* ತವಾಂಗ್‌ನಲ್ಲಿ ಚೀನಾ ಸೇನೆ ಗಡಿ ತಂಟೆ ಆರಂಭಿಸಿರುವ ಬೆನ್ನಲ್ಲೇ ಭಾರತ ಅಗ್ನಿ -5 ಕ್ಷಿಪಣಿ ಉಡಾವಣೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾದ ಬಾಲಸೋರ್ ನೆಲೆಯಿಂದ ಈ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ. ಇದು 5 ಸಾವಿರ ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಅಂದರೆ ಚೀನಾ ರಾಜಧಾನಿ ಬೀಜಿಂಗ್ ತಲುಪುವ ಶಕ್ತಿ ಇದಕ್ಕಿದೆ. ಇದನ್ನು ರಾತ್ರಿ ವೇಳೆಯೂ ಉಡಾವಣೆ ಮಾಡಬಹುದಾಗಿದೆ.
* ಕ್ಷಿಪಣಿಯ ತೂಕವನ್ನು ಇಳಿಕೆ ಮಾಡಲಾಗಿದ್ದು, ಹಲವು ಹೊಸ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ. ಕ್ಷಿಪಣಿಯ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವೂ ಇದೆ ಎಂದು ಡಿಆರ್‌ಡಿಒ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಗ್ನಿ ಕ್ಷಿಪಣಿಯ ನಾಲ್ಕು ಅವತರಣಿಕೆಗಳು ಸೇನೆಯಲ್ಲಿವೆ. ಇದು ಐದನೇ ಆವೃತ್ತಿಯಾಗಿದೆ. ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇವುಗಳಲ್ಲಿದೆ. ಈವರೆಗಿನ ಅಗ್ನಿ ಕ್ಷಿಪಣಿಗಳು 700 ಕಿಮೀಯಿಂದ 2500 ಕಿಮೀ ದೂರದ ಗುರಿಯನ್ನು CS ತಲುಪಬಲ್ಲವು. ಈಗ ಈ ವ್ಯಾಪ್ತಿ 5 ಸಾವಿರ ಕಿಮೀಗೆ ಏರಿಕೆಯಾಗಿದೆ.
Subscribe to Updates
Get the latest creative news from FooBar about art, design and business.