* ಕನ್ನಡದ ಕಡ್ಡಾಯ ಬಳಕೆಗೆ ಕಾನೂನಿನ ಬಲ ನೀಡಲು ಹೊಸ ಕಾಯ್ದೆಯನ್ನು ಜಾರಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ಘೋಷಿಸಿದರು.
* ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ನೀಡಲು ‘ಕನ್ನಡ ಬಳಕೆ ಕಡ್ಡಾಯ’ ಕಾನೂನನ್ನು ಜಾರಿ ಮಾಡುತ್ತಿದ್ದೇವೆ. ಪ್ರಥಮ ಬಾರಿಗೆ ಇಂತಹ ಒಂದು ಕಾನೂನನ್ನು ಜಾರಿ ಮಾಡಲಾಗುತ್ತಿದೆ.
* * ಪ್ರಮುಖ ಅಂಶಗಳು : –
– 1 ರಿಂದ 10 ತಗತಿಯ ವರೆಗೆ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು.
– ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು, ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ನಿಕಾಯಗಳು, ಸಹಕಾರಿ ಸಂಘಗಳು, ರಾಜ್ಯದಲ್ಲಿ ಇತರ ಸಂಘಗಳಲ್ಲಿ ನೇಮಕಾತಿ ಪಡೆಯಲು ಕನ್ನಡ ಭಾಷಾ ಜ್ಞಾನ ಕಡ್ಡಾಯ.
– ಅಧೀನ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಮಂಡಳಿ ಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು.
– ಕನ್ನಡಿಗರಿಗೆ ಉದ್ಯೋಗ ಸೃಜಿಸಲು ಪ್ರತ್ಯೇಕ ಪೋರ್ಟಲ್ ಅನ್ನು ಸ್ಥಾಪಿಸುವುದು.
– ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಸ್ಥರು ಕಾಯ್ದೆ ಉಲ್ಲಂಘಿಸಿದರೆ ದಂಡವನ್ನೂ ವಿಧಿಸುವುದು.ರಾಜ್ಯ ಮೊದಲ ಭಾರಿಗೆ ಇಂಜಿನಿಯರಿಂಗ್ ಕೋರ್ಸ್ ಅನ್ನು ಕನ್ನಡದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Next Article ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ರಾಬಿನ್ ಉತ್ತಪ್ಪ