* ಅಕ್ಟೋಬರ್ 27 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ವೇತನ (ಒಪ್ಪಂದ) ಸಮಾನವಾಗಿರುತ್ತದೆ ಎಂದು ಮಹತ್ವದ ಘೋಷಣೆ ಮಾಡಿದೆ.
* ಮ್ಯಾಚ್’ನ ವೇತನ ವಿಚಾರದಲ್ಲಿ ಮಹಿಳಾ ಕ್ರಿಕೆಟಿಗರನ್ನು ಪುರುಷ ಕ್ರಿಕೆಟಿಗರಿಗೆ ಸರಿಸಮಾನವಾಗಿ ನೋಡುವ ನಿರ್ಧಾರವು ಕ್ರಾಂತಿಕಾರಿಯಾಗಿದೆ, ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು ಪುರುಷರಿಗೆ ಸಮಾನವಾದ ವೇತನವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.
* ನಮ್ಮ ಒಪ್ಪಂದದ ಮೂಲಕ ಮಹಿಳಾ ಕ್ರಿಕೆಟಿಗರಿಗೆ ವೇತನದಲ್ಲಿ ಸಮಾನತೆಯನ್ನು ತರುತ್ತಿದ್ದೇವೆ, ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಹೋದಂತೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ವೇತನ ಸಮಾನವಾಗಿರುತ್ತದೆ ಎಂದು ಜಯ್ ಶಾ ರವರು ಹೇಳಿದ್ದಾರೆ.
* ಕ್ರಿಕೆಟ್’ನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಮತ್ತು ಪುರುಷ ಕ್ರಿಕೆಟಿಗರಿಗೆ ಸಮಾನವಾದ ವೇತನವನ್ನು ನೀಡಲಾಗುತ್ತದೆ.
– ಟೆಸ್ಟ್ ಪಂದ್ಯಕ್ಕೆ 15 ಲಕ್ಷ
– ಏಕದಿನ ಪಂದ್ಯಕ್ಕೆ 6 ಲಕ್ಷ
– ಟಿ20 ಪಂದ್ಯಕ್ಕೆ 3 ಲಕ್ಷ ರೂ ಅನ್ನು ಮಹಿಳಾ ಕ್ರಿಕೆಟಿಗರಿಗೂ ಪಾವತಿಸುವುದು ನನ್ನ ಬದ್ಧತೆಯಾಗಿದೆ ಮತ್ತು ಅವರನ್ನು ಬೆಂಬಲಿಸಿದಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್’ಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
* ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಹಿಳಾ ರಾಷ್ಟ್ರೀಯ ತಂಡ ಮತ್ತು ದೇಶೀಯ ಮಹಿಳಾ ಆಟಗಾರರು ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಘೋಷಿಸಿತ್ತು.
Subscribe to Updates
Get the latest creative news from FooBar about art, design and business.
Previous Article67 ನೇ ಕರ್ನಾಟಕ ರಾಜ್ಯೋತ್ಸವ : ಬೆಂಗಳೂರಿನಲ್ಲಿ ಕೋಟಿ ಕಂಠ ಗಾಯನ
Next Article ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ – 2022