ಭಾರತದಲ್ಲೇ ಅತಿ ಎತ್ತರವಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆಲಂಗಾಣದ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿದ್ದು,
ಉದ್ಘಾಟನೆ ಏಪ್ರಿಲ್ 14 ಅಂಬೇಡ್ಕರ್ ಜಯಂತಿ ದಿನದಂದು ಮಾಡಲಾಗಿದೆ.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅಂಬೇಡ್ಕರ್‌ರವರ 132ನೇ ಜನ್ಮ ದಿನದಂದು ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ.
125 ಅಡಿ ಎತ್ತರವಿರುವ ಈ ಪ್ರತಿಮೆಯನ್ನು ಸುಮಾರು 11 ಎಕರೆ ಜಾಗದಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿಮೆ ನಿಂತಿರುವ ವೇದಿಕೆಯು 26,258 ಚದುರ ಅಡಿ ವಿಸ್ತೀರ್ಣ ಹೊಂದಿದ್ದು, ಮೂರು ಅಂತಸ್ತಿನ ಕಟ್ಟಡವಿದೆ. ಅದರಲ್ಲಿ ಅಂಬೇಡ್ಕರ್ ಅವ್ರ ಜೀವನ ಚರಿತ್ರೆಯನ್ನ ಬಿಂಬಿಸುವ ಕಲಾಕೃತಿಗಳು, ಪುಸ್ತಕ ಭಂಡಾರವಿದ್ದು, 100 ಸೀಟುಗಳ ಆಡಿಟೋರಿಯಂ ಕೂಡ ಇದೆ.
ಅಂದ್ಹಾಗೆ ಪದ್ಮಭೂಷಣ ಪುರಸ್ಕೃತ ಶಿಲ್ಪಿ ರಾಮ್ ವಾಂಜಿ ಸುತಾರ್ ಅವ್ರು ಪ್ರತಿಮೆಯನ್ನ ನಿರ್ಮಿಸಿದ್ದಾರೆ.