* ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಹಾಗೂ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಬದ್ಧವಾಗಿದೆ. 2021 ಫೆ.09 ರಿಂದ ಪ್ರತಿ ಸಾಲಿನಲ್ಲೂ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಪೂರಕ ಕ್ರಮಗಳನ್ನು ವಹಿಸಲಾಗುತ್ತದೆ.
* 07/02/2022 ರಿಂದ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಜೀತ ವಿಮುಕ್ತರಿಗೆ ನೀಡುವ ತುರ್ತು ಪರಿಹಾರ ನಿಧಿಯನ್ನು ರೂ.20,000/- ದಿಂದ ರೂ.30,000/- ಕ್ಕೆ ಪರಿಷ್ಕರಿಸಿದೆ.
* 26/05/2022 ರಂದು ಜೀತ ಕಾರ್ಮಿಕರ ಪುನರ್ವಸತಿ ಯೋಜನೆ ಹಾಗೂ ಜೀತ ಕಾರ್ಮಿಕ ಪದ್ಧತಿ(ರದ್ದತಿ) ಕಾಯ್ದೆ 1976 ರಡಿ ಅಪರಾಧಿಗಳಿಗೆ ಶಿಕ್ಷೆ ನೀಡುವ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಡೆಸಲಾಗಿದ್ದು, ಮಾದರಿ ಕಾರ್ಯ ಗೊಳಿಸಲಾಗಿದೆ. ವಿಧಾನವನ್ನು ಬಿಡುಗಡೆ
* ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರಡಿ ಅನುಚ್ಛೇದ 58A ರಡಿ ಗ್ರಾಮ ಪಂಚಾಯಿತಿ ಪ್ರಕಾರ್ಯಗಳ ಅನುಸಾರ ಕಾರ್ಮಿಕರು ಕಂಡು ಬಂದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಯು ಅದನ್ನು ಉಪವಿಭಾಗಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ವರದಿ ಮಾಡತಕ್ಕದ್ದು.
* ಜೀತ ವಿಮುಕ್ತರ ಪುನರ್ವಸತಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಜಿಲ್ಲಾ ಹಾಗೂ ಉಪವಿಭಾಗ ಹಂತದಲ್ಲಿ ವಿವಿಧ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳನ್ನೊಳಗೊಂಡ ಜಾಗೃತ ಸಮಿತಿಗಳನ್ನು ರಚಿಸಲಾಗಿದೆ.
* ಜಿಲ್ಲಾ ಹಂತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಯೋಜನೆಯ ಫಲಾನುಭವಿಗಳಿಗೆ ಅನುದಾನೇತರ ಪುನರ್ವಸತಿ ಸೌಲಭ್ಯಗಳನ್ನು ವಿತರಿಸಲು ಕ್ರಮವಹಿಸಲಾಗಿದೆ (ವಸತಿ, ನಿವೇಶನ, ನರೇಗಾ ಉದ್ಯೋಗ ಚೀಟಿ, ಕೌಶಲ್ಯ ತರಬೇತಿ, ಸಾಲ ಸೌಲಭ್ಯ ನೆರವು, ಜೀತ ವಿಮುಕ್ತರ ಸ್ವಸಹಾಯ ಗುಂಪುಗಳ ರಚನೆ, ಮೂಲಭೂತ ವೈಯಕ್ತಿಕ ದಾಖಲಾತಿಗಳು, ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ)
Subscribe to Updates
Get the latest creative news from FooBar about art, design and business.
Previous Articleಸಲ್ಮಾನ್ ರಶ್ದಿ ಅವರ ಹೊಸ ಕಾದಂಬರಿ ‘ವಿಕ್ಟರಿ ಸಿಟಿ’ ಬಿಡುಗಡೆಯಾಗಿದೆ
Next Article ರೆಪೊದರ ಹೆಚ್ಚಿಸಿದ ಆರ್ ಬಿಐ