* ರಷ್ಯಾ ರಾಜಧಾನಿ ಮಾಸ್ಕೋ ನ್ಯಾಯಾಲಯವು ಇದೀಗ ರಷ್ಯಾದಲ್ಲಿ ಸಾಮಾಜಿಕ ಜಾಲತಾಣಗಳಾಗಿರುವ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ನ್ನು ನಿಷೇಧಿಸಲು ತೀರ್ಪು ನೀಡಿದೆ. ಕಾರಣ ಸಾಮಾಜಿಕ ನೆಟ್‌ವರ್ಕ್‌ಗಳ ಮೂಲ ಕಂಪನಿ ಮೆಟಾವನ್ನು “ಉಗ್ರವಾದಿ” ಎಂದು ಹೇಳಿಕೆ ನೀಡಿದೆ ಈ ಹಿನ್ನಲೆಯಿಂದಾಗಿ ನಿಷೇಧಿಸಲಾಗಿದೆ. * ಪ್ರಸ್ತುತ ಸುದ್ದಿ ವಾಹಿನಿಯು ವರದಿ ಮಾಡಿರುವ ಪ್ರಕಾರ ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಕಚೇರಿಯು ಮೊಕದ್ದಮೆಯು, ಅವರ ಹಕ್ಕುಗಳ ಉಲ್ಲಂಘನೆಯಿಂದ ರಕ್ಷಿಸುವ ಗುರಿಯನ್ನು ಒಳಗೊಂಡಿದೆ ಎಂದು ಹೇಳಿದೆ. * ಪ್ರಾಸಿಕ್ಯೂಟರ್‌ಗಳು ಹೇಳಿಕೆ ನೀಡಿರುವ ಪ್ರಕಾರ ಇತ್ತೀಚಿಗೆ ಮೆಟಾ ರಷ್ಯಾದ ಮಿಲಿಟರಿಯ ಕಡೆಗೆ ಹಿಂಸಾತ್ಮಕ ಸಂದೇಶಗಳ ಪೋಸ್ಟ್‌ಗಳನ್ನು ಮಾಡುವ ಮೂಲಕ ತನ್ನ ನಿಯಮಗಳನ್ನು ಉಲ್ಲಂಘಿಸಿದೆ ಹಾಗೂ ರಷ್ಯಾದ ವಿಶೇಷ ಮಿಲಿಟರಿ ಕಾರ್ಯಾಚರಣೆ ಹಾಗೂ ಅನಧಿಕೃತ ಮೆರವಣಿಗೆಯ ಬಗೆಗಿನ ನಕಲಿ ಮಾಹಿತಿಯನ್ನು ತೆಗೆದುಹಾಕಲು 4,500 ಕ್ಕೂ ಅಧಿಕ ವಿನಂತಿಗಳನ್ನು ನಿರ್ಲಕ್ಷಿಸಿದೆ ಎಂದು ತಿಳಿಸಿದ್ದಾರೆ. * ಇದೀಗ ರಷ್ಯಾದ ಮಾಧ್ಯಮವು ಮೆಟಾವನ್ನು “ಉಗ್ರಗಾಮಿ ಸಂಘಟನೆ” ಎಂದು ಘೋಷಣೆ ಮಾಡಬೇಕು ಎಂದು BBC ವರದಿ ಮಾಡಿದೆ. ಪ್ರಾಸಿಕ್ಯೂಟರ್ ಜನರಲ್ ಕಚೇರಿ ಹಾಗೂ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಮಾಸ್ಕೋ ಹಾಗೂ ಅದರ ಸಶಸ್ತ್ರ ಪಡೆಗಳ ವಿರುದ್ಧ ಸಾಮಾಜಿಕ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪದ ಅಡಿಯಲ್ಲಿ ಮೆಟಾವನ್ನು ರಷ್ಯಾದಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ. ರಷ್ಯಾದಲ್ಲಿ ಈ ಹಿಂದೆ ಮಾರ್ಚ್. 04 ರಿಂದ ಫೇಸ್‌ಬುಕ್ ನ್ನು ನಿರ್ಬಂಧಿಸಲಾಗಿದೆ.