*ಸುರಕ್ಷತೆಯ ವ್ಯವಸ್ಥೆಯಲ್ಲಿ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಕೇಂದ್ರ ವಸತಿ ಮತ್ತು ನಗರ ಸಚಿವಾಲಯದ ಪ್ರಶಸ್ತಿಗೆ ದಾವಣಗೆರೆ ಆಯ್ಕೆಯಾಗಿದೆ.
* ಒಟ್ಟು 12 ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿದ್ದು ,ಸೇಫ್ಟಿ ಆಂಡ್ ರೆಕಾರ್ಡ್ ವಿಭಾಗದಲ್ಲಿ ಮೊದಲು 21 ನಗರಗಳನ್ನು ಆಯ್ಕೆ ಮಾಡಿ ನಂತರ ಅತ್ಯುತ್ತಮ ಯಾವುದು ಎಂದು ವಿಶ್ಲೇಷಣೆ ಮಾಡಿದಾಗ ದಾವಣಗೆರೆಗೆ ಪ್ರಶಸ್ತಿ ಬಂದಿತು ಎಂದು ಸ್ಪರ್ಧೆಯಲ್ಲಿ ದಾವಣಗೆರೆಯ ಪರವಾಗಿ ಭಾಗವಹಿಸಿದ್ದ ಸ್ಮಾರ್ಟ್ ಸಿಟಿ ಐಟಿ ಡಿಜಿಎಂ ಮಮತಾ ತಿಳಿಸಿದರು.
* ಕಮಾಂಡ್ ಕಂಟ್ರೋಲ್ ಸೆಂಟರ್(ಸಿಸಿಸಿ) ನಲ್ಲಿ ದಾವಣಗೆರೆ ನಗರದ ಎಲ್ಲ ಆಗುಹೋಗುಗಳು ದಾಖಲಾಗುತ್ತಿವೆ, ಮತ್ತು 248 ಸಿಸಿಟಿವಿ ಕ್ಯಾಮೆರಾಗಳು ನಗರದ ಎಲ್ಲ ಕಡೆ ಕಣ್ಗಾವಲು ಇಟ್ಟಿವೆ.
* ಯಾವುದೇ ಅಪರಾಧ,ನಾಪತ್ತೆ,ನಿಯಮ ಉಲ್ಲಂಘನೆಗಳನ್ನು ಈ ಸೆಂಟರ್ ಮೂಲಕವೇ ತಿಳಿಯಬಹುದು, ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ 18 ,610 ಪ್ರಕರಣಗಳನ್ನು ದಾಖಲಿಸಿದೆ.
* ನ.6 ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ ಅರ್ಬನ್ ಮೊಬಿಲಿಟಿ ಇಂಡಿಯಾ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಆಗಲಿದೆ.