* ದಕ್ಷಿಣ ಕೊರಿಯಾಲ್ಲಿ ನಡೆದ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಮೆಹುಲಿ ಘೋಷ್ ಮತ್ತು ಶಾಹು ತುಷಾರ್ ಮಾನೆ ಅವರು ಚಿನ್ನದ ಪದಕವನ್ನು ಪಡೆದುಕೊಂಡರು ಇವರು 10 ಮೀಟರ್ಸ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಗೆದ್ದು ಭಾರತಕ್ಕೆ ಪದಕವನ್ನು ತಂದು ಕೊಂಡಿದ್ದಾರೆ ಹಾಗು ಈ ಟೂರ್ನಿಯಲ್ಲಿ ಗೆದ್ದ ಎರಡನೇ ಚಿನ್ನವಾಗಿದೆ.
* ಸೋಮವಾರ 10 ಮೀಟರ್ಸ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಅರ್ಜುನ ಬಬೂತಾ ಚಿನ್ನ ಜಯಿಸಿದ್ದರು.
* ಹಂಗರಿಯ ಈಸ್ತರ್ ಮೆಸ್‌ಜರೋಸ್ ಮತ್ತು ಈಸ್ತವನ್ ಪೆನ್ ಅವರನ್ನು ಫೈನಲ್ ಹಣಾಹಣಿಯಲ್ಲಿ ಮೆಹುಲಿ ಮತ್ತು ತುಷಾರ 17-13 ರಿಂದ ಸೋಲಿಸಿದರು ಮತ್ತು ಮೂರು ಮತ್ತು ನಾಲ್ಕನೇ ಸ್ಥಾನವನ್ನು ಇಸ್ರೇಲ್ ಮತ್ತು ಜೆಕ್ ಗಣರಾಜ್ಯದ ಶೂಟರ್‌ಗಳು ಪಡೆದುಕೊಂಡಿದ್ದಾರೆ.
* ತುಷಾರ್ ರವರಿಗೆ ಸೀನಿಯರ್ ಮಟ್ಟದಲ್ಲಿ ದೇಶದ ಪರ ಇವರಿಗೆ ಮೊದಲ ಚಿನ್ನದ ಪದಕ ವಾಗಿದೆ.
* 2019 ರಲ್ಲಿ ನೇಪಾಳದ ಕಟ್ಮಂಡುವಿನಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಮೆಹುಲಿ ಅವರು ಚಿನ್ನದ ಪದಕ ಗೆದಿದ್ದಾರೆ ಮತ್ತು ಪಲಕ್ ಮತ್ತು ಶಿವ ನರ್ವಾಲ್ ಜೋಡಿಯು 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
* ಭಾರತದ ಶೂಟರ್ ಗಳು 16 -0 ಇಂದ ಕಜಕಿಸ್ತಾನದ ಐರಿನಾ ಲೊಕ್ತಿನೋವ ಮತ್ತು ವಲೆರಿಯ ರಕಿಮ್ ಜಾನ್ ಅವರನ್ನು ಮಿಶ್ರ ತಂಡದ ವಿಭಾಗದಲ್ಲಿ ಈ ಸ್ಪರ್ಧೆಯಲ್ಲಿ ಭಾರತದ ಶೂಟರ್ ನಲ್ಲಿ ಅವರನ್ನು ಸೋಲಿಸಿದರು.
* ಸರ್ಬಿಯಾ ಮೊದಲ ಸ್ಥಾನದಲ್ಲಿ ಇದೆ ಹಾಗು ಭಾರತವು (ಎರಡು ಚಿನ್ನ ಮತ್ತು ಒಂದು ಕಂಚು) ತಂಡವು ಸದ್ಯ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದೆ.
Subscribe to Updates
Get the latest creative news from FooBar about art, design and business.
ವಿಶ್ವಕಪ್‌ನಲ್ಲಿ ಮೆಹುಲಿ ಘೋಷ್ ಮತ್ತು ಶಾಹು ತುಷಾರ್ ಮಾನೆಗೆ ಚಿನ್ನದ ಪದಕ
Previous Article2023 ರಲ್ಲಿ ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಲಿರುವ ಭಾರತ
Next Article ಭಾರತದ ಕೇರಳ ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ