* ಪಾಕಿಸ್ತಾನದ ಮಾಜಿ ಅದ್ಯಕ್ಷ, ಮಾಜಿ ಸೇನಾ ಮುಖ್ಯಸ್ಥ ಜನರಲ್ 1999ರ ಕಾರ್ಗಿಲ್ ಯುದ್ಧದ ವಾಸ್ತುಶಿಲ್ಪಿ 79 ವರ್ಷದ ಪರ್ವೇಜ್ ಮುಷರಫ್ ಅವರು ಫೆ.05 ರಂದು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಷರಫ್ ಅವರು 1943ರ ಆಗಸ್ಟ್ 11 ರಂದು ದೆಹಲಿಯಲ್ಲಿ ಜನಿಸಿದರು.
* 1964 ರಲ್ಲಿ ಪಾಕಿಸ್ತಾನದ ಸೇನೆಗೆ ಸೇರಿದರು ಮತ್ತು ಕ್ವೆಟ್ಟಾದ ಸೇನಾ ಸಿಬ್ಬಂದಿ ಮತ್ತು ಕಮಾಂಡ್ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದರು. ಮುಷರಫ್ ರವರು 1999 ರಿಂದ 2008 ರವರೆಗೆ ಪಾಕಿಸ್ತಾನವನ್ನು ಆಳ್ವಿಕೆ ಮಾಡಿದ್ದಾರೆ ಎನ್ನಲಾಗಿದೆ.
* ಸೇನಾ ಮುಖ್ಯಸ್ಥರಾಗಿದ್ದ ಅವರು 1999ರಲ್ಲಿ ಸೇನಾ ಬಲ ಬಳಸಿಕೊಂಡು ಆಗಿನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ರಕ್ತಪಾತರಹಿತ ದಂಗೆ ನಡೆಸಿ, ಅಧಿಕಾರವನ್ನು ಕಿತ್ತುಕೊಂಡಿದ್ದರು. ಬಳಿಕ 2001ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಭಾರತದ ವಿರುದ್ಧ ಕಾರ್ಗಿಲ್ ಯುದ್ಧವನ್ನು ಆರಂಭಿಸಿ ಮುಖಭಂಗ ಅನುಭವಿಸಿದ್ದರು
Subscribe to Updates
Get the latest creative news from FooBar about art, design and business.
Previous Articleವಿಶ್ವ ಕ್ಯಾನ್ಸರ್ ಜಾಗೃತಿ ದಿನ