KPSC ವು ಅಧಿಸೂಚನೆ ದಿನಾಂಕ: 28-08-2023 ರ ಅಧಿಸೂಚನೆಯಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಕ (CTI) ಪರೀಕ್ಷೆ 2024 ಕಳೆದ ಜನವರಿ 20 ಮತ್ತು 21, 2024 ರಂದು ಯಶಸ್ವಿಯಾಗಿ ನಡೆಸಿತ್ತು, ಈ ನೇಮಕಾತಿಯು ಕಲ್ಯಾಣ ಕರ್ನಾಟಕ 15 ಹುದ್ದೆಗಳಿಗೂ ಹಾಗೂ ಉಳಿದ ಮೂಲ ವೃಂದದ 230 ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯನ್ನು ನಡೆಸಿತ್ತು.
KPSC ವು ಅಧಿಸೂಚಿಸಲಾದ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ದಿನಾಂಕ:04-10-2024 ರಿಂದ 09-10-2024ರ ವರೆಗೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 15 ಹುದ್ದೆಗಳಿಗೆ ದಿನಾಂಕ:04-10-2024ರಂದು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಹಾಗೂ ಇ-ಮೇಲ್ ರವಾನಿಸಲಾಗಿದೆ. ಅಲ್ಲದೇ ಮೂಲ ದಾಖಲೆ ಪರಿಶೀಲನೆಗೆ ನಿಗದಿಪಡಿಸಲಾದ ದಿನಾಂಕ/ಸಮಯವಾರು ಅಭ್ಯರ್ಥಿಗಳ ವೇಳಾ ಪಟ್ಟಿಯನ್ನು ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅದರಂತೆ ಅಭ್ಯರ್ಥಿಗಳು ಹಾಜರಾಗಲು ಈ ಆಯೋಗವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಕೂಡಲೇ ತಮ್ಮ email ಗಳನ್ನೂ ಪರಿಶೀಲಿಸಿಕೊಂಡು ತಮಗೆ ನಿಗದಿಪಡಿಸಿದ ದಿನಾಂಕ ಹಾಗೂ ಸಮಯದಂದು ಎಲ್ಲ ಮೂಲ ದಾಖಲಾತಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗಿ.