* ಇತ್ತೀಚೆಗೆ ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದಂತಹ ಅಶ್ವಿನ್ ಕುಮಾರ್ ಅವರು ಭಾರತದಲ್ಲಿ ಆಗಸ್ಟ್ 15, 2023 ರ ಒಳಗಾಗಿ ದೇಸಿ ನಿರ್ಮಿತ ಹೈಡ್ರೋಜನ್ ರೈಲುಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದ್ದಾರೆ.
* ಕಳೆದ ತಿಂಗಳು ಪ್ರಪಂಚದ ಮೊಟ್ಟ ಮೊದಲ ಹೈಡ್ರೋಜನ್ ಆಧಾರಿತ ರೈಲು ಜರ್ಮನಿಯಲ್ಲಿ ಚಾಲನೆಗೊಂಡಿತ್ತು, ಈ ಮೂಲಕ ಭಾರತವು ಮುಂದಿನ ವರ್ಷದಲ್ಲಿ ಹೈಡ್ರೋಜನ್ ರೈಲುಗಳು ಓಡಿಸಲಿದೆ.
* ನೀರಿನಿಂದ ಜಲಜನಕವನ್ನು ಪ್ರತ್ಯೇಕಗೊಳಿಸಿ ಅದನ್ನು ಹೈಡ್ರೋಜನ್ ರೈಲುಗಳಿಗೆ ಇಂಧನವಾಗಿ ಉಪಯೋಗಿಸಬಹುದು. ರೈಲುಗಳಲ್ಲಿರುವ “ಫ್ಯುಯೆಲ್ ಸೆಲ್” ಎನ್ನುವ ಯಂತ್ರವು ಹೈಡ್ರೋಜನ್ ನಿಂದ ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಮೂಲಕ ರೈಲು ಓಡಲು ಅನುಕೂಲ ಮಾಡಿಕೊಡುತ್ತದೆ.
* ಚೆನ್ನೈನ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳನ್ನು ನಿರ್ಮಿಸಲು ಯೋಜಿಸಿದ್ದು, ಇವು ಗಂಟೆಗೆ ಸುಮಾರು 180KM ವೇಗದಲ್ಲಿ ಓಡಲಿವೆ.