* ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಥಮ ಬಾರಿಗೆ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಗಳಿಗೆ ‘ರಾಜ್ಯಮಟ್ಟದ ಪ್ರಶಸ್ತಿ’ ನೀಡಲು ತೀರ್ಮಾನಿಸಿದೆ.
* ನರೇಗಾ ಯೋಜನೆ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕೂಲಿಕಾರರಿಗೆ ವರ್ಷಪೂರ್ತಿ ಉದ್ಯೋಗ ಅವಕಾಶ ಕಲ್ಪಿಸಿರುವ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿಗಳು – ಮತ್ತು ಅನುಷ್ಠಾನ ಇಲಾಖೆಗಳನ್ನು ಗುರುತಿಸಿ ಶಿಕ್ಷಣ ಸ್ನೇಹಿ ಪಂಚಾಯತ್ – ಪುರಸ್ಕಾರ, ಮಕ್ಕಳ ಸ್ನೇಹಿ ಪಂಚಾಯತ್ ಪುರಸ್ಕಾರ, ಅಮೃತ ಸರೋವರ ಪುರಸ್ಕಾರ, ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರ, ಜಿಲ್ಲಾ, ತಾಲ್ಲೂಕು (1) ಪಂಚಾಯಿತಿ ಐಇಸಿ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಕ್ರಮ ವಹಿಸಿದೆ.
* ಈ ವರ್ಷ ಸಾಧನೆಗೈದಿರುವ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಗಳಿಗೆ ‘ರಾಜ್ಯಮಟ್ಟದ ಪ್ರಶಸ್ತಿ’ ನೀಡಿ ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಥಮ 5 ಲಕ್ಷ ರೂ., ದ್ವಿತೀಯ 3 ಲಕ್ಷ ರೂ., ತೃತೀಯ 2 ಲಕ್ಷ ರೂ. ಹೀಗೆ ವಿವಿಧ ನಗದು ಬಹುಮಾನಗಳಿವೆ.
* ರಾಜ್ಯದಲ್ಲಿ ಅತೀ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿರುವ ಜಿಲ್ಲೆಗಳು
– ಬೆಳಗಾವಿ : 1 . 09 ಕೋಟಿ ದಿನಗಳು
– ರಾಯಚೂರು : 99 ಲಕ್ಷ ದಿನಗಳು
– ಕೊಪ್ಪಳ : 76 ಲಕ್ಷ ದಿನಗಳು
– ವಿಜಯನಗರ : 62 ಲಕ್ಷ ದಿನಗಳು
– ಕಲಬುರ್ಗಿ : 52 ಲಕ್ಷ ದಿನಗಳು
– ಬಳ್ಳಾರಿ : 51 ಲಕ್ಷ ದಿನಗಳು
– ಬೀದರ : 44 ಲಕ್ಷ ದಿನಗಳು
– ಬಾಗಲಕೋಟೆ ಮತ್ತು ಯಾದಗಿರಿ : 43 ಲಕ್ಷ ದಿನಗಳು
– ಹಾಸನ : 40 ಲಕ್ಷ ದಿನಗಳು
Subscribe to Updates
Get the latest creative news from FooBar about art, design and business.
ಸರ್ಕಾರದಿಂದ ವಿನೂತನ ಕಾರ್ಯಕ್ರಮ ಗ್ರಾಮ ಪಂಚಾಯತ್ ಗಳಿಗೆ ಖಾತ್ರಿ ಪ್ರಶಸ್ತಿ
Next Article ಅಸ್ಸಾಂ ನ ಜಿ20 ಸಭೆ