ಫಲ್ಗುಣಿ ನಾಯರ್ ಅವರು ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಸೆಲ್ಫ್ ಮೇಡ್ ಬಿಲಿಯನೇರ್ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
* ನಾಯರ್ ಅವರು, ‘ಭಾರತದ ಶ್ರೀಮಂತ ಮಹಿಳಾ ಉದ್ಯಮಿ’ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
* ಅವರ ಆಸ್ತಿ ಮೌಲ್ಯ 650 ಕೋಟಿ ಅಮೆರಿಕನ್ ಡಾಲರ್ ಆಗಿದೆ.
* FSN ಇ-ಕಾಮರ್ಸ್ ವೆಂಚರ್ಸ್, ನೈಕಾದ ಮಾತೃಸಂಸ್ಥೆ. ಇದು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆದ ಮಹಿಳೆ ನೇತೃತ್ವದ ಭಾರತದ ಮೊದಲ ಯುನಿಕಾರ್ನ್ ಆಗಿದೆ.
* ಫಲ್ಗುಣಿ ನಾಯರ್ 2012 ರಲ್ಲಿ ಸ್ಥಾಪಿಸಿದ ಮಹಿಳೆ ನೇತೃತ್ವದ ಯುನಿಕಾರ್ನ್ ತನ್ನ ವೆಬ್‌ಸೈಟ್, ಅಪ್ಲಿಕೇಷನ್ ಮತ್ತು 80 ಕ್ಕೂ ಹೆಚ್ಚು ಮಳಿಗೆಗಳ ಮೂಲಕ 4,000 ಸೌಂದರ್ಯ, ಪರ್ಸನಲ್ ಕೇರ್ ಮತ್ತು ಫ್ಯಾಷನ್ ಬ್ರ್ಯಾಂಡ್‌ಗಳನ್ನು ಒದಗಿಸುತ್ತದೆ.
* 2 ನೇ ಸ್ಥಾನದಲ್ಲಿ ದಿವಂಗತ ರಾಕೇಶ್ ಝುಂಝುನ್‌ವಾಲಾ ಪತ್ನಿ ರೇಖಾ ಝುಂಝುನ್‌ವಾಲಾ ಇದ್ದಾರೆ. ಇವರ ಬಳಿ 37,200 ಕೋಟಿ ರೂ. ಆಸ್ತಿ ಇದೆ.
* ಗೋದ್ರೆಜ್‌ನ ಸ್ಮೃತಿ ವಿ ಕೃಷ್ಣ ಮೂರನೇ ಸ್ಥಾನದಲ್ಲಿದ್ದು ಅವರು ಒಟ್ಟು ಆಸ್ತಿಯ ಮೊತ್ತವು 32,000 ಕೋಟಿ ರೂ.ಇದೆ.
* ಬಯೋಕಾನ್‌ನ ಕಿರಣ್ ಮಜೂಮ್ದಾರ್ ಶಾ ಅವರು 4 ನೇ ಸ್ಥಾನದಲ್ಲಿದ್ದು, ಅವರ ಆಸ್ತಿಯ ಮೊತ್ತವು 24,800 ಕೋಟಿ ರೂ. ಇದೆ.