* ಗುಜರಾತ್‌ನ ಮೊಹ್ಸಾನಾ ಜಿಲ್ಲೆಯ ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಅಕ್ಟೊಬರ್ 9) ಘೋಷಿಸಿದ್ದಾರೆ.
* ಮೊಧೇರಾ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ, ಈಗ ಅದನ್ನು ಸೌರಶಕ್ತಿ ಚಾಲಿತ ಗ್ರಾಮ ಎಂದೂ ಕರೆಯಲಾಗುತ್ತದೆ.
* ಗುಜರಾತ ರಾಜ್ಯದ ಪ್ರವಾಸದಲ್ಲಿರುವ ಮೋದಿಯವರು 14,600 ರೂ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಚಲನೆಯನ್ನು ನೀಡಿದ್ದಾರೆ.
* ಮೋದಿಯವರು ಸೋಮವಾರ ಭರೂಚ್ ಜಿಲ್ಲೆಯ ಅಮೋದ್ ನಲ್ಲಿ 8000 ರೂ ಕೋಟಿಗೂ ಹೆಚ್ಚು ಮೌಲ್ಯದ ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ.
* ಮೊಧೇರಾ ಗ್ರಾಮದಲ್ಲಿರುವ ಮನೆಗಳ ಮೇಲೆ 1000ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.
* ಮೊಧೇರಾ ಸೂರ್ಯ ದೇವಾಲಯದಿಂದ ಸುಮಾರು 6 ಕಿಮೀ ದೂರದಲ್ಲಿರುವ ಮೆಹ್ಸಾನಾದ ಸಜ್ಜನಪುರದಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ನೊಂದಿಗೆ ಸಂಯೋಜಿಸಲ್ಪಟ್ಟ ಸೌರ ವಿದ್ಯುತ್ ಯೋಜನೆಯ ಮೂಲಕ ಮೊಧೇರಾಗೆ 24×7 ಸೌರ ಶಕ್ತಿ ಒದಗಿಸುವ ಮೂಲಕ ಮೊಧೇರಾ ಸೂರ್ಯ ಮಂದಿರ ಮತ್ತು ಪಟ್ಟಣವನ್ನು ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರ ಉತ್ಪಾದಿಸಿದೆ.
Subscribe to Updates
Get the latest creative news from FooBar about art, design and business.