿ ಭಾಷೆಗಳನ್ನು ಪ್ರತಿಷ್ಠಿತ ವಿಭಾಗದಲ್ಲಿ ಸೇರಿಸಲಾಗಿದೆ. 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಮೊದಲ ಭಾಷೆ ತಮಿಳು, ನಂತರ 2005ರಲ್ಲಿ ಸಂಸ್ಕೃತ. ಕನ್ನಡ ಮತ್ತು ತೆಲುಗು 2008 ರಲ್ಲಿ ಘೋಷಿಸಲಾಯಿತು, ಮಲಯಾಳಂ 2013 ರಲ್ಲಿ ಘೋಷಿಸಲಾಯಿತು ಮತ್ತು ಒಡಿಯಾ 2014 ರಲ್ಲಿ ಟ್ಯಾಗ್ ನೀಡಿತು.
2004ರ ಅಕ್ಟೋಬರ್ 12ರಂದು ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನವನ್ನು ನೀಡುವ ಪರಿಲ್ಪನೆಯನ್ನು ಭಾರತ ಸರ್ಕಾರವು ನಿರ್ಧರಿಸಿತ್ತು.
ಮೊದಲನೇಯದಾಗಿ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲಾಗಿತ್ತು. ಬಳಿಕ ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳೂ ಶಾಸ್ತ್ರೀಯ ಸ್ಥಾನಮಾವನ್ನು ಪಡೆದಿವೆ.
Subscribe to Updates
Get the latest creative news from FooBar about art, design and business.
Previous ArticleKPSCಯಿಂದ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Next Article KPSCಯಿಂದ ಕೃಷಿ ಇಲಾಖೆಯಲ್ಲಿ 945 ವಿವಿಧ ಹುದ್ದೆಗಳ ನೇಮಕಾತಿ