* ಪ್ರಸ್ತುತ ಮೈಸೂರು ವಿವಿ (Mysore University)ಯು ಇದೀಗ ದಿವಂಗಂತ ನಟ “ಪುನೀತ್ ರಾಜ್ ಕುಮಾರ್” ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡುವದಾಗಿ ಘೋಷಣೆ ಮಾಡಿದೆ. ಈ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾಲ್ಯದ ಕುಲಪತಿಯವರು ನೀಡಿದ್ದಾರೆ. * ಇದೇ ವರ್ಷದ ಮಾರ್ಚ್. 22 ರಂದು ನಡೆಯುವ ಘಟಿಕೋತ್ಸವದಲ್ಲಿ ದಿವಂಗತ ನಟ “ಪುನೀತ್ ರಾಜ್ ಕುಮಾರ್” ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. * ಈ ಮೊದಲು 46 ವರ್ಷದ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರಿಗೂ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ಇದೀಗ ಅವರ ಪುತ್ರನಾಗಿರುವ ‘ಪುನೀತ್ ರಾಜ್ ಕುಮಾರ್’ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಡಾಕ್ಟರೇಟ್ ಪದವಿಯು ವಿಶ್ವವಿದ್ಯಾನಿಲಯಗಳಿಂದ ನೀಡುವ ಶೈಕ್ಷಣಿಕ ಪದವಿಯಾಗಿದೆ, ಇದನ್ನು ಪ್ರಾಚೀನ ಔಪಚಾರಿಕವಾದ ಲೈಸೆನ್ಷಿಯಾ ಡೊಸೆಂಡಿಯಿಂದ ಪಡೆದಿದೆ. ಹೆಚ್ಚಿನ ದೇಶಗಳಲ್ಲಿ, ಸಂಶೋಧನಾ ಪದವಿಯು ಪದವಿಯ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಸಲು ಅಥವಾ ನಿರ್ದಿಷ್ಟ ವೃತ್ತಿಯಲ್ಲಿ ಕೆಲಸ ಮಾಡಲು ಹೊಂದಿರುವವರಿಗೆ ಈ ಅರ್ಹತೆಯನ್ನು ನೀಡಲಾಗುತ್ತದೆ. ಡಾಕ್ಟರ್ ಆಫ್ ಫಿಲಾಸಫಿ (Phd) ಮಾನವಿಕತೆಯಿಂದ ಹಿಡಿದುಕೊಂಡು ವೈಜ್ಞಾನಿಕ ವಿಭಾಗದ ಅನೇಕ ಕ್ಷೇತ್ರಗಳಲ್ಲಿ ನೀಡಿ ಗೌರವಿಸಲಾಗುತ್ತದೆ. * ವಿಶ್ವವಿದ್ಯಾನಿಲಯ ಅಥವಾ ಸಮಾಜಕ್ಕೆ ಇತರ ಕೊಡುಗೆಗಳಿಗಾಗಿ ವಿಶೇಷ ಮನ್ನಣೆಗೆ ಅರ್ಹರೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನ್ನು ನೀಡಿ ಗೌರವಿಸಲಾಗುತ್ತದೆ. * ಪುನೀತ್ ರಾಜ್ಕುಮಾರ್ ಅವರನ್ನು ಸಾಮಾನ್ಯವಾಗಿ ಅಪ್ಪು ಎನ್ನಲಾಗುತ್ತದೆ. ಇವರು ಭಾರತೀಯ ನಟ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ ಹಾಗೂ ನಿರ್ಮಾಪಕರು, ಇವರು 29 ಚಿತ್ರಗಳಲ್ಲಿ ನಾಯಕ ನಟರಾಗಿದ್ದರು, ಇವರು ಬೆಟ್ಟದ ಹೂವು ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚಳಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವು ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನವೆಂಬರ್ 2021 ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನವನ್ನು ಘೋಷಣೆ ಮಾಡಿದೆ.
Subscribe to Updates
Get the latest creative news from FooBar about art, design and business.